SearchBrowseAboutContactDonate
Page Preview
Page 549
Loading...
Download File
Download File
Page Text
________________ ೫೪೪ | ಪಂಪಭಾರತಂ ವ|| ಎಂಬುದುಂ ಸುಯೋಧನಂ ಮುಗುಳಗೆ ನಕ್ಕಿಂತೆಂದಂಕಂt! ಮರುಳು ಮಗನ ಶೋಕದಿ ನುರುಳುಂ ಪೂಣ್ಣವನ ಪೂಣೆ ದುಶ್ಯಾಸನನೊಳ್ | ಕರತನದಿಂದನ್ನೊಳಮಾ ಮರುತ್ತುತಂ ಪೂಣ್ಣ ಪೂಣೆಯಂತೆವೋಲಕ್ಕುಂ || ೧೨೪ ಚಂ|| ಕೃತ ವಿವಿಧಾಸ್ತಶಸ್ತ ಯಮಪುತ್ರ ಮರುತ್ತುತ ಯಜ್ಞಸೇನರು ದೃತ ಬಳರ ಕಾದಿ ಸುಗಿದೋಡಿದರಲ್ಲರೆ ಕಾವರೀ ವಿಎಂ | ಶತಿ ಕೃಪ ಕರ್ಣ ಶಲ್ಕ ಕಳಶೋದ್ಭವ ತಪ್ಪಿಯ ಪುತ್ರರೆಂದೂಡ ಪ್ರತಿರಥನಂ ಜಯದ್ರಥನನಾಜಿಯೊಳೆಯರೆ ವರ್ಷ ಗಂಡರಾರ್ || ೧೨೫ ವ|| ಎಂದು ದುತ್ಕಳೆಯನೊಡಗೊಂಡು ಕುಂಭಸಂಭವನಲ್ಲಿಗೆ ವಂದಿಂತೆಂದಂಮll ಸll ಸುತಶೋಕೋದ್ರೇಕದಿಂ ಸೈಂಧವನನಟಿವೆನೆಂದರ್ಜುನಂ ಪೂಣ್ಣನಿಂತೀ ಸತಿ ಬಂದಳ್ ಕಾವುದಾತ್ಮಾನುಜೆಯ ಕಡಗಮಂ ನೀಮ ಮಾರ್ಕೊಳೊಡಾರ ವಿತರರ್ ಮುಟ್ಟಲ್ ಸಮರ್ಥರ್ ಕದನದೊಳೆನೆ ಗೆಲ್ತಾಸೆಯಂತಿರ್ಕ ಸಿಂಧು ಕ್ಷಿತಿಪಂ ತಾನೇನನಾದಂ ರಣದೊಳದನೆ ಪೋಗಾನುಮಪ್ಟೆಂ ನರೇಂದ್ರಾ || ೧೨೬ ನಾನು ನಡುಗಿ ಬಂದೆನು. ನೀನು ನನ್ನ ಓಲೆ ಮತ್ತು ಕಡಗದ ನಾಶವನ್ನು (ಸೌಮಂಗಲ್ಯದ ನಾಶವನ್ನು ನೋಡುತ್ತೀಯಾ? ವ|| ಎನ್ನಲು ದುರ್ಯೋಧನನು ಹುಸಿನಗೆ ನಕ್ಕು ಹೀಗೆಂದನು. ೧೨೪, ಹುಚ್ಚುತಂಗೀ, ಮಗನ ದುಃಖದಿಂದ ಅರ್ಜುನನು ಉರುಳಾಡಿಮಾಡಿದ ಪ್ರತಿಜ್ಞೆಯು ಭೀಮನು ದುಶ್ಯಾಸನನಲ್ಲಿಯೂ ನನ್ನಲ್ಲಿಯೂ ಬಹಳ ತೀವ್ರತೆಯಿಂದ ಮಾಡಿದ ಪ್ರತಿಜ್ಞೆಯಂತೆಯೇ ನಿಷ್ಪಲವಾಗುತ್ತದೆ. ೧೨೫. ನಾನಾ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ ಧರ್ಮರಾಜ, ಭೀಮ, ಧೃಷ್ಟದ್ಯುಮ್ಮರು ವಿಶೇಷ ಶಕ್ತಿಯುಳ್ಳವರು - ದಂಡೆತ್ತಿ ಬಂದು ಯುದ್ಧಮಾಡಿ ಹೆದರಿ ಓಡಿದವರಲ್ಲವೇ? (ಜಯದ್ರಥನೊಡನೆ ಕಾದಲಾರದೆ ಹೆದರಿ ಓಡಿ ಹೋದರಲ್ಲವೇ ?) ವಿವಿಂಶತಿ, ಕೃಪ, ಕರ್ಣ, ಶಲ್ಯ, ದ್ರೋಣ, ಅವನ ಪ್ರಿಯಪುತ್ರನಾದ ಅಶ್ವತ್ಥಾಮ ಮೊದಲಾದವರು ಜಯದ್ರಥನನ್ನು ರಕ್ಷಿಸುವರು ಎನ್ನುವಾಗ ಸಮಾನವಾದ ರಥಿಕರೇ ಇಲ್ಲದ ಜಯದ್ರಥನು ಯುದ್ದದಲ್ಲಿ ಬರುತ್ತಿದ್ದರೆ ಅವನನ್ನು ಬಂದು ಎದುರಿಸುವ ಶೂರರಾರಿದ್ದಾರೆ? ವ| ಎಂದು ದುಕ್ಕಳೆಯನ್ನು ಜೊತೆಯಲ್ಲಿ ಕರೆದುಕೊಂಡು ದ್ರೋಣಾಚಾರ್ಯರಲ್ಲಿಗೆ ಬಂದು ಹೀಗೆಂದು ಹೇಳಿದನು - ೧೨೬. ಪುತ್ರಶೋಕೋದ್ರೇಕದಿಂದ ಅರ್ಜುನನು ಸೈಂಧವನನ್ನು ಕೊಲ್ಲುವೆನೆಂದು ಪ್ರತಿಜ್ಞೆಮಾಡಿದನು. ಅದಕ್ಕಾಗಿ ಈ ತಂಗಿ ಬಂದಿದ್ದಾಳೆ. ನನ್ನ ತಂಗಿಯ ಕಡಗವನ್ನು ನೀವೆ ರಕ್ಷಿಸಬೇಕು. ಯುದ್ಧದಲ್ಲಿ ನೀವೆ ಪ್ರತಿಭಟಿಸಿದರೆ ಅವನನ್ನು ಮುಟ್ಟಲು ಸಮರ್ಥರಾಗುತ್ತಾರೆಯೇ ಎಂದನು. ಗೆಲ್ಲುವಾಸೆ ಹಾಗಿರಲಿ, ದುರ್ಯೋಧನಾ, ಯುದ್ಧದಲ್ಲಿ ಸೈಂಧವನೇನಾಗುತ್ತಾನೆಯೋ ಅದನ್ನೇ ನಾನೂ ಆಗುತ್ತೇನೆ ಹೋಗು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy