SearchBrowseAboutContactDonate
Page Preview
Page 578
Loading...
Download File
Download File
Page Text
________________ ದ್ವಾದಶಾಶ್ವಾಸಂ / ೫೭೩ ದುತವಿಲಂಬಿತಂ | ಎನಗೆ ಕೂರ್ಪುದನಾ ಘಟಸಂಭವಂ ನಿನಗೆ ಕೂರನಬಲ್ ನಿನತಲ್ಲು ಕೇ || ಆನತುಮಾಜದ ಶೋಕಮನಿರ್ವರುಂ. ಮುನಿವರಂ ತವ ಕೊಂದೊಡನೀಗುವಂ | ವ|| ಎಂಬುದುಮಶ್ವತ್ಥಾಮನಿಂತೆಂದಂತರಳಂ || ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ : ಕರಿಸಿ ಬಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ | ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ ಪರಿಭವಕ್ಕನುರೂಪಮಿಂ ಪೆಜತೊಂದುಮಿಹಿಕೇತನಾ || ೩೭ ಶಾll ರಾಯೆಂಬೀ ಪೆಸರಿಲ್ಲದಂತು ಮುಟಿಸಂ ಮುಯ್ಯಲು ಸೂಂತು ಕ ಟೈಾಯಂ ಪೊಂಪುಟವೊಗೆ ತಂದೆಯಟಿವಿಂಗಾ ಭಾರ್ಗವಂ ಕೊಂದನಂ | ತೀಯಮ್ಮಯ್ಯನಿನಾದುದೊಂದು ಪಗೆಯಿಂ ಸೀಳುಗ್ರಪಾಂಚಾಳರಾ ಜಾಯುಃಪಾರಮನಸ್ಕಭೂಪಬಲಮಂ ಪರ್ದಿಗೆ ಬಿರ್ದಿಕ್ಕುವೆಂ 1 ೩೮ ಕೊಂಡಿರುವ ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ವಿಶೇಷವಾದ ಉಪಸರ್ಪಣೆಯಿಂದಲೂ ಹೀನೋಪಾಯಗಳಿಂದಲೂ ದಯಾಹೀನನಾದ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ? ೩೬. ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದುಃಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಃಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು ಪೂರ್ಣವಾಗಿ ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿ ಕೊಳ್ಳೋಣ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೩೭. ಆಚಾರ್ಯ ನಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ಮನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದುದು. ದುರ್ಯೋಧನಾ! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ. ೩೮. ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ 'ರಾಜ' ಎಂಬ ಹೆಸರೇ ಇಲ್ಲದಿರುವ ಹಾಗೆ ಇಪ್ಪತ್ತೊಂದು ಸಲ ತನ್ನ ಪೌರುಷವು ಅತ್ಯಂತ ಅಧಿಕವಾಗುತ್ತಿರಲು (ರಾಜಕುಲವನ್ನ) ಹೇಗೆ ಕೊಂದನೋ ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ದ್ವೇಷದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy