SearchBrowseAboutContactDonate
Page Preview
Page 603
Loading...
Download File
Download File
Page Text
________________ ೫೯೮) ಪಂಪಭಾರತಂ ಸೂತ ನಟ ವಂದಿ ಮಾಗಧ ವೈತಾಳಿಕ ಕಥಕ ಪುಣ್ಯಪಾಠಕ ವಿಪೋ || ದೂತರವಮೆಸೆಯೆ ಜಯ ಜಯ ಗೀತಿಗಳೊರ್ವ್ವದಲೆ ತಡೆಯದೆರಡುಂ ಪಡೆಯೋಳ್ || ೧೦೬ ಎರಡುಂಪಕ್ಕಮನೆಗಿದ ಕರಿಗಳ ಪಾರ್ದಯ್ ವೇ ಕೊರಲ ಸರಂಭ | ತಿರೆ ಮುರಿವಿಟೀಹಷಾ ಸ್ವರಮಂ ತೋಳದಪುವಲ್ಲಿ ನೃಪ ತುರಗಂಗಳ್ || ೧೦೭ ಇಂದೆನ್ನ ಮಗನನರ್ಜುನ ನೊಂದುಂ ತಳ್ಳಿಲ್ಲದವನವನಂ ನೀಂ ಕಾ || ಯೆಂದು ಸುರಪತಿಯ ಕಾಲ್ವಡಿ ವಂದಮನಿಸಿದುವು ಪಸರಿಪಿನಕಿರಣಂಗಳ 11 ೧೦೮ ವ|| ಆಗಳಂಗರಾಜಂ ತನ್ನಂ ಪರಿಚ್ಛೇದಿಸಿ ನೇಪ ಮೂಡೆಯಾಜ್ಞಾವೇಕ್ಷಣಂಗೆಯ್ದು ಸವತ್ಸ ಸುರಭಿಯನಭಿವಂದಿಸಿ ನಿಜ ರಥ ತುರಗ ದಿವ್ಯಾಸ್ತಂಗಳುಳೆಯ ಪಸುರ್ಮಣಿಯನಿಡ ಮುಟಿಯದಂತು ಚಾಗಂಗೆಯು ಚಾಗ ಬೀರದ ಪಯಿಗೆಯನೆತ್ತಿಸಿ ಪಂಚರತ್ನಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು ಮೆಯ್ಯನಾಜೆಸಿ ದುಕೂಲಾಂಬರವನುಟ್ಟು ಪೊಸಮಾವುಗೆಯಂ ೧೦೬. ಪೌರಾಣಿಕರು, ನಟುವರು, ಹೊಗಳುಭಟರು, ಸ್ತುತಿಪಾಠಕರು, ಹಾಡುವವರು, ಕತೆಹೇಳುವವರು, ಮಂಗಳಪಾಠಕರು, ಬ್ರಾಹ್ಮಣರು ಮೊದಲಾದವ ರಿಂದ ಎದ್ದ ಜಯಜಯಮಿಶ್ರವಾದ ಗೀತೆಗಳು ಎರಡುಸೈನ್ಯದಲ್ಲಿಯೂ ಸಾವಕಾಶಮಾಡದೆ ಒಟ್ಟಿಗೆ ಪ್ರಕಾಶಿಸಿದುವು. ೧೦೭. ಎರಡು ಪಕ್ಷದಲ್ಲಿಯೂ ಮೇಲೆಬಿದ್ದ (ಮುತ್ತಿದ) ಆನೆಗಳು ನಿಟ್ಟಿಸಿ ಕುಗ್ಗಿದ ಕೊರಳಸ್ವರದಿಂದ ಕೂಡಿರಲು ರಾಜಾಶ್ವಗಳು ಆಹಾರವನ್ನು ಬಿಟ್ಟು ಕೆನೆಯುತ್ತಿರುವುವು. (ಇವು ಅಪಶಕುನದ ಸೂಚನೆಗಳು). ೧೦೮. ಈ ದಿನ ನನ್ನ ಮಗನಾದ ಕರ್ಣನನ್ನು ಅರ್ಜುನನು ಸ್ವಲ್ಪವೂ ಸಾವಕಾಶವಿಲ್ಲದೆ ನಾಶಮಾಡುವನು. ಅವನನ್ನು ನೀನು ಕಾಪಾಡು ಎಂದು ಇಂದ್ರನ ಕಾಲನ್ನು ಹಿಡಿಯುವ ರೀತಿಯನ್ನು ಪ್ರಸರಿಸುತ್ತಿರುವ ಸೂರ್ಯನ ಕಿರಣಗಳು ಕೀಳ್ಯಾಡಿದುವು. ವ|| ಆಗ ಕರ್ಣನು ತಾನು ನಿಶ್ಮಿಸಿಕೊಂಡು ಸೂರ್ಯೊದಯವಾಗಲು ತುಪ್ಪದಲ್ಲಿ ತನ್ನ ಮುಖಬಿಂಬವನ್ನು ನೋಡಿ ಕರುವಿನಿಂದ ಕೂಡಿದ ಗೋವನ್ನು ಪೂಜಿಸಿ ದನು. ತನ್ನ ತೇರು, ಕುದುರೆ, ದಿವ್ಯಾಸ್ತಗಳನ್ನು ಬಿಟ್ಟು ಒಂದು ಹಸಿರು ಮಣಿಯೂ ಉಳಿಯದಂತೆ ದಾನಮಾಡಿ ತ್ಯಾಗವೀರದ ಧ್ವಜವನ್ನು ಎತ್ತಿ ಕಟ್ಟಿದನು. ಪಂಚರತ್ನಗಳಿಂದ ಕೂಡಿದ ಮಂಗಳತೀರ್ಥಗಳಲ್ಲಿ ಸ್ನಾನಮಾಡಿ ಶರೀರವನ್ನು ಒಣಗಿಸಿಕೊಂಡು ರೇಷ್ಮೆಯಂಥ ಬಟ್ಟೆಯನ್ನುಟ್ಟು ಹೊಸಪಾದುಕೆಗಳನ್ನು ಮೆಟ್ಟಿ ಚಿನ್ನದ ಉತ್ತರೀಯವನ್ನೂ ಕಟಿಸೂತ್ರವನ್ನೂ ಧರಿಸಿದನು. ಆಚಮನಮಾಡಿ ಚಿನ್ನದ ಕಮಲಗಳಿಂದ ಸೂರ್ಯನಿಗೆ ಅರ್ಥ್ಯವನ್ನೆತ್ತಿ ಕ್ಷೀರಸಮುದ್ರದ ಅಲೆಯ ನೊರೆಗೆ ಸಮಾನವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy