SearchBrowseAboutContactDonate
Page Preview
Page 618
Loading...
Download File
Download File
Page Text
________________ " ಮ|| ಸುರಿಗಿಳವ ತಲದಿನೂರೂ ರ್ವರನಿಖೆ ನಡೆ ನಟ್ಟ ಕೋಲ ಬಲೆವಿಡಿದತ್ತಂ | ಸುರಿದುವವಂದಿರ ಮುಳಿಸಿನ ದ್ವಾದಶಾಶ್ವಾಸಂ | ೬೧೩ ತರಳ ದಳ್ಳುರಿಯನಿಟೆಸಿ ನವರುಧಿರಂಗಳ್ || ೧೪೮ ವ|| ಅಂತು ನಿಜನಿಶಿತಮಾರ್ಗಣಂಗಳಿಂದಮಂಬು ತಪ್ಪ ಜಟ್ಟಿಗ ಬಿಲ್ಲಾಳಂತೆಚ್ಚು ಪಾಲ್ವರಾತಿಯ ಮೆಯ್ಕ ನೆತ್ತರಂ ಕಂಡು ಸೂಸಿನೊಳಿವನ ನೆತ್ತರೊಡಂ ತನಗೆ ಬಸಿಯಾ ಕುಡಿಯಲುಂ ದೌಪದಿಯ ಕೇಶಪಾಶಮಂ ತೊಯ್ದು ಮುಡಿಯಲುಂ ನೆನೆಯದೆಂದು ಕಂ ಅವನಂ ಬಂಚಿಸಿ ಗದೆಗೊಂ ಡವನ ವರೂಥಮನೆ ತಿಣ್ಣಮಿಳ್ಕೊಡ ಗದಗೊಂ | ಡವನೆಯರ ರಥದಿಂದಿತೆ ದವನಿಯೊಳವನುಮನುರುಳಿದಂ ಪವನಸುತಂ || ೧೪೯ ಬಳೆ ನುರ್ಗುತ್ತಿರ ಮೆಟ್ಟಿ ಗಂಟಲನಿಂ ದುಶ್ಯಾಸನಂ ಭೀಮನಿಂ ಬಳ ಸಂಪನ್ನನವುಂಕಿ ಕೊಂದಪನಿದಂ ಮಾರ್ಕೊಳ್ಳ ಬಲ್ಲಾಳಸುಂ | ಗೊಳೆ ಬಾಳೆತ್ತಿದನೇಕ ಕಣ್ಣ ಮಿಡುಕೊ ಪಿಂಗಾಕ್ಷ ನೀನೇಕೆ ಮಿ ಆಳ ನೋಡುತ್ತುಳನಿರ್ದೆಯೆಂದದಟರಂ ಭೀಮಂ ಪಳಂಚಲ್ವಿದಂ || ೧೫೦ ಸೇರುವಿಕೆಯಿಂದಲೂ ಮರ್ಮವನ್ನೇ ರಹಸ್ಯವಾದುದನ್ನೇ ಮೂದಲಿಸುತ್ತ ಒಬ್ಬೊಬ್ಬರೂ ಮರ್ಮಸ್ಥಳವನ್ನೇ ಗುರಿಮಾಡಿ ಹೊಡೆದರು. ೧೪೮. ಕೈಗತ್ತಿಯಿಂದ ಹೊಡೆದಾಡುವಂತೆ ಒಬ್ಬನು ಮತ್ತೊಬ್ಬನನ್ನು ಹೊಡೆಯಲು ಚೆನ್ನಾಗಿ ನಾಟಿಕೊಂಡ ಭಾಣದ ದಾರಿಯನ್ನೇ ಅನುಸರಿಸಿ ಹೊಸರಕ್ತವು ಅವರುಗಳ ಕೋಪದ ಒಟ್ಟುಗೂಡಿಸಿದ ದಳ್ಳುರಿಯನ್ನೂ ತಿರಸ್ಕರಿಸುತ್ತ ಎಲ್ಲಕಡೆಯಲ್ಲಿಯೂ ಸುರಿಯಿತು. ವ|| ಭೀಮನು ಹರಿತವಾದ ಬಾಣಗಳಿಂದ ಆ ಬಾಣಗಳು ಮುಗಿದು ಹೋಗುವವರೆಗೂ ಶೂರನಾದ ಬಿಲ್ಲಾಳಿನಂತೆ ಹೊಡೆದು ದುಶ್ಯಾಸನನ ಮೆಯಿಂದ ಹರಿದುಬರುತ್ತಿರುವ ರಕ್ತವನ್ನು ನೋಡಿ ಈ ಸರದಿಯ ಪೆಟ್ಟಿನಿಂದಲೇ ಇವನ ರಕ್ತವು ಸುರಿದುಹೋದರೆ ಮುಂದೆ ಅದು ತನ್ನ ಹೊಟ್ಟೆಯು ತೃಪ್ತಿಯಾಗುವ ಹಾಗೆ ಕುಡಿಯುವುದಕ್ಕೂ ದೌಪದಿಯ ಕೂದಲಿನರಾಶಿಯನ್ನು ಒದ್ದೆಮಾಡಿ ಮುಡಿಸುವುದಕ್ಕೂ ಸಾಲದೇ ಹೋಗಬಹುದು ಎಂದು ೧೪೯. ಅವನನ್ನು ವಂಚಿಸಿ ಗದೆಯನ್ನು ತೆಗೆದುಕೊಂಡು ಅವನ ತೇರನ್ನು ತೀಕ್ಷವಾಗಿ ಹೊಡೆದನು. ಅವನು ಗದೆಯನ್ನು ತೆಗೆದುಕೊಂಡು ಬರಲು ಭೀಮನು ರಥದಿಂದಿಳಿದು ಅವನನ್ನು ಭೂಮಿಯಲ್ಲಿ ಉರುಳಿಸಿದನು. ೧೫೦. ಗಂಟಲಬಳೆಗಳು ಜಜ್ಜಿಹೋಗುವ ಹಾಗೆ ಕಾಲಿನಿಂದ ಮೆಟ್ಟಿ ತುಳಿದು ಇವನು ದುಶ್ಯಾಸನ, ಭೀಮನಿಗಿಂತ ಬಲಶಾಲಿಯಾದವನು, ಇವನನ್ನು ಅಮುಕಿ ಕೊಂದು ಹಾಕುತ್ತೇನೆ, ಇದನ್ನು ಪ್ರತಿಭಟಿಸುವ ಶೂರರ ಪ್ರಾಣಾಪಹಾರಮಾಡಲು ಕತ್ತಿಯನ್ನೆತ್ತಿದ್ದೇನೆ, ದುರ್ಯೋಧನ! ಯಾತಕ್ಕೋಸ್ಕರ ನೀನು ಕಣ್ಣನ್ನು ಮಿಟುಕಿಸುವುದಿಲ್ಲ? ಏತಕ್ಕೆ ಮಿಳಮಿಳನೆ ನೋಡುತ್ತ ಒಳಗೇ ಇದ್ದೀಯೆ ಎಂದು ಭೀಮನು ಶೂರರನ್ನು ಪ್ರತಿಭಟಿಸಿ ಆರ್ಭಟಿಸಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy