SearchBrowseAboutContactDonate
Page Preview
Page 537
Loading...
Download File
Download File
Page Text
________________ ೫೩೨ / ಪಂಪಭಾರತಂ ಮ|| ಸ || ಇದು ಚಕ್ರವ್ಯೂಹಮಿ ವ್ಯೂಹಮನೊಡವದಟಂ ಪಾರ್ಥನಂತಾತನುಂ ಗಂ ಟದನ ನಾಲ್ವರುಂ ಭೇದಿಸಲಯೆವಿದಂ ಕಂದ ನೀಂ ಬಲ್ಲ ಪೇಂ | ಬುದುಮಾನೆಮ್ಮಯ್ಯನಲ್ ಕೇಳವೆನಿದನಿದೇನಯ್ಯ ಚಿಂತಾಂತರಂ ಪೊ ಕಿದನೀಗಲ್ ವನ್ಯಗಂಧದ್ವಿರದ ಕೊಳನಂ ಪೊಕ್ಕವೋಲ್ ಕಾದಿ ತೋರ್ಪಂ || ೮೭ ಅನಲನ ಕೊಟ್ಟ ಗಾಂಡಿವದ ತೇರ ಮುರಾರಿಯ ಮೆಚ್ಚ ದೇವ ದೇ ವನ ದಯೆಗೆಯ್ದ ಸಾಯಕದ ಬೆಂಬಲದೊಳ್ ಕಲಿಯೆಂದು ಕಮ್ಮನ | ಮನನದಟುತಿರ್ಷಿರವಿದೇಂ ಹಗೆಯೊಡ್ಡು ಗೆಲಳುಂಬಮಂ ಬನಿತುವರಂ ಮನಕ್ಕೆ ನಿಮಗತ್ತಳಗಂ ಬರೆ ಮತ್ತೆ ಮಾಸ್ಟನೇ | ನೆದು ಚತುರ್ವಲಂಬೆರಸು ಬಂದುದೊಡ್ಡಿದ ಗಂಡರಾರುಮ ನಡೆಯದ ಗಂಡರೇ ನೆಗೆದ ನೆತ್ತರ ಸುಟ್ಟುರೆ ಕಂಡದಿಂಡೆಗಳ | ಪಡೆದು ನಭಂಬರಂ ಪರೆದು ಪರ್ವಿ ಲಯಾಗಿ ಶಿಖಾಕಳಾಪಮಂ ಮರೆಯಿಸೆ ತಾಗಿ ತಳಿಯೆಯದನ್ನೆಗಮಂತು ನರಂಗೆ ವುಟ್ಟಿದಂ || ವ|| ಎಂಬುದುಂ ಯಮನಂದನನಿಂತೆಂದಂ ಚoll ಚoll ಚಂ 65 ೮೯ ಅನುವರದಲ್ಲಿ ತಳ್ಳು ಪಗೆಯಂ ತವ ಕೊಂದೊಡಮಾಂತರಾತಿ ಸಾ ಧನದೊಳಗ ತಟ್ಟೆದೊಡವೆನ್ನಯ ಸಂತತಿಗಾಗಿಸಿರ್ದ ನಿ | ನ್ನನೆ ಮದದಂತಿ ದಂತ ಮುಸಲಾಹತಿಗಂ ಕರವಾಳ ಬಾಯಮಂ ಬಿನ ಮೊನೆಗಂ ಮಹಾರಥರ ತಿಂತಿಣಿಗಂ ಪಿಡಿದೆಂತು ನೂಂಕುವೆಂ || ೯೦ ಮಾಡಬೇಕೆಂಬುದನ್ನು ತಿಳಿಯದೆ ಅಭಿಮನ್ಯುವನ್ನು ಕರೆದು ಹೀಗೆ ಹೇಳಿದನು. ೮೭, ಇದು ಚಕ್ರವ್ಯೂಹ, ಈ ಚಕ್ರವ್ಯೂಹವನ್ನು ಒಡೆಯುವ ವೀರ ಅರ್ಜುನ, ಅವನೂ ದೂರವಾದನು. ನಾವು ನಾಲ್ಕು ಜನವೂ ಇದನ್ನು ಭೇದಿಸಲು ತಿಳಿಯವು. ಮಗು ನೀನೇನಾದರೂ ತಿಳಿದಿದ್ದೀಯಾ ಹೇಳು ಎನ್ನಲು ಇದನ್ನು ತಂದೆಯಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೇಕೆ ವಿಶೇಷ ಚಿಂತೆ. ಇದನ್ನು ಈಗಲೇ ಪ್ರವೇಶಿಸಿ ಮಹಾಸತ್ವಶಾಲಿಯಾದ ಕಾಡಾನೆಯು ಕೊಳವನ್ನು ಪ್ರವೇಶಿಸುವ ಹಾಗೆ ಕಾದಿ ತೋರಿಸುತ್ತೇನೆ. ೮೮. ಅಗ್ನಿಯು ದಾನಮಾಡಿದ ಗಾಂಡೀವಾಸ್ತ್ರದ, ಸಾರಥಿಯಾಗಿರುವ ಕೃಷ್ಣನ ಪ್ರಸಾದದ, ದೇವದೇವನಾದ ಈಶ್ವರನು ಅನುಗ್ರಹಿಸಿದ ಪಾಶುಪತಾಸ್ತ್ರದ ಬೆಂಬಲದಿಂದ ಶೂರನೆಂದು ವ್ಯರ್ಥವಾಗಿ ಕರೆಯಿಸಿಕೊಳ್ಳುವ ತಂದೆಯಾದ ಅರ್ಜುನನ ಪರಾಕ್ರಮವನ್ನು ಒಲಿದು ಮೆಚ್ಚುತ್ತಿರುವ ಈ ಸ್ಥಿತಿಯದೇನು ? ಶತ್ರುಸೈನ್ಯವು ಗೆಲ್ಲುವುದಕ್ಕೆ ಸಾಧ್ಯವೆಂದು ಹೇಳುವವರೆಗೆ ಮನಸ್ಸಿಗೆ ಚಿಂತೆಯುಂಟಾದರೆ ಪುನಃ ನಿಲ್ಲುತ್ತೇನೆಯೇ ? (ಇಲ್ಲಿ ಈಗಲೇ ಯುದ್ಧಕ್ಕೆ ಹೊರಡುತ್ತೇನೆ) ೮೯, ಚತುರಂಗ ಬಲದೊಡನೆ ಕೂಡಿಕೊಂಡು ವೇಗವಾಗಿ ಸೈನ್ಯವನ್ನೊಡ್ಡಿರುವ ಶೂರರು ನನಗೆ ತಿಳಿಯದ ಶೂರರೇ? ಮೇಲಕ್ಕೆ ಚಿಮ್ಮಿದ ರಕ್ತಪ್ರವಾಹವು ಆಕಾಶಕ್ಕೆ ಚಿಮ್ಮುವಂತೆಯೂ ಮಾಂಸಖಂಡದ ರಾಶಿಗಳು ಕತ್ತರಿಸಿ ಮುಗಿಲವರೆಗೆ ಚೆಲ್ಲಾಡುವಂತೆಯೂ ಪ್ರಳಯಾಗ್ನಿ ಜ್ವಾಲೆಗಳನ್ನು ಮರೆಮಾಡುತ್ತಿರಲು ಎದುರಿಸಿ ಕೂಡಿ ಯುದ್ಧ ಮಾಡದಿದ್ದರೆ ನಾನು ಅರ್ಜುನನಿಗೆ ಹೇಗೆ ಹುಟ್ಟಿದವನಾಗುತ್ತೇನೆ ? ವ! ಎನ್ನಲು ಯಮನ ಪುತ್ರನಾದ ಧರ್ಮರಾಯನು ಹೀಗೆಂದನು-೯೦. ಯುದ್ಧದಲ್ಲಿ ಸೇರಿ ಶತ್ರುವನ್ನು ಪೂರ್ಣವಾಗಿ ಕೊಲ್ಲಬಹುದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy