SearchBrowseAboutContactDonate
Page Preview
Page 676
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೭೧ ಮll ಬಿಸುಡಿನ್ನಪೊಡಮೇವಮಂ ಧರಣಿಯಂ ಪಚ್ಚಾಶ್ವಮೇನಪ್ಪುದೀ ಕಿಸುರೊಳ್ ಕೆಮ್ಮನೆ ಪಾಪಕರ್ಮ ಚಲಮಂ ಕೊಂಡಾಡದೆಮ್ಮಯ್ಯರುಂ | ಬೆಸಕೆಯ್ಯುತ್ತಿರೆ ನೀನೆ ಮೇಣರಸುಗೆಮ್ ಸೋದರ್ಯದಿಂದೊಳ್ಳಿತೇ ವಸುಧಾಮಂಡಳವಿಂಬುಕೆಯ್ಯುದಿದನಾರಿ ಕೆಯೊಡ್ಡಿದೆಂ ಬೇಡಿದಂ || ೮೫ ವ|| ಎಂಬುದುಮಂಬುಜೋದರನಿಂತೆಂದಂ ಅನವದ್ಯ 11 ಅಝಟವಾಡದೂಳಯ್ಯರುಮಂ ನೀಂ ಕೂರ್ತಿರಿಸೆಂದೊಡಮೆಂತುಮೇ ಗೆಯುಮದೊಲ್ಲದ ಕಾರಣದಿಂದ ನೋಡಿನಿತಾದುದು ನಿನ್ನೊಳೇಂ | ಸಯ್ಡವನಲ್ಲನೆ ಧರ್ಮತನೂಜಂ ಪೇಟ್ಟುದನಿನ್ನಮಗಿಂಬುಕೆಯ್ ಸಯ್ಯನೆ ಆಗುಣಿದಾರೊಳಮೇವಂಗೊಳ್ಳದಿರಿಂ ಫಣಿಕೇತನಾ | , ೮೬ ವ|| ಎಂಬುದುಮಾ ಮಾತಂ ಕೆಳಗಿವಿಗೆಯು ತನ್ನ ಗದಾದಂಡಮಂ ಭುಜಾ ದಂಡದೊಳಳವಡಿಸಿ ನೋಡಿ ದುರ್ಯೋಧನನಿಂತೆಂದಂ ಕಂ|| ಮುನ್ನಿಮ್ಮ ಪೇಟ್ಟು ಗೆಯ್ಯದ ನಿನ್ನೀ ಪದದಲ್ಲಿ ಪೇಟ್ಟು ಗೆಲ್ವಂತುಂತೇಂ | ಪನ್ನಗಪತಾಕನನೆ | ಬಿನ್ನಣವಡೆಮಾತನನ್ನೊಳಿಂ ನುಡಿಯದಿರಿಂ || ೮೫. ದುರ್ಯೊಧನ ಇನ್ನು ಮೇಲಾದರೂ ಕೋಪವನ್ನು ಬಿಸಾಡು, ಭೂಮಿಯನ್ನು ಭಾಗಮಾಡಿ ಆಳೋಣ. ಈ ದ್ವೇಷದಿಂದ ಏನು ಪ್ರಯೋಜನ? ನಿಷ್ಟ್ರಯೋಜನವಾಗಿ ಪಾಪಕರ್ಮವಾದ ಹಟವನ್ನು ಆಶ್ರಯಿಸದೆ ನಾವು ಅಯ್ದು ಜನವೂ ನಿನಗೆ ಸೇವೆ ಮಾಡುವ ಹಾಗೆ ನೀನೇ ರಾಜ್ಯಭಾರಮಾಡು, ಸಹೋದರಬಾಂಧವ್ಯಕ್ಕಿಂತ ಈ ಭೂಮಂಡಲ ಮೇಲಾದುದೇ? ಇದನ್ನು ಅಂಗೀಕರಿಸು. ನಾನು ಕೈಯೊಡ್ಡಿ ಬೇಡಿದ್ದೇನೆ”. ವ|| ಕಮಲನಾಭನಾದ ಕೃಷ್ಣನು ಹೀಗೆಂದನು - ೮೬. ಅಯ್ತು (ಸಾಮಾನ್ಯವಾದ) ಹಳ್ಳಿಗಳಲ್ಲಿ ಅಯ್ದು ಜನವನ್ನು ನೀನು ಪ್ರೀತಿಯಿಂದ ಇರಿಸು ಎಂದು ಹೇಳಿದರೂ ಹೇಗೊ ಏನು ಮಾಡಿಯೂ ಅದಕ್ಕೆ ಒಪ್ಪದ ಕಾರಣದಿಂದ ಇಷ್ಟಾಯಿತು ನೋಡು. ನಿನ್ನಲ್ಲಿ ಧರ್ಮರಾಜನು ನೇರವಾಗಿ ಸ್ನೇಹದಿಂದ ನಡೆದುಕೊಂಡಿದ್ದಾನೆ. ಧರ್ಮರಾಯನು ಹೇಳಿದುದನ್ನು ಇನ್ನು ನಮಗಾಗಿ ಅಂಗೀಕಾರ ಮಾಡು; ದುರ್ಯೋಧನ, ಸ್ನೇಹಿತನಾದವನಾಗಿಯೇ ಉಳಿ; ಯಾರಲ್ಲಿಯೂ ಕೋಪಿಸಿಕೊಳ್ಳಬೇಡ. ವ|| ಎನ್ನಲು ಆ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಗದಾದಂಡವನ್ನು ಭುಜಾದಂಡದಲ್ಲಿ ಸೇರಿಸಿಕೊಂಡು ನೋಡಿ ದುರ್ಯೋಧನನು ಹೀಗೆ ಹೇಳಿದನು. ೮೭. ಮೊದಲು ನೀವು ಹೇಳಿದ್ದನ್ನು ಮಾಡದವನು ಇನ್ನು ಈ ಸಂದರ್ಭದಲ್ಲಿ ನೀವು ಹೇಳಿದುದನ್ನು ಮಾಡುವುದಕ್ಕೆ ನಾನು (ಅಭಿಮಾನಧನನಾದ) ದುರ್ಯೊಧನನಲ್ಲವೆ? ವೃಥಾ ಬಿನ್ನಣದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy