SearchBrowseAboutContactDonate
Page Preview
Page 60
Loading...
Download File
Download File
Page Text
________________ ಉಪೋದ್ಘಾತ | ೫೫ ಕುಡುಮಿಂಚಿನ ಸಿಡಿಲುರುಳಿಯೊಳ್, ಒಡಂಬಡಂ ಪಡೆಯ ಕರ್ಣನೊಡಲಿಂದಾಗಳ್ ನಡೆ ನೋಡೆನೋಡೆ ದಿನಪನೋಲ್ ಒಡಗೂಡಿದುದೊಂದು ಮೂರ್ತಿ ತೇಜೋರೂಪಂ | ಇಂತಹ ಕರ್ಣನ ಅದ್ಭುತ ಜೀವನ ಪಂಪನ ಹೃದಯವನ್ನು ಸೂರೆಗೊಂಡಿತು. ಅರಾತಿಕಾಲಾನಲನ ಸಮಕ್ಷಮದಲ್ಲಿಯೇ ಮನಮುಟ್ಟುವಂತೆ ನಿರ್ಭಯವಾಗಿ ಆತನ ಚಮರಶ್ಲೋಕವನ್ನು ಹಾಡಿ ಆತನಲ್ಲಿರುವ ಪಕ್ಷಪಾತವನ್ನು ಕವಿತಾಗುಣಾರ್ಣವನು ಪ್ರದರ್ಶಿಸಿದನು. ನೆನೆಯದಿರಣ್ಣ ಭಾರತದೊಳಿಂ ಪುರಾರುಮನ್, ಒಂದಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ, ಕರ್ಣನೂಲ್, ಆರ್ ದೂರ, ಕರ್ಣನೇಜು, ಕ ರ್ಣನ ಕಡು ನನ್ನಿ, ಕರ್ಣನಳವು, ಅಂಕದ ಕರ್ಣನ ಚಾಗಮಂದು ಕ ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲೈ ಭಾರತಂ || ಪಂಪನ ದುರ್ಯೋಧನನು ವೀರಾಗ್ರೇಸರ, ಆತ್ಮಾಭಿಮಾನಿ, ಅವನಲ್ಲಿ ಸತ್ಪುರುಷನಲ್ಲಿರಬೇಕಾದ ಅನೇಕಗುಣಗಳಿವೆ. ಆದರೆ ಅವನಲ್ಲಿರುವ ಛಲವೂ ಪಾಂಡವರಲ್ಲಿ ಅವನಿಗಿದ್ದ ದ್ವೇಷ ಮಾತ್ಸರ್ಯಗಳೂ ಅವನ ನಾಶಕ್ಕೆ ಕಾರಣವಾಗುವುವು. ಆದುದರಿಂದಲೇ ಅವನಲ್ಲಿ ವಾಚಕರಿಗೆ ಸಹಾನುಭೂತಿಯುಂಟಾಗುತ್ತದೆ. ಅವನ ಅನ್ಯಾದೃಶವಾದ ಮಿತ್ರಪ್ರೇಮ, ಗುರುಜನವಿಧೇಯತೆ, ಸೋದರಪ್ರೇಮ ಮೊದಲಾದ ಆಭಿಜಾತ್ಯಗುಣಗಳು ಚಿತ್ತಾಕರ್ಷಕವಾಗಿವೆ. ಇವನ್ನು ಪಂಪನು ಅವನ ಪಾತ್ರಚಿತ್ರಣದಲ್ಲಿ ಬಹುಸ್ಪಷ್ಟವಾಗಿ ಚಿತ್ರಿಸಿದ್ದಾನೆ. .. ಪ್ರಾರಂಭದಲ್ಲಿ ಭಾರತಯುದ್ದದವರೆಗೆ ಪಂಪನ ದರ್ಯೊಧನನೂ ಹೆಚ್ಚು ಕಡಿಮೆ ವ್ಯಾಸರ ದುರ್ಯೋಧನನಂತೆಯೇ ಇರುವನು. ಪಂಪನು ದುರ್ಯೋಧನನ ದುರ್ಗುಣಗಳನ್ನು ಎತ್ತಿತೋರಿಸದಿದ್ದರೂ ಮೂಲಭಾರತದಂತೆಯೇ ಇಲ್ಲಿಯೂ ದುರ್ಯೊಧನನಲ್ಲಿ ಒಂದು ವಿಧವಾದ ದ್ವೇಷ, ಮಾತ್ಸರ್ಯ, ಕುಯುಕ್ತಿ, ಅಧರ್ಮ ಪ್ರವರ್ತನೆ ಮೊದಲಾದುವು ಕಂಡು ಬರುವುವು. ಪಂಪನು ಅವನ ಪ್ರಧಾನವಾದ ಗುಣ ಛಲವೆಂದು ಹೇಳಿದ್ದಾನೆ. ಛಲಕ್ಕೆ ಮೂಲಕಾರಣ ಮಾತ್ಸರ್ಯ. ಅವನ ಹುಟ್ಟು ಮಾತ್ಸರ್ಯದಿಂದಲೇ ಪ್ರಾರಂಭವಾಗುವುದು. ಕುಂತಿಗೆ ತನಗಿಂತ ಮೊದಲೇ ಸಂತಾನ ಪ್ರಾಪ್ತಿಯಾಯಿತೆಂಬ ಮಾತ್ಸರ್ಯದಿಂದಲೇ ಕೌರವರ ಅಕಾಲ ಜನನವಾಗುವುದು. ವಿದ್ಯಾಭ್ಯಾಸ ಮತ್ತು ಕ್ರೀಡಾವಿನೋದಗಳಲ್ಲಿ ಪಾಂಡವರ ಕೈ ಮೇಲಾದುದು ಅವರ ಮಾತ್ಸರ್ಯವನ್ನು ಹೆಚ್ಚಿಸುವುದು. ತಂದೆಗೆ ರಾಜ್ಯ ಪ್ರಾಪ್ತವಾಗದಿದ್ದುದೂ ಪಾಂಡವರು ಹೋದೆಡೆಗಳಲ್ಲೆಲ್ಲಾ ಅಭಿವೃದ್ದಿಯಾಗುತ್ತಿದ್ದುದೂ ಮಾತ್ಸರ್ಯದ ಪರಮಾವಧಿಯಾಗಿ ಪರಿಣಮಿಸಿ ಪಾಂಡವರಲ್ಲಿ ವೈರವೂ ಅವರ ನಿರ್ಮೂಲನಕಾರ್ಯದಲ್ಲಿ ನಾನಾ ರೀತಿಯ ಪ್ರಯತ್ನಗಳೂ ಪ್ರಾರಂಭವಾಗುವುವು. ಮೊದಲು ಅವರಿಗೆ ಬೇರೆಯೆಡೆಯಲ್ಲಿರಲು ಏರ್ಪಾಟು, ಆಮೇಲೆ ಅರಗಿನ ಮನೆಯಲ್ಲಿ ಕೊನೆಗಾಣಿಸುವ ಸಂಚು, ಸಂಚು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy