SearchBrowseAboutContactDonate
Page Preview
Page 692
Loading...
Download File
Download File
Page Text
________________ 'ಚತುರ್ದಶಾಶ್ವಾಸಂ | ೬೮೭ ವಆಗಳ್ ನಗರಪ್ರವೇಶಂಗೆಯ್ಯಲೆಂದು ಕಿಳದಾನುಂ ಬೇಗಮಾ ಪುರೋಪವನದೊಳ್ ವಿಶ್ರಮಿಸಿ ಪಂಚರತ್ನಮಯ ಮಂಡನಾಯೋಗಮಂಡಿತವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು ಮಹಾವಿಭೂತಿಯಿಂದಯ್ಯರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆಮ|| ನವಕಾಳಾಗರುಢಪಧೂಮವತಿಸೌಗಂಧಂಗಳಿಂ ಸಯ್ತು ನೀ qು ವಿಯಚ್ಚಕ್ರದೊಳಲ್ಲಿ ಮಂದಮರುತವ್ಯಾಘಾತದಿಂದೆಯೇ ತೋ | ರ್ಪವೊಲಾಗಿರ್ದುದು ಕಣೆ ವಂದುದು ಪುರ ಪಾಂಡುಪುತ್ರಂಗವು ತೃವದಿಂ ಮುನ್ನರಿದಿರ್ದ ತನ್ನ ಪಿಣಿಲಂ ಕೂರ್ತಂದು ಬಿಟ್ಟಂತವೋಲ್ ೧೪ ಮಲ್ಲಿಕಮಾಲೆ 1 ಓಳಿದೋರಣವಾಯ್ತು ಹಾರದ ಪಟ್ಟೆಸಾರದ ಮಾಲೆ ಸೌ ಧಾಳಿಯೊಳುಡಿಯಾಯು ಚೀನದ ಸುಯತಾಣದ ಪಟೆ, ಹ | ರ್ಮ್ಯಾಳಿದಪ್ಪದೆ ರಯ್ಯಮಾಯೆಸೆವಾಟ ಪಾಟದ ಗೀತಿ ಕ ಕ್ಯೋಳಿವಟ್ಟುದದೊಂದು ಚೆಲ್ಲು ದಲಾಯ್ತು ತತ್ತುರಮಧ್ಯದೊಳ್ || ೧೫ ಮಾಲಿನಿ || ಪ್ರವರತರ ಪುರಂಧೀನೂಪುರಾರಾವಮೆತ್ತಂ ಕಿವಿಗೆ ವರ ವಿಳಾಸಂ ಕಕ್ಕೆ ಶೇಪಾಕ್ಷತ್‌ಘ | ದ್ರವಮ ತಮಗಮಿತ್ತತ್ತಿಂಬನೆಂಬನ್ನೆಗಂ ಪಾಂ ಡವರೆ ಪುಗೆ ಪೋಲಿಲ್ಲಂದೊಟ್ಟಿ ಚಿಟ್ಟಾಯ್ತು ರಾಗಂ || ದುಂಬಿಯ ಹಾಡೇ ಜಯಗೀತೆಗಳಾಗಿರಲು ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ ವಸಂತರಾಜನ ವನವು ಪ್ರಕಾಶಮಾನವಾಗಿತ್ತು. ವn ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು ಮಹಾವೈಭವದಿಂದ ಅಯ್ದುಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು. ೧೪. ಹೊಸದಾದ ಕರಿಯ ಅಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ ನೇರವಾಗಿ ಆಕಾಶದಲ್ಲಿ ಉದ್ದವಾಗಿ ಹರಡಿ ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಆಕರ್ಷಕವಾಗುವ ಹಾಗೆ ಆಯಿತು. ಪಟ್ಟಣವೆಂಬ ಹೆಂಗಸು ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ ತನ್ನ ಜಡೆಯನ್ನು ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು. ೧೫. ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳಿಂದ ಕೂಡಿದ ಒಳ್ಳೆಯ ಬಾವುಟಗಳು ಎಲ್ಲ ಉಪ್ಪರಿಗೆಗಳಲ್ಲಿಯೂ ಪ್ರಕಾಶಿಸಿದುವು. ನೃತ್ಯ ಸಂಗೀತ ಹಾಡುಗಳು ಮನೋಹರವಾದುವು. ಅದು ಕಣ್ಣಿಗೆ ಸೌಂದರ್ಯರಾಶಿಯಾಗಿ ಕಂಡಿತು. ೧೬. ಅತಿಶ್ರೇಷ್ಠರಾದ ಅಂತಃಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy