SearchBrowseAboutContactDonate
Page Preview
Page 704
Loading...
Download File
Download File
Page Text
________________ ಚಂ| ಚತುರ್ದಶಾಶ್ವಾಸಂ | ೬೯೯ ಪಸದನವಾವುದಾವ ಋತುವಿಂಗಮರ್ದೋಪುಗುಮಾವ ಪೊದಾ ವಸಕದೊಳೊಂದುಗುಂ ವಿನಯಮಾವಡಗಾವುದು ಚೆಲ್ಲುವತ್ತು ರಂ | ಜಿಸುಗುಮದರ್ಕದಂ ಸಮತಿ ನಿಚ್ಚಲುಮಾ ಬಿಯಮಾ ವಿನೋದಮಾ ಪಸದನಮಾ ವಿಳಾಸದೊಳೊಡಂಬಡೆ ಭೋಗಿಸಿದಂ ಗುಣಾರ್ಣವಂ || ೩೮ ಪಸರಿಸಿ ನೀಳ ತನ್ನ ಜಸದೊಳ್ ಪನೊರ್ವನ ಕೀರ್ತಿ ತಳು ರಂ ಜಿಗೆ ನಗಬಾತನೇಂ ನೆಗಲ್ಲನೆಂಬ ಚಲಂ ಮಿಗೆ ತನ್ನ ಹೆಂಪು ತ | ನೈಸಕಮ ತನ್ನ ವಿಕ್ರಮಮ ತನ್ನ ನೆಗಟಿಯ ತನ್ನ ಮಾತ ತಾ ನೆಸೆವ ಜಗತ್ರಯಕೈನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ || ಕಂ|| ಆ ಮಳಯಾಚಳ ಹಿಮಗಿರಿ ಸೀಮಾವನಿತಳಕೆ ಚೆಂಗಿಮಂಡಳದೊಳ್ ಚ | ಊಾವಗಮ ತನಗದೊಂದೂರ್ ನಾಮದೊಳಂ ವೆಂಗಿಪಟು ಕರಂ ಹೊಗಯಿಸುಗುಂ || ಅದುವ ವಸಂತಂ ಕೂಟ್ಯೂ ರೊದವಿದ ನಿಡುಗುಂದಿ ಮಿಕ್ಕ ವಿಕ್ರಮ ಪುರವಂ | ಬುದುಮಗ್ರಹಾರ ಸಂಪ ಸ್ಪದವಿಗಳೊಳಮಗ್ರಗಣ್ಯನೂರ್ಜಿತಪುಣ್ಯಂ || ಕೆಳಗುರುಳಿಸುವುದರಿಂದ ಅರಿಕೇಸರಿಯೂ ಆಗಿ ೩೯. ಯಾವ ಋತುವಿಗೆ ಯಾವ ಅಲಂಕಾರವೊಪ್ಪುವುದು, ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು. ೩೯. ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ ಅವನು ಪ್ರಸಿದ್ದನೆ ಎಂಬ ಛಲವು ಹೆಚ್ಚಾಗಿರಲು ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ದಿ, ತನ್ನ ಮಾತು - ಇವುಗಳೇ ಪ್ರಸಿದ್ದವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು. ೪೦. ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತ ವನ್ನು ಮೇರೆಯಾಗಿ ಉಳ್ಳ ಭೂಭಾಗದಲ್ಲಿ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು. ಅದರಲ್ಲಿ ವೆಂಗಿಪಳು ಎಂಬುದು ವಿಶೇಷವಾಗಿ ಶೋಭಿಸುವುದು. ೪೧. ಆ ವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು ನಿಡುಗುಂದಿ ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು ಶೋಭಾಯಮಾನವಾಗಿವೆ. ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ದಿಯಾಗುತ್ತಿರುವ 45
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy