SearchBrowseAboutContactDonate
Page Preview
Page 672
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೬೭ ವll ಎಂಬುದುಂ ಜಳಧರಸಮಯನಿಶಾಸ೦ಚಲಿತವಿದ್ಯುತಿಂಗಳಾಕ್ಷಪಾತಗಳಿಂ ದೆಸೆಗಳು ನುಂಗುವಂತ ಮುಳಿದು ನೋಡಿ ಜರಾಸಂಧಸಂಧಿಬಂಧವಿಘಟನನಿಂತೆಂದಂ ಮll ಕಡಲಂ ಪೊಕೊಡ ಪೀರ್ದಪಂ ಕಡಲನಾ ಪಾತಾಳಮಂ ಪೊಕ್ಕನ ಪೊಡೆ ಶೇಷಾಹಿಯ ಪಲ್ಗಳಂ ಮುಳದಪಂ ಬ್ರಹ್ಮಾಂಡಮಂ ಪೊಕ್ಕನ | ಪೊಡಮಾ ಬ್ರಹ್ಮನ ಗಂಟಲಂ ಮುಳದಪಂ ದುರ್ಯೋಧನಂಗಿಂ ಪುಗ ಲೈಡ –ಭೂಭುವನಂಗಳಿಂ ಪೊಂಗೆ ಮತ್ತಲ್ಲಿತ್ತೊ ಬಾಣಾಂತಕಾ | ೭೬ ವ|| ಎಂಬನ್ನೆಗಂ ವೃಕೋದರನಟ್ಟಿದ ಕಿರಾತು ವಿಂಧ್ಯಕನೆಂಬಂ ಬಂದು ದುರ್ಯೋಧನನ ನೆಲ್ಲಿಯುಮಳಿಸಿ ಕಾಣದೆ ವೈಶಂಪಾಯನಸರೋವರಕ್ಕೆ ನೀರ್ಗುಡಿಯಲೆಂದು ಪೋಗಿ ಕೊಳದ ತಡಿಯೊಳ್ ಹಳಕುಳಿಶಶಂಖಚಕ್ರಲಾಂಛಿತಮಪ್ಪಡಿವಜ್ಜೆಯಂ ಕಂಡು ಬಂದನೆಂದು ಪೇಳ್ವುದುಮಂಬುಜನಾಭನವನ ಮಾತಿನೊಳ್ ಯುಕ್ತಿಯುಂಟೆಂತೆಂದೊಡಮರನದೀ ನಂದನೋಪದೇಶದಿಂದಾತಂ ಕೊಳನಂ ಪೊಕ್ಕು ಕಾಲವಂಚನೆಗೆಯ್ಯಲಿರ್ದನಕ್ಕುಮೆಂದಾ ಕೊಳನಂ ಮುಟ್ಟೆವಂದದಲ ತಡಿಯೋ ಶಂಖಚಕ್ರಹಳಕುಳಿಶಲಾಂಛಿತಮಾಗಿರ್ದಡಿವಜ್ಜೆಯಂ ನೋಡಿ ದುರ್ಯೋಧನನ ಪಜ್ಜೆಯಪ್ಪುದೇನುಂ ತಪ್ಪಿಲ್ಲೆಂದು ಕಳಕಳನಿನಾದಂಗಳಿಂದಾರ್ದು ಶಂಖಂಗಳಂ ಸಾಧ್ಯವಾಗುವುದಿಲ್ಲ. ಆ ಕಾರಣದಿಂದಲೇ ಧೃತರಾಷ್ಟ್ರನ ಮಗನಾದ ದುರ್ಯೋಧನನು ಮರೆಯಾಗಿ ಉಳಿದಿದ್ದಾನೆ. ಅಲ್ಲದಿದ್ದರೆ ಹಾಗೆ ರಣರಂಗದಲ್ಲಿ ತಲೆಯನ್ನು ಮರೆಸಿಕೊಳ್ಳುತ್ತಿದ್ದನೆ? ವ|| ಎನ್ನಲು ವರ್ಷಾಕಾಲದ ರಾತ್ರಿಯಲ್ಲಿ ನಡುಗಿಸುತ್ತಿರುವ ಮಿಂಚಿನಂತೆ ಹೊಂಬಣ್ಣದಂತಿರುವ ತನ್ನ ಕಣ್ಣುಗಳ ನೋಟದಿಂದ ದಿಕ್ಕುಗಳನ್ನೆಲ್ಲ ನುಂಗುವಂತೆ ಕೋಪಿಸಿಕೊಂಡು ಜರಾಸಂಧನ ಕೀಲುಕಟ್ಟುಗಳನ್ನು ಸಡಿಲಿಸಿದವನಾದ ಭೀಮಸೇನನು ೭೬. ದುರ್ಯೋಧನನು ಸಮುದ್ರವನ್ನು ಪ್ರವೇಶಮಾಡಿದರೆ ಆ ಸಮುದ್ರವನ್ನೇ ಕುಡಿದು ಹಾಕುತ್ತೇನೆ. ಆ ಪಾತಾಳವನ್ನು ಹೊಕ್ಕನಾದರೆ ಆದಿಶೇಷನ ಹಲ್ಲುಗಳನ್ನು ಮುರಿಯುತ್ತೇನೆ. ಬ್ರಹ್ಮಾಂಡವನ್ನು ಹೊಕ್ಕನಾದರೂ ಆ ಬ್ರಹ್ಮನ ಗಂಟಲನ್ನೂ ಮುರಿಯುತ್ತೇನೆ. ಕೃಷ್ಣಾ, ದುರ್ಯೊಧನನಿಗೆ ಇನ್ನು ಪ್ರವೇಶಮಾಡುವುದಕ್ಕೆ ಮೂರುಲೋಕಗಳಿಂದ ಹೊರಗೆ ಸ್ಥಳವೆಲ್ಲಿದೆ? ವ|| ಎನ್ನುವಷ್ಟರಲ್ಲಿ ಭೀಮನು ಕಳುಹಿಸಿದ ಬೇಡನಾದ ವಿಂಧ್ಯಕನೆಂಬುವನು ಬಂದು ದುರ್ಯೋಧನನನ್ನು ಎಲ್ಲಿ ಹುಡುಕಿದರೂ ಕಾಣದೆ ವೈಶಂಪಾಯನಸರೋವರಕ್ಕೆ ನೀರು ಕುಡಿಯಬೇಕೆಂದು ಹೋದೆವು. ಕೊಳದ ದಡದಲ್ಲಿ ನೇಗಿಲು, ವಜ್ರ, ಶಂಖ, ಚಕ್ರ ಇವುಗಳ ಗುರುತನ್ನುಳ್ಳ ಹೆಜ್ಜೆಯನ್ನು ಕಂಡುಬಂದೆನೆಂದು ಹೇಳಿದನು. ಕೃಷ್ಣನು ಅವನ ಮಾತಿನಲ್ಲಿ ಯುಕ್ತಿಯುಂಟು, ಹೀಗಂದರೆ ಭೀಷ್ಮನ ಉಪದೇಶದಿಂದವನು ಸರೋವರವನ್ನು ಪ್ರವೇಶಿಸಿ ಕಾಲವಂಚನೆಯನ್ನು ಮಾಡಬೇಕೆಂದಿರಬಹುದು ಎಂದನು. ಕೊಳದ ಸಮೀಪಕ್ಕೆ ಬಂದು ಅದರ ದಡದಲ್ಲಿ ಶಂಖ ಚಕ್ರ ನೇಗಿಲು ವಜ್ರ ಇವುಗಳ ಗುರುತಿನಿಂದ ಕೂಡಿದ್ದ ಕಾಲಿನ ಹೆಜ್ಜೆಯನ್ನು ನೋಡಿ ದುರ್ಯೊಧನನ ಹೆಜ್ಜೆಯೇ ಆಗಿದೆ. * 43
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy