SearchBrowseAboutContactDonate
Page Preview
Page 628
Loading...
Download File
Download File
Page Text
________________ ದ್ವಾದಶಾಶ್ವಾಸಂ | ೬೨೩ ಚಂ|| ಬಿದಿ ವಸದಿಂದ ಹುಟ್ಟುವುದು ಪುಟ್ಟಸುವಂ ಬಿದಿ ಪುಟ್ಟಿದಂದಿವಂ ಗಿದು ಬಿಯಮೊಳ್ಳಿವಂಗಿದು ವಿನೋದಮಿವಂಗಿದು ಸಾವ ಪಾಂಗಿವಂ | ಗಿದು ಪಡೆಮಾತಿವಂಗಿದು ಪರಾಕ್ರಮವೆಂಬುದನೆಲ್ಲ ಮಾಳಿಯಿಂ ಬಿದಿ ಸಮಕಟ್ಟಿ ಕೊಟ್ಟೂಡೆಡೆಯೊಳ್ ಕಿಡಿಸಲ್ ಕುಡಿಸಲ ಸಮರ್ಥರಾರ್|| ೧೮೨ ಕ೦ll | ಎಂದೀ ಬಾಯ್ತಾತಿನೊಳೇ ವಂದಪುದಮ್ಮಣ್ಣಿ ಕಾದುಕೊಳೆನುತುಂ ಭೋಂ | ರಂದಿಸಿ ಪೊಸ ಮಸೆಯಂಬಿನ ತಂದಲ ಬೆಳ್ಳರಿಗಳಿರದೆ ಕವಿದುವು ನರನಂ | ೧೮೩ ದೊಣೆಗಳಿನುರ್ಚುವ ತಿರುವಾ ದ್ರೋಣರ್ಚಿ ತೆಗೆನೆವ ಬೇಗಮಂ ಕಾಣದೆ ಕೂ | ರ್ಗಹಗಳ ಪಂದರನ ನಭೋಂ ಗಣದೊಳ್ ಕಂಡು ದೇವಗಣಮಿನಸುತನಾ 10 ಪಾತಂ ಲಕ್ಷಂ ಶೀಘಂ ಫಾತಂ ಬಹುವೇಗಮೆಂಬಿವಯೇಸಿನೊಳಂ | ತೀತನ ದೊರೆಯಿಲ್ಲೆನಿಸಿದು * ದಾತನ ಬಿಲ್ಟಲೆ ಸುರರಿನಂಬರತಲದೊಳ್ || ೧೮೫ ವ|| ಆಗಳ ಪರಸೈನ್ಯಭೈರವಂ ಪ್ರಳಯಭೈರವಾಕಾರಮಂ ಕೆಯೊಂಡು ಕಾದ- . .೧೮೪ ನುಡಿಯುತ್ತಿದ್ದೀಯೆ. ೧೮೨. (ಮನುಷ್ಯನು) ಹುಟ್ಟುವುದು ವಿಧಿಯ ವಶದಿಂದ; ಹುಟ್ಟಿಸುವವನೂ ವಿಧಿಯೇ; ಹುಟ್ಟಿದಾಗ ಇವನಿಗಿದು ಸಂಪತ್ತು, ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ, ಇವನಿಗೆ ಇದು ಸಾಯುವ ರೀತಿ, ಇವನಿಗಿದು ಪ್ರಸಿದ್ದಿ, ಇವನಿಗಿದು ಪರಾಕ್ರಮ ಎಂಬುದನ್ನು ಎಲ್ಲ ರೀತಿಯಲ್ಲಿಯೂ ವಿಧಿ ನಿಷ್ಕರ್ಷಿಸಿಕೊಟ್ಟಿರುವಾಗ ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು? ೧೮೩. ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ? ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ ರಭಸದಿಂದ ಹೊಡೆದನು. ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯೂ ಜಡಿಮಳೆಯೂ ಅರ್ಜುನನನ್ನು ಮುಚ್ಚಿದುವು. ೧೮೪. ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ, ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು. ೧೮೫. ಪಾತ (ಬೀಳಿಸುವುದು) ಲಕ್ಷ್ಯ (ಗುರಿಯಿಡುವುದು) ಶೀಘ್ರ (ವೇಗದಿಂದ ಹೊಡೆಯುವುದು) ಘಾತ (ಘಟ್ಟಿಸುವುದು) ಬಹುವೇಗ (ಅತ್ಯಂತವೇಗ) ಎಂಬ ಈ ಅಯ್ಡು ರೀತಿಯ ಬಾಣಪ್ರಯೋಗಗಳಲ್ಲಿಯೂ ಈತನಿಗೆ ಸಮಾನರಿಲ್ಲ ಎನ್ನಿಸಿತು ಆತನ ಬಿಲ್ವಿದ್ಯೆಯ ಶ್ರೇಷ್ಠತೆ, ಆಕಾಶದಲ್ಲಿರುವ ದೇವತೆಗಳಿಂದ ವll ಆಗ ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy