SearchBrowseAboutContactDonate
Page Preview
Page 633
Loading...
Download File
Download File
Page Text
________________ ೬೨೮ | ಪಂಪಭಾರತ ಒಳಗಳಿಯದೆ ಕೌರವಬಳ ಜಳನಿಧಿ ಬೊಬ್ಬಿಟಿದು ಮೇಲುದಂ ಬೀಸಿದೊಡು | ಚಳಿಸಿದ ಮಕುಟದ ಮಣಿಗಳ ಪೊಳಪುಗಳಿಂದುಳಮೆಟ್ಟುವೆಂಟುಂ ದೆಸೆಯೊಳ್ || ವ|| ಅಂತು ರುಂದ್ರನೀಳಾಧೀಂದ್ರ ರತ್ನಕೂಟಾಗ್ರಮುದಗ್ರ ವಜಘಾತದಿಂದುರುಳ್ಳಂತ ರತ್ನಮಕುಟಮರಾತಿಶಾತಶರದಿನುರುಳ್ಳುದುಮಳಿನೀಳೊಜ್ಜಳ ಸಹಸ್ರಕುಂತಳಂಗಲ್ ಪರಕಲಿಸಿ ಬಂದು ಪೊಆಮುಯ್ಯನಳ್ಳಿಯ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನಗಂಚಂti ಪುರಿಗಣೆಯ ಕಾರಣದಿನಂತದು ತಪ್ಪಿದೆನೆಂದು ನೊಂದು ಪ . ತೊರೆದಹಿ ರೂಪದಿಂ ಮಗುಟ್ಟು ಬಂದಿನನಂದನನಲ್ಲಿಗೆನ್ನನಂ | ತರಿಸದೆ ತೊಟ್ಟು ಬೇಗಮಿಸು ವೈರಿಯನೀಗಳೆ ಕೊಂದಪಂ ರಸಾಂ ಬರ ಧರಣೀವಿಭಾಗದೊಳಗಾವಡೆವೊಕ್ಕೊಡಮಂಗನಾಯಕಾ || ೨೦೩ ವ|| ಎಂಬುದುಂ ನೀನಾರ್ಗನೆಂಬೆಯದಾವುದು ಕಾರಣದಿಂದಮನ್ನ ದೊಣೆಯ ಪೊಕಿರ್ದಯೆಂದೊಡಾನಶ್ವಸೇನನೆಂಬ ಪನ್ನಗನನೆಂದು ತನ್ನ ವೈರ ಕಾರಣನಟಿಯ ಬೇಡ ದರಹಸಿತವದನಾರವಿಂದನಾಗಿ- , ಕಂ|| ಶರರೂಪದೊಳಿರೆ ನಿನ್ನಂ ಶರಮಂದಾಂ ತೊಟ್ಟಿನಳೆದು ತುಡುವೆನೆ ನಿನ್ನಂ | ನೆರದೊಳೆ ಕೊಲ್ವಂತನಗೇ ನರಿಯನೆ ಗಾಂಡೀವಧನ್ವನೆಂಬುದುಮಾಗಳ್ || ೨೦೨. ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಕಾಪಾತಗಳು ಎದ್ದುವು. ವ! ಹಾಗೆ ವಿಸ್ತಾರವೂ ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನ ವಾಗಿರುವ ಕೂದಲುಗಳು ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ದವಾಗುವಷ್ಟರಲ್ಲಿ ೨೦೩.ದಿವ್ಯಾಸ್ತವಾದ (ಪುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನೆಂದು ವ್ಯಥೆಪಟ್ಟು ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನಃ ಕರ್ಣನ ಹತ್ತಿರಕ್ಕೆ ಬಂದು 'ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು; ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ' ಎಂದಿತು. ವ|| 'ನೀನು ಯಾರು? ನಿನ್ನ ಹೆಸರೇನು? ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಪ್ರವೇಶಿಸಿದ್ದೆ' ಎನ್ನಲು 'ನಾವು ಅಶ್ವಸೇನನೆಂಬ ಹಾವು' ಎಂದು ತಿಳಿಸಿ ತನ್ನ ವೈರಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ ೨೦೪. 'ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy