SearchBrowseAboutContactDonate
Page Preview
Page 641
Loading...
Download File
Download File
Page Text
________________ ಕ೦ll ತ್ರಯೋದಶಾಶ್ವಾಸಂ .. ಶ್ರೀ ದಯಿತನ ಹರಿಗನ ಸಂ ಪಾದಿತ ಭುಜವೀರ್ಯಮಹಂ ತನಗೆರ್ದಯೊಳ್ | ಚೋದಿಸೆ ಪರಸಿದನಾಶೀ ರ್ವಾದಪರಂಪರೆಯಿನಾಗಳಂತಕತನಯಂ || ಪರಸಿ ಸಕಳಾವನೀತಳ ಭರಮಿನಸುತನದಿಯ ಹರಿಗನಿಂದನಗೀಗಲ್ | ದೊರೆಕೊಂಡುದೆಂದೂಡೇ ಬಿ. ತರಿಸಿದನೋ ರಿಪುಕುರಂಗಕಂಠೀರವನಂ | ವ|| ಅನ್ನೆಗಮ ದುರ್ಯೋಧನನ ಸಂಭ್ರಮಾಕುಳಿತ ಪರೀತ ಪರಿವಾರಜನೋಪವೀತ ಚಂದನಕರ್ಪೂರಮಿಶ್ರಿತ ಹಿಮಶಿಶಿರಧಾರಾಪರಿಷೇಕದಿಂದೆಂತಾನುಂ ಮೂರ್ಛಯಿಂದತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮ ಸೈರಿಸಲಾಗಿದೆ~ ಉ|| ನೀನುಮಗಲ್ಲೆಯಿನ್ನನಗೆ ಪೇಯ್ ಪೆರಾರೆನಗಾಸೆ ನಿನ್ನನಿ ನಾನುಮಗನೇ ಕಳೆಯ ಬೆನ್ನನೆ ಬಂದಪೆನಾಂತರಂ ಯಮ | ಸ್ಥಾನಮನೆಬ್ಬಿಸುತ್ತಿದುವೆ ದಂದುಗಮಂತರ್ದಮುಟ್ಟಿ ಕೂರ್ತು ಪೇಯ್ ಮಾನಸವಾಲನಂಗವಿಷಯಾಧಿಪ ನೀಂ ಪೊಅಗಾಗೆ ಬಾಳ್ವನೇ || ೩ ೧. ಜಯಲಕ್ಷ್ಮೀಪತಿಯಾದ ಅರ್ಜುನನು ಸಂಪಾದಿಸಿದ ಭುಜವೀರ್ಯವು ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ಧರ್ಮರಾಯನು ಆಗ ಅವನನ್ನು ಹರಕೆಯ ಪರಂಪರೆಯಿಂದ ಆಶೀರ್ವದಿಸಿದನು. ೨. ಅರ್ಜುನನಿಂದ ಕರ್ಣನು ಸಾಯಲು ಸಮಸ್ತ ಭೂಮಂಡಲದ ಆಧಿಪತ್ಯವು ತನಗೆ ಈಗ ದೊರೆಕೊಂಡಿತಂದು ಹೇಳಿ ಧರ್ಮರಾಯನು ಅರ್ಜುನನನ್ನು ವಿಶೇಷವಾಗಿ ಹೊಗಳಿದನು! ವ|ಅಷ್ಟರಲ್ಲಿ ಆ ಕಡೆ ದುರ್ಯೊಧನನು ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ ಸೇವಕಜನರಿಂದ ತರಲ್ಪಟ್ಟ ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ಮೂರ್ಛಿಯಿಂದ ಎಚ್ಚೆತ್ತನು. ಕರ್ಣನನ್ನು ಜ್ಞಾಪಿಸಿಕೊಂಡು ನೆನೆಸಿದ ಮಾತ್ರಕ್ಕೆ ದುಃಖಸಮುದ್ರವು ದಡವನ್ನು ಮೀರಿ ಉಕ್ಕಲು ಸೈರಿಸಲಾರದೆ ೩. ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ ? ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ, ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy