SearchBrowseAboutContactDonate
Page Preview
Page 688
Loading...
Download File
Download File
Page Text
________________ ಚತುರ್ದಶಾಶ್ವಾಸಂ | ೬೮೩ ಚಂl ಸುರಿತ ವರೂಥ ಚಕ್ರ ಹತಿಯಿಂ ಧರಣೀತಳಮಮಿತ್ತಮ ಇರಿಯ ವಿಯತ್ತಳಂ ಬಗೆದು ನೋಡ ನಾಡೆ ಪತತ್ಸತಿ ಜ || ರ್ಝರಿತಮೆ ದಿಕ್ತಟಂ ರಿವು ನರಾಧಿಪ ರಕ್ತ ಧುನೀ ಪ್ರವಾಹ ಪಿಂ ಜರಿತಮೆ ಬೀರಮಂ ಪೋಗಬ್ಬನೇವೊಗಲ್ವಂ ಕದನತ್ರಿಣೇತ್ರನಾ || ೪ ವ|| ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಮೊಂದಾಗಿ ಬರೆ ದುರ್ಯೋಧನನ ಪಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತಾಂತಃಪುರಮುಂ ದುಶ್ಯಾಸನ ಲಕಣ ಭೂರಿಶ್ರವಸ್ಟೋಮದತ್ತ ಭಗದತ್ತ ಬಾಹೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರು ತಮ್ಮ ಗಂಡರ ಕೊಳುಗುಳದೊಳುಸಿ ಕಾಣದೆ ಬಾಯಟಿದು ಪಳಯಿಸುತ್ತುಂ ಯೂಧಪತಿ ಕಡೆಯ ದೆಸೆದಪ್ಪಿದ ವನಕರಿಕರೇಣುಗಳುಮನಡರ್ಪಿಲ್ಲದೆ ಕಲ್ಪವೃಕ್ಷಮುಡಿದು ಕಡೆಯ ಬಂಬಲ ಬಾಡಿದ ವನಲತೆಗಳುಮಂ ಪೋಲುಚಂil ಇಳಿವ ಪಿಯಲ್ ತೆರಳೊಳೆವ ಕಣ್ಣನಿ ಮಾಣದೆ ಮೋದೆ ಶೋಕದ ಚಿಳೆದವೂರಿರ್ದ ಬಾಸುವಿನೊಳಟ್ಟು ಕನು ಬಬಿಲ್ಲು ಜೋಲ್ಲ ಮೆಯ್ | ಮಲಗುವ ಬೇಗದೊಳೊಗಮಣಂ ದೆಸೆಗಾಣದ ನೋಟಮಾರುಮಂ ಮುಗಿಸಿ ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ | ೫ ವ|| ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಮೆಅಗಿ ಪೊಡೆವಟ್ಟು ಅರ್ಜುನನ ಯುದ್ಧರಂಗವು ಪಿಶಾಚಿಗಳ ಆವಾಸಸ್ಥಾನವಾಗಿದೆ. ೪. ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ. ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ. ದಿಗ್ಯಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ. ಅರ್ಜುನನ ಪ್ರತಾಪವನ್ನು ವರ್ಣಿಸುವುದು ಹೇಗೆ ? ಸಾಧ್ಯ. ವ|| ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬಂದರು. ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ ಗಟ್ಟಿಯಾಗಿ ಅಳುತ್ತಾ ಸಲಗನು ಕೆಡೆಯಲು ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ ಕಾಡುಬಳ್ಳಿಗಳನ್ನೂ ಹೋಲುತ್ತಾ ೫. ಸಡಿಲವಾಗಿರುವ ಜಡೆ, ಪ್ರವಾಹವಾಗಿ ಸುರಿಯುವ ಕಣ್ಣೀರು, ಬಿಡದೆ ಹೊಡೆದುಕೊಳ್ಳುತ್ತಿರಲು ದುಃಖದ ಅಚ್ಚಿಟ್ಟಹಾಗೆ ಇದ್ದ ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ, ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆ (ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ) ನೋಟ ಇವು ಯಾರನ್ನಾದರೂ ದುಃಖಿಸುವಂತೆ ಮಾಡಲು ಶತ್ರುರಾಜರ ರಾಣಿಯರು ಕರುಣೆಯೇ ಮೂರ್ತಿಮತ್ತಾಗಿ ಬಂದಂತೆ ಅಲ್ಲಿಗೆ ಬಂದರು. ವ|| ಆಗ ಧರ್ಮರಾಜನು 44
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy