SearchBrowseAboutContactDonate
Page Preview
Page 607
Loading...
Download File
Download File
Page Text
________________ ೬೦೨) ಪಂಪಭಾರತಂ ಕಂಠೀರವನಂ ಮಾರ್ಕೊಂಡು ಕಾದುತ್ತಿರ್ದರನ್ನೆಗಮಿತ್ತ ಕರ್ಣನುವುದೀರ್ಣವೀರ ರಸಾಸ್ವಾದನಲಂಪಟನಾಗಿ ನೀಮೆಲ್ಲಮಿಂದನ್ನ ಕಾಳಗಮಂ ಸುರಿಗೆಗಾಳೆಗಮಂ ನೋಟ್ಟಂತೆ ನೋಟ್ಟುದೆಂದು ಕೌರವಬಲದ ನಾಯಕರೆಲ್ಲರುಮನೊಡ್ಡಿ ಪಾಂಡವಬಲಕ್ಕೆ ಮೀು ಬರ್ಪಂತ ಬಂದು ತಾಗಿದಾಗಳ್ ತನಗಿದಿರೊಳದಿರದಾಂತ ಸೋಮಕ ಶ್ರೀಜಯ ಪ್ರಮುಖ ಕೋಸಲಾಧೀಶ ಸೈನಂಗಳನಲ್ಲಕಲ್ಲೋಲ ಮಾಡಿ ಪಸರಣಿಕೆಯ ನಾಯಕರನಲುವತ್ತು ಸಾಸಿರ್ವರನೊರ್ವನಂ ಕೊಲ್ವಂತೆ ಕೊಂದು ನಿಟ್ಟಾಲಿಗೊಂಡು ಯುಧಿಷ್ಠಿರನಂ ಮುಟ್ಟೆವಂದಾಗಳ್ಚಂಗಿ ಯಮಸುತನ ಸತ್ತೆಯನುತುಂ ನಿಶಿತಾಸ್ತಮನುರ್ಚಿಕೊಂಡು ವ | ಕ್ಷಮನಿರದೆಚ್ಚಡಚ್ಚ ಶರಮಂ ಕಲಿ ಚಕ್ಕನೆ ಕಿತ್ತುರಪ್ರದೇ || ಶಮನಿಸಿ ನೆತ್ತರೊಕ್ಕು ಪತಿ ಮುಚ್ಚೆಯೊಳಿಚ್ಚಿಯೆಗೆಟ್ಟು ಜೋಲ್ಗೊಡಾ ದಮೆ ನಸುನೊಂದು ನಂದಿಸದೆ ತನ್ನನೆ ನಿಂದಿಸಿದಂ ದಿನೇಶಂ || ೧೧೭ ವ|| ಅಂತು ಕೊಂತಿಗೆ ನಾಲ್ವರೊಳಾರುಮಂ ಕೊಲ್ಲೆನೆಂದು ನುಡಿದ ತನ್ನ ನನ್ನಿಗೆ ಬನಂ ಬಂದಪದಂದು ಕರ್ಣಂ ಚಿಂತಿಸುತಿರ್ದನಿತಲರಸನಂ ಪಃಗಿ ನಕುಳಸಹದೇವರಿರ್ವರುಂ ಬಂದಾಂತೊಡಿವರನೇಗೆಯ್ದುದೆಂದು ಕರುಣಿಸಿ ಶಲ್ಯನ ಮನಮಂ ನೋಡಲೆಂದು ಬೆಸಗೊಂಡೊಡ ತನ್ನಳಿಯಂದಿರ ಸಾವಿಂಗಾಜದ ಶಲ್ಯನಿಂತೆಂದಂ ಕೊಂದಹಾಗೆ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಕೊಲ್ಲಲು ಉಳಿದ ನಾಯಕರೆಲ್ಲ ತಮ್ಮಯಜಮಾನನ ಸಾವನ್ನು ನೋಡಿ ಶತ್ರುಗಳೆಂಬ ಜಿಂಕೆಗಳಿಗೆ ಸಿಂಹದ ಹಾಗಿರುವ ಅರ್ಜುನನನ್ನು ಎದುರಿಸಿ ಯುದ್ದಮಾಡುತ್ತಿದ್ದರು. ಅಷ್ಟರಲ್ಲಿ ಈ ಕಡೆ ಕರ್ಣನು ಹೆಚ್ಚುತ್ತಿರುವ ವೀರರಸವನ್ನು ರುಚಿನೋಡುವುದರಲ್ಲಿ ಆಸಕ್ತನಾಗಿ ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು ಸಣ್ಣ ಕತ್ತಿಯ ದ್ವಂದ್ವಯುದ್ದವನ್ನು ನೋಡುವ ಹಾಗೆ ನೋಡುವುದು ಎಂದು ಕೌರವಸೈನ್ಯದ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ಪಾಂಡವ ಸೈನ್ಯದ ಮೃತ್ಯು ಬರುವ ಹಾಗೆ ಬಂದು ತಾಗಿದನು. ತನ್ನ ಎದುರಿಗೆ ಭಯಪಡದೆ ಪ್ರತಿಭಟಿಸಿದ ಸೋಮಕ ಶ್ರೀಜಯರೇ ಮುಖ್ಯರಾದ ಕೋಸಲದೇಶದ ರಾಜರುಗಳ ಸೈನ್ಯವನ್ನೆಲ್ಲ ಕಲಕಿಹಾಕಿದನು. ಹೆಸರಿನಿಂದಲೇ ಪ್ರಸಿದ್ದರಾದ ಅರವತ್ತುಸಾವಿರ ನಾಯಕರನ್ನು ಒಬ್ಬನನ್ನು ಕೊಲ್ಲುವ ಹಾಗೆ (ಅಶ್ರಮವಾಗಿ) ಕೊಂದು ದೀರ್ಘವಾಗಿ ದಿಟ್ಟಿಸಿನೋಡಿ ಧರ್ಮರಾಯನನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದನು. ೧೧೭. ಧರ್ಮರಾಜನು (ಕರ್ಣನನ್ನು ಕುರಿತು) ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು ತಡೆಯದೆ ಎದೆಗೆ ಹೊಡೆದನು. ಹೊಡೆದ ಆ ಬಾಣವನ್ನು ಶೂರನಾದ ಕರ್ಣನು ಚಕ್ಕನೆ ಕಿತ್ತುಹಾಕಿ ಧರ್ಮರಾಜನ ಹೃದಯ ಪ್ರವೇಶವನ್ನು ಹೊಡೆಯಲಾಗಿ ರಕ್ತವು ಸುರಿದು ಧರ್ಮರಾಜನು ಮೂರ್ಛಯಲ್ಲಿ ಮರೆತು ಜ್ಞಾನಶೂನ್ಯನಾಗಿ ಜೋತುಬೀಳಲು ಕರ್ಣನು ಸ್ವಲ್ಪ ವ್ಯಥೆಪಟ್ಟು ಪೂರ್ಣವಾಗಿ ಕೊಲ್ಲದೆ ತನ್ನನ್ನೇ ತಾನು ನಿಂದಿಸಿಕೊಂಡನು -ವಗ ಕುಂತೀದೇವಿಗೆ ನಾಲ್ಕು ಜನರಲ್ಲಿ ಯಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದ ತನ್ನ ಸತ್ಯವಾಕ್ಕಿಗೆ ಭಂಗವುಂಟಾಗುತ್ತೆಂದು ಕರ್ಣನು ಯೋಚಿಸುತ್ತಿದ್ದನು. ಈ ಕಡೆ ಧರ್ಮರಾಜನನ್ನು ಹಿಂದಕ್ಕೆ ಹಾಕಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy