SearchBrowseAboutContactDonate
Page Preview
Page 647
Loading...
Download File
Download File
Page Text
________________ ೬೪೨ / ಪಂಪಭಾರತಂ ಮ|| ಸ || ನರನಂ ಮುಂ ಕೊಲ್ವೆನಾಂ ಕರ್ಣನನಡೆದುದಂ ಕೊಲ್ವೆನಾ ಭೀಮನಂ ಸಂ ಗರದೊಳ್ ಸೀಳ್ಕೊಟ್ಟ ದುಶ್ಚಾಸನನುಲನದಂ ನೀಗುವಂ ಪೋಕುಮಂತಿ | ರ್ವರುಮಂ ಕೊಂದಂದು ಮಣಾನವರಿದಿರಿದಿರೊಳ್ ಕಾದಿ ಸತ್ತಂದು ಮೇಣ್ ವಿ ಸುರಿತಂ ಮಪಮುಂ ನಿಮ್ಮಡಿಯುಮನಿದ ಬೀಳ್ಕೊಂಡೆನಿಂ ಪೋಗಿ ಮಟೆಂ || ೨೦ ವ|| ಎಂದು ತಾಯ್ತಂ ತಂದೆಗಮೆಗಿ ಪೊಡವಟ್ಟು ಪೋಗಲ್ವೇಟ್ಟು ಸಂಸಾರಾಸಾರತೆಯ ನಡೆದನುಂ ಮಹಾಸನುಮಪುದಂ ತನ್ನಂ ತಾನೆ ಸಂತೈಸಿಯುಂ ಚೇತರಿಸಿಯುಂ ಮಜ್ಜನ ಭೋಜನಾನುಲೇಪನ ತಾಂಬೂಲಾದಿಗಳೊಳ್ ಮಹಾಹವ ಖೇದಮುಮಂ ಮನಃಖೇದಮುಮ ನಾಟಿಸಿ ಮಂತ್ರಶಾಲಾಂತಸ್ಥಿತ ಕನಕವಿಷ್ಟರಾರೂಢನಾಗಿ ಶಲ್ಕ ಶಕುನಿ ಕೃಪ ಕೃತವರ್ಮಾಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ ಯಥೋಚಿತಪ್ರತಿಪತ್ತಿಗಳೊಳಿರಿಸಿ ಪೇಟೆಮಿನ್ನೆಮಗೆಯ್ಯ ನಿಯೋಗಮೇನೆನೆ ಶಾರಸ್ವತನಿಂತೆಂದಂ eroll ಸಂಗತ ನೀತಿಶಾಸ್ತ್ರವಿದರಪ್ಪರವಂದಿರ ತಮ್ಮ ತಮ್ಮ ಕ ಜ್ವಂಗಳ ಮಕ್ಕಳೊಳ್ ಪುಸಿದದಂ ಕಡುನನ್ನಿಯ ಮಾಡಿ ತೋರ್ಪರು | ತುಂಗ ಸುಸೂಕ್ಷ ಪಾರ್ಶ್ವಕೃಶ ಕೋಮಳ ನಿಮ್ಮ ಘನೋನ್ನತ ಪ್ರದೇ ಶಂಗಳನಾ ಸಮಾನತಳದಲ್ಲಿಯೇ ಚಿತ್ರಕನೆಯ ತೋರ್ಪವೋಲ್ || ೨೧ ಅಕ್ಷರ ತಪ್ಪುತ್ತದೆಯೇ ಏನು ? ೨೦. ಕರ್ಣನನ್ನು ಸಾಯಿಸಿದುದರಿಂದ ಅರ್ಜುನನನ್ನು ಮೊದಲು ಕೊಲ್ಲುತ್ತೇನೆ. ಆ ಭೀಮನನ್ನು ಯುದ್ಧದಲ್ಲಿ ಸೀಳಿ ರಾಶಿ ಹಾಕಿ ದುಶ್ಯಾಸನನ ದುಃಖವನ್ನು ಪರಿಹಾರಮಾಡಿಕೊಳ್ಳುತ್ತೇನೆ. ಹಾಗೆ ಅವರಿಬ್ಬರನ್ನು ಕೊಂದ ದಿನ ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ. ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿ ಏಳಿ. ವ! ಎಂದು ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು, ಸ್ನಾನ, ಊಟ, ಗಂಧ, ತಾಂಬೂಲ ಮೊದಲಾದವುಗಳಿಂದ ಮಹಾಯುದ್ಧದ ಆಯಾಸವನ್ನೂ ಮನಸ್ಸಿನ ದುಃಖವನ್ನೂ ಹೋಗಲಾಡಿಸಿಕೊಂಡನು. ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು ಶಲ್ಯ, ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರೇ ಮೊದಲಾದ ಮುಖ್ಯ ವೀರಪುರುಷರನ್ನು ಬರಮಾಡಿ ಯಥೋಚಿತವಾದ ಸತ್ಕಾರಗಳನ್ನು ಮಾಡಿ 'ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ' ಎನ್ನಲು ಕೃಪನು ಹೀಗೆಂದು ಹೇಳಿದನು. ೨೧. ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ ಚೆನ್ನಾಗಿ ನೀತಿಶಾಸ್ತ್ರವನ್ನು ತಿಳಿದವರು ತಮ್ಮ ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾದುದನ್ನೂ ಪೂರ್ಣ ಸತ್ಯವನ್ನಾಗಿಯೇ ಮಾಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy