SearchBrowseAboutContactDonate
Page Preview
Page 525
Loading...
Download File
Download File
Page Text
________________ ೫೨೦ | ಪಂಪಭಾರತಂ ಮII ಅದಟಂ ಸಿಂಧುತನೂಭವಂ ವಿಜಯನೋಟ್ ಮಾರ್ಕೊಂಡಣಂ ಕಾದಲಾ ಆದ ಬೆಂಬಿಡೆ ಕಾದಲೆಂದು ಬೆಸನಂ ಪೂಣಂ ಗಡಂ ದ್ರೋಣನಂ || ತರುವಂ ನೋಡುವೆನೆಂದು ಕಣ್ ತಣಿವಿನಂ ನೋಡಿ ಬರ್ಪಂತೆ ಬಂ ದುದಯಾದ್ರೀಂದ್ರಮನೇಯ ಭಾನು ಪೊಮಟೊಟ್ಟಿತ್ತನೀಕಾರ್ಣವಂ || ೫೫ ವll ಆಗಲ್ ಪಾಂಡವ ಬಲದ ಸೇನಾನಾಯಕಂ ಧೃಷ್ಟದ್ಯುಮ್ಮನೊಡ್ಡಿದ ವಜ್ರವೂಹಕ್ಕೆ ಪದವೂಹಮನೊಡ್ಡಿ ತದ್ರೂಹದ ಮೊನೆಗೆ ವಂದುಮಂ || ಕ್ರಾಂ ॥ ಶೋಣಾಶ್ವಂಗಳ ರಜತ ರಥಮಂ ಪೊಡೆ ಕುಂಭಧ್ವಜಂ ಗೀ | ರ್ವಾಣಾವಾಸಂಬರಮಡರೆ ಮಾತೊಡ್ಡು ದಲ್ ಸಾಲದ | ಬಾಣಾವಾಸಕ್ಕೆನುತುಮಳವಂ ಬೀಳುತುಂ ಬಿಲ್ ಜಾಣಂ ದ್ರೋಣಂ ನಿಂದಂ ಮಸಗಿ ತಿರುಪುತ್ತೂಂದು ಕೂರಂಬನಾಗಳ್ || ೫೬ ಕoll ಆ ಸಕಳ ಧರಾಧೀಶರ ಬೀಸುವ ಕುಂಚಮನ ಪಾರ್ದು ಬೀಸಲೊಡಂ ಕೆ | ಯೀಸಲೊಡಮಣಿದು ತಾಗಿದು ವಾಸುಕರಂ ಬೆರಸು ತಡೆಯದುಭಯ ಬಲಂಗಳ್|| ೫೭ ವll ಅಂತು ಚಾತುರ್ದಂತವೊಂದೊಂದುತೋಳ್ ತಾಗಿ ತಳಿಟಿವಲ್ಲಿ ತಲೆಗಳ ಪಳೆಯೆ ಬರಿಗಳ್ ಮುಜೆಯ ತೊಡೆಗಳುಡಿಯ ಪುಣ್ಣಳ್ ಸುಲಿಯೆ ಏರ್ಪಡಿಸಿದ್ದನು. ೫೫. ಪರಾಕ್ರಮಶಾಲಿಯಾದ ಭೀಷ್ಮನು ಅರ್ಜುನನನ್ನು ಪ್ರತಿಭಟಿಸಿ ವಿಶೇಷವಾಗಿ ಕಾದಲಾರದೆ ಬೆನ್ನು ತಿರುಗಿಸಲು ದ್ರೋಣನು ತಾನು ಕಾದುವೆನೆಂದು ಕಾರ್ಯವನ್ನು ಪ್ರತಿಜ್ಞೆ ಮಾಡಿದನಲ್ಲವೇ? ಅದನ್ನು ನೋಡಿಯೇಬಿಡುತ್ತೇನೆ ಎಂದು ಕಣ್ಣು ತೃಪ್ತಿಪಡುವವರೆಗೆ ನೋಡಲು ಬರುವ ಹಾಗೆ ಸೂರ್ಯನು ಉದಯ ಪರ್ವತವನ್ನೇರಿದನು. ಸೇನಾಸಮುದ್ರವು ಹೊರಟು ಚಾಚಿಕೊಂಡಿತು. ವ11 ಆಗ ಪಾಂಡವಸೈನ್ಯದ ಸೇನಾನಾಯಕನಾದ ಧೃಷ್ಟದ್ಯುಮ್ಮನು ಒಡ್ಡಿದ್ದ ವಜ್ರವ್ಯೂಹಕ್ಕೆ ಪ್ರತಿಯಾಗಿ ಪದ್ಮವ್ಯೂಹವನ್ನೊಡ್ಡಿ ಆ ವ್ಯೂಹದ ಮುಂಭಾಗಕ್ಕೆ ಬಂದು ೫೬. ಬೆಳ್ಳಿಯ ತೇರಿಗೆ ಕೆಂಪುಕುದುರೆಗಳನ್ನು ಹೂಡಿರಲು ಕಲಶದ ಚಿಹ್ನೆಯುಳ್ಳ ಬಾವುಟವು ದೇವಲೋಕದವರೆಗೆ ಹತ್ತಿರಲು, ಶತ್ರುಸೈನ್ಯವು ಈ ನನ್ನ ಬತ್ತಳಿಕೆಗೆ ಸಾಕಾಗು ವುದಿಲ್ಲವಲ್ಲವೇ ಎಂದು ಹೇಳಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತ ಬಿಲ್ಲಿನಲ್ಲಿ ಜಾಣನಾದ ದ್ರೋಣನು ರೇಗಿ ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು. ೫೭. ಆ ರಾಜರುಗಳಲ್ಲಿ ಬೀಸುವ ಚವುರಿಗಳನ್ನೇ ನೋಡಿಕೊಂಡು ಕೈಬೀಸಿದೊಡನೆಯೇ ಎರಡುಸೈನ್ಯಗಳೂ ಅದನ್ನು ತಿಳಿದು ಸಾವಕಾಶಮಾಡದೆ ವೇಗದಿಂದ ಕೂಡಿ ತಾಗಿದುವು. ವ ಚತುರಂಗಬಲವೂ ಒಂದರೊಡನೊಂದು, ತಾಗಿ ಕೂಡಿಕೊಂಡು ಯುದ್ದಮಾಡುವಾಗ ತಲೆಗಳು ಹರಿದುವು, ಪಕ್ಕೆಗಳು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy