SearchBrowseAboutContactDonate
Page Preview
Page 605
Loading...
Download File
Download File
Page Text
________________ ೬೦೦/ಪಂಪಭಾರತಂ ವ|| ಅಂತೊಡ್ಡಿದೊಡ್ಡನೆರಡುಂ ಬಲದ ನಾಯಕರುಂ ತಮ್ಮ ಕೋಪಾಗ್ನಿಗಳನೆ ಬೀಸುವಂತೆ ಕೆಯ್ದಿಸಿದಾಗಳ್ ಚಂ।। ಕರದಸಿಗಳ್ ಪಳಂಚೆ ಕಿಡಿವಿಗೆದೊಟ್ಟಿಡಿ ತಾರಕಾಳಿಯಂ ತಿರೆ ರಜಮೊಡ್ಡಿನಿಂದ ಮುಗಿಲಂತಿರೆ ಬಾಳುಡಿ ಪಾಲವುಳ್ಳದಂ | ತಿರೆ ತಡವಾದುದಂಬರದೊಳಂಬರಮಂಬಿನೆಗಂ ಜಗತ್ರಯಂ ಬರಮೆಸೆವಂತು ತಳಿಯೆದುವಂದೆರಡುಂ ಬಲಮುಗ್ರಕೋಪದಿಂ || 000 ವll ಅನ್ನೆಗಂ ದುರ್ಯೊಧನಂಗಾಪರಪ್ಪ ಸಂಸಕರತಿರಥಮಥನನ ರಥಮಂ ತಮ್ಮತ ತೆಗೆಯಲೊಡಮವರ ರಥಕ್ಕೆ ಮದಾಂಧ ಗಂಧಸಿಂಧುರದಂತಮ್ಮನ ಗಂಧವಾರಣಂ ಪರಿದು ಚಂ|| ಪತಿಪಡದಾಯ್ತು ಭಾರತಮಿವಂದಿರ ಕಾರಣದಿಂದಿವಂದಿರಂ ಪತಿಪಡೆ ಕೊಂದು ಕರ್ಣನೂಳೆ ಕಾದಲೆವೇದ್ಯಮಮೋಘವೆಂದು ಕಂ | ಗಳಗಳ ಪಾರೆಯಂಬುಗಳೊಳೂ ಕುತ್ತಿಗೆ ಬಿಟ್ಟರೆಯ ಪ ರ್ದೆಡೆಗೆ ಸುರುಳು ಬೀಟ್ಟ ಕಿರುವವೊಲುಗ್ರ ವಿರೋಧಿನಾಯಕರ್ || ೧೧೨ ಧ್ವಂಸಮಾಡಿದವನೂ ಕೃಷ್ಣನ ಸ್ನೇಹಿತನೂ ಎತ್ತರವಾದ ಹೆಗಲನ್ನುಳ್ಳವನೂ ವಿದ್ವಾಂಸರೆಂಬ ಸರೋವರಕ್ಕೆ ರಾಜಹಂಸದಂತಿರುವವನೂ ಆದ ಅರ್ಜುನನು ಹಂಸವ್ಯೂಹವನ್ನು ಒಡ್ಡಿದನು. ವ|| ಹಾಗೆ ಒಡ್ಡಿರುವ ಸೈನ್ಯಗಳ ಎರಡು ಪಕ್ಷದ ನಾಯಕರೂ ತಮ್ಮ ತಮ್ಮ ಕೋಪಾಗ್ನಿಗಳನ್ನೇ ಬೀಸುವಂತೆ (ಯುದ್ಧ ಪ್ರಾರಂಭಸೂಚಕವಾಗಿ) ಕೈಗಳನ್ನು ಬೀಸಿದರು. ೧೧೧. ಕಯ್ಯಲ್ಲಿರುವ ಕತ್ತಿಗಳು ಒಂದಕ್ಕೊಂದು ತಗಲಲು ಕಿಡಿಗಳನ್ನು ಹಾರಿಸಿ ಹುಟ್ಟಿದ ಒಳ್ಳೆಯ ಕಿಡಿಗಳು ನಕ್ಷತ್ರಮಂಡಲದಂತೆ ಕಾಣಿಸಿದುವು. ಧೂಳು ಹರಡಿನಿಂತಿರುವ ಮೋಡದಂತಿದ್ದುವು. ಕತ್ತಿಯ ಚೂರುಗಳು ಹಾರುವ ಉಳ್ಳದ ಹಾಗಿತ್ತು. ಆಕಾಶವು ಆಕಾಶಕ್ಕೆ ತಗುಲಿತು ಎನ್ನುವ ಹಾಗೆ ಮೂರುಲೋಕದವರೆಗೆ ಪ್ರಕಾಶಮಾನವಾಗುವ ಹಾಗೆ ಎರಡು ಸೈನ್ಯಗಳೂ ಉಗ್ರವಾದ ಕೋಪದಿಂದ ತಾಗಿ ಯುದ್ಧಮಾಡಿದುವು. ವ|| ಅಷ್ಟರಲ್ಲಿ ದುರ್ಯೋಧನನಿಗಾಪ್ತರಾದ ಸಂಸಪ್ತಕರು ಅತಿರಥಮಥನನಾದ ಅರ್ಜುನನ ತೇರನ್ನು ತಮ್ಮ ಕಡೆ ತೆಗೆಯಿಸಿಕೊಂಡು ಹೋಗಲು ಅಮ್ಮನ ಗಂಧವಾರಣನಾದ ಅರ್ಜುನನು ಅವರ ರಥಕ್ಕೆ ಅಭಿಮುಖವಾಗಿ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಯಂತೆ ನುಗ್ಗಿದನು. ೧೧೨. ಈ ಸಂಸಪ್ತಕರಿಂದ ಈ ಭಾರತಯುದ್ಧವು ನಿಷ್ಕರ್ಷೆಯಾಗದೆ (ಮುಗಿಯದೇ) ಇದೆ. ಇವರನ್ನು ಕತ್ತರಿಸಿ ಬೀಳುವಂತೆ ಕೊಂದು ಆಮೇಲೆ ಬೆಲೆಯೇ ಇಲ್ಲದ ರೀತಿಯಲ್ಲಿ ಅದ್ಭುತವಾಗಿ) ಕರ್ಣನಲ್ಲಿ ಕಾದಲೇಬೇಕು ಎಂದು ಕೆಂಪಾದ ಗರಿಗಳನ್ನುಳ್ಳ ಹಾರೆಯಂತಿರುವ ಬಾಣಗಳನ್ನು ನಾಟಿ ಗುರಿಯಿಟ್ಟು ಹೊಡೆಯಲು ಶತ್ರುನಾಯಕರು ರಭಸದಿಂದ ಹದ್ದು ಮೇಲೆರಗಲು ಸಣ್ಣ ಹಕ್ಕಿಗಳು ಸುರುಳಿಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy