SearchBrowseAboutContactDonate
Page Preview
Page 639
Loading...
Download File
Download File
Page Text
________________ ೬೩೪ (ಪಂಪಭಾರತಂ ಚಂಗ ಒದವಿದಲಂಪು ಕಣ್ಣೆವೆ ಕರುಳ ತನಗೆಂಬುದನುಂಟುಮಾಡೆ ನೋ ಡಿದುದ ಕಳಮೆವಡುತ್ತಿರೆ ಪೋ ಪಸವೋಡಿತಂದು ನೀ | ರದಪಥದೊಳ್ ತಗುಳರಿಗನಂ ಪೊಗಾಡಿದನಂದು ದಂಡಕಾ ಪ್ರದ ತುದಿಯೊಳ್ ಪಳಂಚಲೆಯೆ ಕೇವಣವಂ ಗುಡಿಗಟ್ಟ ನಾರದಂ | ೨೧೯ ವ || ಆಗಳ್ಕಂ| ಪಬಯಿಗೆಯನುಡುಗಿ ರಥಮಂ ಪಂವನನೆಸಗಿವೇಚ್ಚು ಸುತಶೋಕದ ಪೊಂ | ಪುಟಿಯೊಳ್ ಮಯ್ಯಲಿಯದೆ ನೀ ರಿತಿವಂತವೊಲಿಟಿದನಪರಜಳಧಿಗೆ ದಿನಪು ! ೨೨೦ ವ|| ಆಗಳ್ ಕರ್ಣನ ಬಳೆವಣಿಯನೆ ತನ್ನ ಪೋಪುದನಭಿನಯಿಸುವಂತ ಶೋಕೊದ್ರೇಕದೊಳ್ ಮಯ್ಯಲಿಯದ ಕನಕರಥದೊಳ್ ಮಯ್ಯನೀಡಾಡಿ ನಾಡಾಡಿಯಲ್ಲದೆ ಮೂರ್ಛವೋದ ದುರ್ಯೋಧನನನಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕೊಡಗೊಂಡು ಪೋದರಾಗಲ್ ಚಂ ಸುರಿವಜರಪ್ರಸೂನರಜದಿಂ ಕವಿಲಾದ ಶಿರೋರುಹಂ ರಜಂ ಬೋರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರೋ | ಇರಕೆಯನಾಂತು ಕರ್ಣಹತಿಯೋಳ್ ತನಗಣನೀಯ ಬಂದನಂ ದರಮನೆಗಚ್ಚುತಂಬೆರಸಳುರ್ಕೆಯಿನಮ್ಮನ ಗಂಧವಾರಣಂ | ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ದವಾದವು. ೨೧೯. ಕರ್ಣಾರ್ಜುನರ ಕಾಳಗವನ್ನು ನೋಡುವುದರಿಂದ ನನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ಬಹಳ ಕಾಲದಿಂದ ನೋಡಬೇಕೆಂದಿದ್ದ ನನ್ನ ಕ್ಷಾಮವೂ ತೊಲಗಿತು, ಕರುಳಿಗೆ ಆನಂದವೂ ಉಂಟಾಯಿತು ಎಂದು ಆಕಾಶದಲ್ಲಿ ಅರ್ಜುನನನ್ನು ಹೊಗಳುತ್ತ ತನ್ನ ದಂಡದಂತಿರುವ ಕೋಲಿನ ತುದಿಗೆ ಕೋಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು ಕುಣಿದಾಡಿದನು. ವ|| ಆಗ ೨೨೦. ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು. (ಆಸ್ತಮಯವಾದನು) ವ|| ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ ದುಃಖದ ಆಧಿಕ್ಯದಿಂದ ಜ್ಞಾನಶೂನ್ಯನಾಗಿ ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛ ಹೋಗಿದ್ದ ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ ೨೨೧. ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ ಕಪಿಲಬಣ್ಣವಾದ ಕೂದಲು, ಪರಾಗದಿಂದ ಮುಚ್ಚಲ್ಪಟ್ಟ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy