SearchBrowseAboutContactDonate
Page Preview
Page 587
Loading...
Download File
Download File
Page Text
________________ ೫೮೨ | ಪಂಪಭಾರತ ವ|| ಎಂಬುದು ಸಿಂಧುತನೂಜನಂಗಾಧಿರಾಜನ ನಯದ ವಿನಯದ ಪಾಳೆಯ ಪಸುಗೆಯ ನುಡಿಗಳೆ ಮನಗೊಂಡೀತಂ ಕುಲಹೀನನಲ್ಲನುಭಯಕುಲ ಶುದ್ಧನಾಗಲೆ ವೇಚ್ಚುಮೆಂದು ನಿಶ್ಚಿಸಿ ನೀನಮಗಿಂಬು ಕೆಯೊಡಂ ಸುಯೋಧನನ ರಾಜ್ಯಮನೊಲ್ಗೊಡಂ ಶಲ್ಯನನ ಸಾರಥಿ ಮಾಡಿ ಕಾದುವುದೆಂದು ಪರಸಿ ಪೋಗೆಂಬುದುಂ ಮಹಾ ಪ್ರಸಾದವೆಂದು ಪೊಡೆವಟ್ಟು ಸಂಗ್ರಾಮಭೂಮಿಗ ವಂದು ಹಸ್ತಶ್ವರಥ ಪದಾತಿಬಲಂಗಳನೊಂದುಮಾಡಿ ಮಕರವೂಹಮನೊಡ್ಡಿದಂ ಪಾಂಡವ ಪತಾಕಿನಿಯುಮರ್ಧಚಂದ್ರವೂಹಮನೊಡ್ಡಿ ನಿಂದುದಿತ್ತ ಪರಸೈನ್ಯಭೈರವಂ ಪುರುಷೋತ್ತಮನನಿಂತೆಂದಂಮಗ ಸll ಪಿರಿದುಂ ಕಾಯ್ಕಿಂದಮನ್ನೊಳ್ ನೆರೆದಿಯಲೆ ಪೂಣ್ಮತ್ತ ಸಂಸಪ್ತಕರ್ಕಲ್ ಕರೆವರ್ ಮತ್ತಿತ್ತ ಕರ್ಣಂ ಚಲ ಚಲದಿಜಿಯಲ್ ನಿಂದನೆಗೆಯುದೆಂದಾಂ | ನರನಂ ಮುನ್ನಂ ತ್ರಿಗರ್ತಾಧಿಪ ಬಲಮನದಂ ನುರ್ಗು ನೀನೆಂದು ತೇರಂ ಹರಿ ಕೊಂಡುಯ್ಯನಿತ್ತೊರ್ಮೊದಲುಭಯಬಲಂ ತಾಗಿ ಕಾದಿತ್ತು ಬೇಗಂ || ೬೦ ವ|| ಅಂತು ಚತುರ್ವಲಂಗಳೊಂದೊಂದಳ್ ಕಾದ ನಟ್ಟ ಸರಲ್ಕಿಡಿದು ಕರಗದ ಧಾರಯಂತೆ ಸುರಿವ ನೆತ್ತರ ಧಾರೆಗಳಂಬಿರಿವಿಡುವಿನಮಮಿತ್ತಮುರ್ಚಿವೋಪ ಕಿತ್ತಂಬುಗಳಿಂ ಜಯಸಂಪದವಾಗಲಿ ವಿಧಾತ್ರನಿಂದ (ವಿಧಿವಶದಿಂದ) ಹೆಚ್ಚಿನ ಶೌರ್ಯದ ದಾರಿಯನ್ನೇ ಹಿಡಿದು ನಿಮ್ಮನ್ನು ಮೆಚ್ಚಿಸುತ್ತೇನೆ. ವ|| ಎನ್ನಲು ಭೀಷ್ಮನು ಕರ್ಣನ ನೀತಿಯಿಂದಲೂ ನಮ್ರತೆಯಿಂದಲೂ ಧರ್ಮದಿಂದಲೂ (ಸಂಪ್ರದಾಯಬದ್ದವಾದ) ಕೂಡಿದ ವಿವೇಕದ ಮಾತುಗಳಿಗೆ ಮನಸ್ಸಿನಲ್ಲಿ ಸಂತೋಷಸಿ (ಒಪ್ಪಿ) ಇವನು ಹೀನಕುಲದವನಲ್ಲ: (ತಾಯಿ ತಂದೆಗಳ) ಎರಡು ವಂಶಗಳ ಕಡೆಯಿಂದಲೂ ಶುದ್ಧನೇ ಆಗಿರಬೇಕು ಎಂದು ನಿಶ್ಚಿಸಿ ನೀನು ನನಗೆ ಹಿತವಾದುದನ್ನು ಮಾಡುವುದಾದರೆ ದುರ್ಯೊಧನನ ರಾಜ್ಯವನ್ನು ಪ್ರೀತಿಸುವುದಾದರೆ ಶಲ್ಯನನ್ನೇ ಸಾರಥಿಯನ್ನಾಗಿ ಮಾಡಿ ಕಾದುವುದು ಎಂದು ಹರಸಿ ಬೀಳ್ಕೊಟ್ಟನು. ಕರ್ಣನು 'ಇದು ಪರಮಾನುಗ್ರಹ' ಎಂದು ನಮಸ್ಕಾರ ಮಾಡಿ ಯುದ್ಧರಂಗಕ್ಕೆ ಬಂದು ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಒಟ್ಟಿಗೆ ಸೇರಿಸಿ ಮೊಸಳೆಯ ಆಕಾರದ ಸೇನಾರಚನೆಯನ್ನು ಮಾಡಿ ಚಾಚಿದನು. ಪಾಂಡವಸೈನ್ಯವೂ ಅರ್ಧಚಂದ್ರಾಕಾರದ ರಚನೆಯನ್ನು ರಚಿಸಿ ಚಾಚಿ ನಿಂತಿತು. ಈ ಕಡೆ ಪರಸೈನ್ಯಭೈರವನಾದ ಅರ್ಜುನನು ಪುರುಷೋತ್ತಮನಾದ ಕೃಷ್ಣನನ್ನು ಕುರಿತು ಹೀಗೆಂದನು. ೬೦, ಸಂಸಪಕರುಗಳು ವಿಶೇಷಕೋಪದಿಂದ ಕೂಡಿ ನನ್ನಲ್ಲಿ ಯುದ್ದಮಾಡಲು ಪ್ರತಿಜ್ಞೆ ಮಾಡಿ ಆ ಕಡೆಗೆ ಕರೆಯುತ್ತಿದ್ದಾರೆ. ಮತ್ತು ಈ ಕಡೆ ಕರ್ಣನು ವಿಶೇಷಛಲದಿಂದ ಯುದ್ಧಮಾಡಲು ನಿಂತಿದ್ದಾನೆ. ಏನು ಮಾಡುವುದು ಎಂದು ಕೇಳಿದನು. 'ಮೊದಲು ತ್ರಿಗರ್ತದೇಶದ ರಾಜನ ಸೈನ್ಯವನ್ನು ಪುಡಿಮಾಡು' ಎಂದು ಹೇಳಿ ತೇರನ್ನು ಕೃಷ್ಣನು ಆ ಕಡೆಗೆ ನಡೆಸಿಕೊಂಡು ಹೋದನು. ಈ ಕಡೆ ತಕ್ಷಣವೇ ಎರಡು ಸೈನ್ಯಗಳೂ ಸಂಘಟಿಸಿ ವೇಗವಾಗಿ ಯುದ್ಧಮಾಡಿದವು. ವ|| ಹಾಗೆ ನಾಲ್ಕು ಸೈನ್ಯಗಳೂ ಒಂದರೊಡನೊಂದು ಸೇರಿ ಯುದ್ಧಮಾಡಲು ನಾಟಿದ ಬಾಣವನ್ನೇ ಅನುಸರಿಸಿ ಗಿಂಡಿ(ಕರಗ)ಯಿಂದ ಸುರಿಯುವ ಧಾರೆಯಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy