SearchBrowseAboutContactDonate
Page Preview
Page 7
Loading...
Download File
Download File
Page Text
________________ ೨ | ಪಂಪಭಾರತಂ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಧಿಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮಮತಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳಸಿಕೊಂಡು ಬಂದರು. ಜೈನರು ಕರ್ಣಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ಣಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನು ಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರ ಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮಮತತತ್ವಗಳನ್ನು ಜನಸಾಮಾನ್ಯರಿಗೆ ಬೋಧಿಸತೊಡಗಿದರು. ಕರ್ಣಾಟಕದ ದ್ರಾವಿಡಸಂಸ್ಕೃತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷೆಗಳಿಗೆ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ಣಾಟಕವನ್ನು ಸ್ವಾಧೀನಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಿಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ಧವಾಗಿಲ್ಲ. - ಕರ್ಣಾಟಕ ರಾಜಮನೆತನಗಳಲ್ಲಿ ಕದಂಬ, ಗಂಗ ಮತ್ತು ರಾಷ್ಟ್ರಕೂಟರು ಜೈನಧರ್ಮದ ಪ್ರಭಾವಕ್ಕೆ ಒಳಪಟ್ಟವರು. ಅವರು ಜೈನಗುರುಗಳಿಗೂ ಬಸದಿಗಳಿಗೂ ಅನೇಕ ದತ್ತಿಗಳನ್ನು ಬಿಟ್ಟಿದ್ದಾರೆ. ಅವರ ಪ್ರಭಾವಕ್ಕೆ ಒಳಗಾಗಿ ತಾವೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy