SearchBrowseAboutContactDonate
Page Preview
Page 686
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೮೧ ವ|| ಎಂಬುದುಮಶ್ವತ್ಥಾಮನಂತೆಂಬುದೇನನೆ ದುರ್ಯೋಧನನೆಂದಂ ಪಾಂಡವರ ತಲೆಗಳಲಮಿವು ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಮಿದರ್ಕೆ ಕರ್ತವ್ಯವಾವುದೆಂದೊಡೆ ಹಿಮವತ್ಸರ್ವತದೊಳ್ ತಪಶ್ಚರಣಪರಾಯಣರಾಗಿ ಮನಗಮಂತ್ಯಕಾಲವೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯನಾಗಳಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರಿತ್ತ ಕೃತವರ್ಮನುಂ ದ್ವಾರಾವತಿಗೆ ಪೋದನಾಗಳ್ಪಿರಿಯಕ್ಕರ |ಬಿಳಿಯ ತಾವರೆಯಸಲೊಳ್ ಮಾಡಿದ ಬೆಳ್ಳೂಡ ರಯ್ಯಮಾಗಡದ ಕೆಯ್ಯೋಳ್ * ಪೊಳೆವ ಚೆಂಬೊನ್ನ ಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ ಬಚಿಯೊಳ ಜವಂ ಮಿಳಿರೆ ರಾಜಚಿಹ್ನಂಗಳೊರಸಿಂತು ನಡೆತಂದು ರಾಜ್ಯಲಕ್ಷ್ಮಿ ಬಳದ ಸಂತೋಷದಂತಮನೆಯ ಹತ್ತಿದಳ ಸಹಜಮನೋಜನಂ ನಾಡೋಜನಂ | ೧೦೮ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತನ್ನ ಪ್ರಸನ್ನಗಂಭೀರವಚನರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ತ್ರಯೋದಶಾಶ್ವಾಸಂ ವ|| ಅಶ್ವತ್ಥಾಮನು ಹಾಗೆಂದರೇನು? ಎನ್ನಲು ದುರ್ಯೋಧನನು ಹೀಗೆ ಹೇಳಿದನು. “ಇವು ಪಾಂಡವರ ತಲೆಗಳಲ್ಲ, ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ; ಹಿಮವತ್ಪರ್ವತದಲ್ಲಿ ತಪಸ್ಸು ಮಾಡುವುದರಲ್ಲಿ ಆಸಕ್ತರಾಗಿ', ನನಗೂ ಅಂತ್ಯಕಾಲವು ಬಂದಿದೆ' ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು. ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು. ೧೦೮. ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಚಲಿಸುತ್ತಿರಲು ರಾಜ್ಯಚಿಹ್ನೆಗಳೊಡಗೂಡಿ ಅಬಿವೃದ್ದಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು. ವ! ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿಮೂರನೆಯ ಆಶ್ವಾಸವು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy