SearchBrowseAboutContactDonate
Page Preview
Page 620
Loading...
Download File
Download File
Page Text
________________ ಕಂ ದ್ವಾದಶಾಶ್ವಾಸಂ | ೬೧೫ ನೆತ್ತಿಯೊಳೆಯದೆಂದಿನಿಸ ಯೊತ್ತಿ ಬಟೆಕ್ಕಿದೆಯೆ ಪೊಸೆದು ಜಡೆಗೊಂಡಿರ್ದು | ದ್ವತ ಕುಚಯುಗೆಯ ಕೇಶಮ ನೆತ್ತಂ ಪಸರಿಸಿದನೆಯೇ ಪಸರಿಸಿದದಟಂ || ಪಸರಿಸಿ ಪಂದಲೆಯಂ ಮ ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ ಒಸಗೆಯನವನ ಕರುಳಳೆ ಪೊಸವಾಸಿಗಮಾಗೆ ಕೃಷ್ಣಯಂ ಮುಡಿಯಿಸಿದಂ || ೧೫೪ ೧೫೫ ವ|| ಅಂತು ತನ್ನ ಪಗೆಯುಂ ಬಗೆಯುಮೊಡನೊಡನೆ ಮುಡಿಯೆ ರಿಪು ವಿಪುಳ ರುಧಿರ ಜಲಂಗಳೊಳಂ ರುಚಿರ ತದೀಯಾಂತ್ರಮಾಲೆಯನೆ ಮಾಲೆಮಾಡಿ ಮುಡಿಯಿಸಿ ಕೃಷ್ಣಯ ಮೊಗಮಂ ನೋಡಿ ಮುಗುಳಗೆ ನಕ್ಕು ಕೌರವಕುಳವಿಳಯಕೇತುವಿಂತೆಂದಂ ವ|| || ಇದರೊಳ್ ಶ್ವೇತಾತಪತಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ ಪುದಿದಾಡಿತ್ತಡಂಗಿತ್ತಿದಳೆ ಕುರುರಾಜಾನ್ವಯಂ ಮತತಾಪ | ಕ್ಕಿದಳೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತ ಬದಳಾಕ್ಷೀ ಪೇಟೆ ಸಾಮಾನ್ಯಮ ಬಗೆಯ ಭವತೇಶಪಾಶಪ್ರಪಂಚಂ || ೧೫೬ ತಳ್ಳಿ ಮನಸ್ಸಿನಲ್ಲಿ ಅಸಹ್ಯಪಟ್ಟುಕೊಳ್ಳದೆ ಬೊಗಸೆಯಿಂದ ಭೀಮನು ರಕ್ತವನ್ನು ವಿಶೇಷವಾಗಿ ಮೊಗೆಮೊಗೆದು ೧೫೪, ದೌಪದಿಯ ತಲೆಯಮೇಲೆ ಸುರಿದನು. ಒಂದಿಷ್ಟು ತಲೆಗಿಳಿಯುವಂತೆ ತಟ್ಟಿದನು. ಬಳಿಕ ಕೆಳಕ್ಕೆ ಇಳಿಯಲು ಹೊಸೆದು ಜಡೆಯಾಗಿದ್ದ - ನಿಗರಿನಿಂತಿದ್ದ ಎರಡು ಮೊಳಗಳನ್ನುಳ್ಳ ದೌಪದಿಯ ಕೂದಲನ್ನು ಭೀಮನು ರಕ್ತದಿಂದ ನೆನೆಸಿ ತನ್ನ ಪರಾಕ್ರಮದಿಂದ ಬಿಡಿಸಿದನು. ೧೫೫. ದುಶ್ಯಾಸನನ ರಕ್ತದಿಂದ ತೊಯ್ದಿದ್ದ ಅವಳ ತಲೆಯ ಸಿಕ್ಕನ್ನು ಬಿಡಿಸಿ ಅವಳ ಕಾಲಿನಿಂದ ಅವನನ್ನು ತುಳಿಯಿಸಿ ವೈರಿಯ ಹಲ್ಲೆಂಬ ಬಾಚಣಿಗೆಯಿಂದ ಬಾಚಿ ಹೆಚ್ಚಿನ ಸಂತೋಷದಿಂದ ಅವನ ಹೊಸಕರುಳುಗಳೇ ಹೊಸ ಹೂವಿನ ದಂಡೆಯಾಗಲು ಬ್ರೌಪದಿಗೆ ತಾನೆ ಮುಡಿಸಿದನು. ವ|| ಹಾಗೆ ತನ್ನ ಶತ್ರುವೂ ಇಷ್ಟಾರ್ಥವೂ ಜೊತೆಯಾಗಿ (ಒಟ್ಟಿಗೆ) ತೀರಲು ವೈರಿಯ ವಿಶೇಷವಾದ ರಕ್ತದಿಂದಲೂ ಅವನ ಮನೋಹರವಾದ ಕರುಳ ದಂಡೆಯಿಂದಲೂ ದಂಡೆಯನ್ನೇ ಮಾಡಿ ದೌಪದಿಗೆ ಮುಡಿಯಿಸಿ ಅವಳ ಮುಖವನ್ನು ನೋಡಿ ಮುಗುಳಗೆ ನಕ್ಕು ಕೌರವಕುಲವಿಳಯಕೇತುವಾದ ಭೀಮನು ಹೀಗೆಂದನು. ೧೫೬. “ಈ ಮುಡಿಯಲ್ಲಿಯೇ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು, ಕುರುರಾಜವಂಶವು ಇದರಲ್ಲಿ ಅಡಗಿಹೋಯಿತು, ನನ್ನ ಶೌರ್ಯಕ್ಕೆ ಇದರಿಂದ ಗೌರವವು (ಭಯವು ಹೆಚ್ಚಾಯಿತು. ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳ ದೌಪದಿಯೇ ವಿಚಾರಮಾಡಿದರೆ ನಿನ್ನ ತಲೆಯ ಕುರುಳೋಳಿಯು ಸಾಮಾನ್ಯವಾದುದೇ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy