SearchBrowseAboutContactDonate
Page Preview
Page 67
Loading...
Download File
Download File
Page Text
________________ ೬೨ | ಪಂಪಭಾರತಂ ಸವಿಯನ್ನುಂಡಿರಬೇಕು. ಆದುದರಿಂದಲೇ ಅವನೆಲ್ಲಿದ್ದರೂ ಅದರ ನೆನಪು ಬಂದೇ ಬರುತ್ತದೆ. ಅದಕ್ಕಾಗಿಯೇ ಅವನು ಇಂದ್ರಪ್ರಸ್ಥಪುರದಿಂದ ದೇಶಾಟನೆಗೆ ಹೊರಟುಬಂದ ಅರ್ಜುನನ ಬಾಯಲ್ಲಿ ಅದರ ಮೇಲೆಯನ್ನು ಹಾಡಿಸಿರುವುದು. ಅಲ್ಲಿರುವವರೆಲ್ಲರೂ 'ಚಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ, ಅಲಂಪಿನ, ಇಂಪುಗಳೆ, ಆಗರವಾದ ಮಾನಿಸರೆ. ಅಲ್ಲಿಯ 'ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲ್ ಬಂದಿಂಪ ತಗುಲ್ಲೊಂದು ಗೇಯಮುಂ ಆದ ಅಕ್ಕರಗೊಟ್ಟಿಯುಂ ಚದುರದ, ಒಳ್ವಾತುಂ ಕುಳಿ‌ ಕೋಟ್ಟಿ ಜೊಂಪಮುಂ' ಎಂತಹವರನ್ನೂ ಆಕರ್ಷಿಸುತ್ತದೆ. ಆದುದರಿಂದಲೇ ತೆಂಕಣ ಗಾಳಿ ಸೋಂಕಿದೊಡಂ, ಒಳ್ಳುಡಿಗೇಳ್ಕೊಡಂ ಇಂಪನಾಳ ಗೇ ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಂ, ಆದ ಕೆಂದಲಂ ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಂ ಏನನೆಂಬೆನ್ ಆ ರಂಕುಸಮಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ || ಎಂದು ಪಂಪನು ಹಾತೊರೆಯುತ್ತಿರುವುದು. ಪಂಪನ ದೇಶವಾತ್ಸಲ್ಯದ ಪರಾಕಾಷ್ಠೆ ಇಲ್ಲಿ ಬಹು ಸ್ಪಷ್ಟವಾಗಿ ಎದ್ದು ಕಾಣುತ್ತದೆ. * ಪಂಪನು ಅರಿಕೇಸರಿಯನ್ನು ಕಥಾನಾಯಕನನ್ನಾಗಿ ಮಾಡಿರುವುದೂ ದೇಶಾಭಿಮಾನದಿಂದಲೇ ಕನ್ನಡನಾಡಿನ ವೀರರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕಾಗಿಯೇ, ಖಾಂಡವದಹನಪ್ರಕರಣದಲ್ಲಿ ಪಂಪನು ಅರಿಕೇಸರಿಯ ಸತ್ಯಸಂಧತೆಯನ್ನು ವ್ಯಕ್ತಗೊಳಿಸುವ ಮುಂದಿನ ಎರಡು ಪದ್ಯಗಳನ್ನು ಕೊಟ್ಟಿದ್ದಾನೆ. ಎರದನ ಪೆಂಪು ಪೇಡನಲಂ, ಪೊಣರ್ವಾತನ ಹೆಂಪು ಪೇಡಾ ಸುರಪತಿ, ಕೊಟ್ಟ ತಾಣದಡೆ ಪೇಡಂ , ಆ ಯಮುನಾನದೀತಟಾಂ ತರಂ ಒಸೆದಿತ್ಯನಾನ್ ಎಲಿಯೆ ಕೇಳೆನ್, ಇಳಾಧರ ನೀನ್ ಇದರ್ಕೆ ಮಾ ತೆರಡಣಮಾಡಲಾಗದು, ಇದು ಸೈಪಿನೊಳಲ್ಲದೆ ಕೂಡಿ ಬರ್ಕುಮೇ ? ಒತ್ತಿ ತುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ ತದೆ ಬಂದು ತನ್ನ ಮಜವೊಕೊಡೆ ಕಾಯದೆ ಚಾಗದೋಳಿನ ಚೈತ್ರದೆ ಮಾಣು ಬಾ ಪುಲುಮಾನಸನೆಂಬನ್, ಅಜಾಂಡಮೆಂಬುದೊಂ ದತ್ತಿಯ ಪಣೋಳಿರ್ಪ ಪುಟುವಲ್ಲದೆ ಮಾನಸನೇ ಮುರಾಂತಕಾ || ಈ ಪದ್ಯಗಳನ್ನು ಬರೆಯುತ್ತಿರುವಾಗ ಪಂಪನ ಆದರ್ಶರಾಜನ ಚಿತ್ರ ಹೇಗಿದ್ದಿರಬೇಕು? ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಈ ಪಂಪನ ವಾಗ್ವಿಲಾಸವನ್ನು - ಹೋಲುವ ಕವೀಂದ್ರರಾರಿದ್ದಾರೆ? ಆದುದರಿಂದಲೇ ಪಂಪನು ನಾಡೋಜನಾದುದು. ಆದುದರಿಂದಲೇ ಅವನ ಕಾವ್ಯಗಳು ಮುನ್ನಿನ ಕಾವ್ಯಗಳನ್ನು ಇಕ್ಕಿ ಮೆಟ್ಟಿದುದು. ಒಟ್ಟಿನಲ್ಲಿ 'ಪಂಪನ ಕವಿತಾಧೋರಣೆಯು ಅಸಾಮಾನ್ಯವಾದುದು. ಈತನ ನವೀನ ಕಲ್ಪನೆಗಳ ಪ್ರಾವೀಣ್ಯತೆಯೂ ರಸಾನುಗುಣವಾಗಿ ವಸ್ತುವನ್ನು (ಕಥಾಶರೀರವನ್ನು ರಚಿಸುವ ಮತ್ತು ವಸ್ತುವಿಗೆ ತಕ್ಕಂತೆ ರಸವನ್ನು ಹಿಳಿದು ಬೆರೆಯಿಸುವ ಕೌಶಲವೂ ರಸಕ್ಕೆ ತಕ್ಕಂತೆ ಛಂದಸ್ಸನ್ನು ಯೋಜಿಸುವ ಪ್ರೌಢಿಮೆಯೂ, ಕಾವ್ಯದ ಒಟ್ಟು ಮೆಯ್ಯ ಅಂದವು ಸ್ವಲ್ಪವೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy