SearchBrowseAboutContactDonate
Page Preview
Page 699
Loading...
Download File
Download File
Page Text
________________ ೬೯೪) ಪಂಪಭಾರತಂ ವli ಅಂತಾತಂ ಪೊಗಟ್ಟು ಮಾಣ್ಣ ನಂತರದೊಳೆತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ ಮತ್ತು ಪರಿಚ್ಛೇದಂಗಳನಳದುಮೊಟ್ಟಜೆಯ ರಾಜಿಯಿಂ ಕಣ್ಣಳಿಂಚರದೊಳಂ ಪೊಂಪುಟವೊಗೆ ಮಂಗಳಪಾಠಕರಿರ್ವರೋಂದೆ ಕೂರಲೊಳಿಂತಂದು ಮಂಗಳವೃತ್ತಂಗಳನೋದಿದರ್ ಶಾll | ರಂಗತ್ತುಂಗತರಂಗಭಂಗುರಲಸದ್ದಂಗಾಜಳಂ ನರ್ಮದಾ ಸಂಗ ಸ್ವಚ್ಛವನಂ ಪ್ರಸಿದ್ಧ ವರದಾ ಪುಣ್ಯಾಂಬು ಗೋದಾವರೀ | ಸಂಗತೂರ್ಜಿತವಾರಿಸಾರ ಯುಮುನಾ ನೀಳೂರ್ಮಿ ನೀರಂ ಭುಜೋ ತುಂಗಂಗೀಗರಿಗಂಗ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೧ ಮll ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂಧ ಸಂ ತತಿ ಶಶ್ವಯ್ಸು ತಪಾರಗ ಶ್ರುತಿ ಮಹೋರ್ಮ್ಯುಲ್ಲಾಸಿವಾರಾಶಿವಾ | ರಿತಧಾತಳಗೀತಿ ನಿರ್ಮಳಯಶಂಗಾರೂಢಸರ್ವಜ್ಞ ಭೂ ಪತಿಗೊಲ್ದಾಗಳುಮಾಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೨ ಸರಸ್ವತಿ ಮತ್ತು ಲಕ್ಷಿಗಳನ್ನೂ ಹಾಗೆಯೇ ಪರಸ್ಪರ ನಾಶಕಾರಿಗಳಾದ ದಯೆ ಮತ್ತು ಶೌರ್ಯಗಳನ್ನೂ ಬಹುಕಾಲವಾದ ಮೇಲೆ ಮೊತ್ತ ಮೊದಲನೆಯ ಸಲ ಅರಿಕೇಸರಿ ರಾಜನಲ್ಲಿ ಮಾತ್ರ ಒಟ್ಟಿಗೆ ನೋಡಬಹುದಾಗಿದೆ. ವ|| ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ ಶಾಸ್ತ್ರವನ್ನು (ವೇದಾಕ್ಷರಗಳನ್ನು ವ್ಯತ್ಯಾಸಮಾಡದೆಯೂ (ಸುಸ್ವರವಾಗಿ) ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ ಕಂಡಂತೆ ಇನಿದಾದ ಸ್ವರಗಳಿಂದ ಕೂಡಿ ರೋಮಾಂಚ ವಾಗುವ ಹಾಗೂ ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ ಮಂಗಳಸ್ತೋತ್ರವನ್ನು ಪಠಿಸಿದರು. ೩೧. ನರ್ತನ ಮಾಡುತ್ತಿರುವ ಅಲೆಗಳಿಂದ ವಿಭಾಗವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ, ಸ್ವಚ್ಛವಾಗಿರುವ ನರ್ಮದಾನದಿಯ ನೀರೂ ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ ಶ್ರೇಷ್ಠವಾದ ಗೋದಾವರಿಯ ನೀರೂ ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ) ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಕೊಡಲಿ. ೩೨. ಸರಸ್ವತಿ ವಚನಗಳೆಂಬ ಅಮೃತವೂ ಪುರಾಣಸಿದ್ಧವೂ ಆದ ಕಥಾಸಮೂಹಗಳೂ ಜಿನಾಗಮಗಳೂ ಜಪ ವೇದ ಸಮೂಹಗಳೂ ಅನಂತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನಗಳೆಂಬ ದೊಡ್ಡ ಅಲೆಗಳಿಂದ ಸಮುದ್ರದಿಂದ ಪರಿವೃತರಾದ ಭೂಮಿಯ ಸಮುದ್ರಗೀತೆಗಳೂ ಇವೆಲ್ಲವೂ ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ ಅರಿಕೇಸರಿ ರಾಜನಿಗೆ (ಅರ್ಜುನನಿಗೆ) ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy