SearchBrowseAboutContactDonate
Page Preview
Page 522
Loading...
Download File
Download File
Page Text
________________ ಏಕಾದಶಾಶ್ವಾಸಂ /೫೧೭ ಕುರುಬಲಮೆಲ್ಲಂ ಕುರುಕುಳವನಸಿಂಹಂ ಶರಪಂಜರದೊಳೊಆಗಿದನಿನ್ನೆಮ್ಮಂ ಕಾವರಾರೆಂದೊಲ್ಲ ನುಲಿದೋಡಿ ಬೀಡಂ ಪೊಕ್ಕಾಗಳ್ ಧರ್ಮಪುತ್ರಂ ನಿಜಾನುಜ ಸಹಿತಂ ಬಂದು ಬಲಗೊಂಡು ಕಾಲ ಮೇಲೆ ಕವಿದು ಪಟ್ಟು ಕಂ ಕರುಣದಿನಮ್ಮಂ ತಾಸ್ಟೋಲ್ ತರುವಲಿಗಳನೆ ತಿರೆಯುಂ ನೋಡಿದವೇನಮ ಗರಸಿಕೆಯೋ ಪೇಟೆಮೆಂದು ಶೋಕಂಗೆಯರ್ I ನಡಪಿದಜ್ಜ‌ ನೀಮಿಂ | ೪೮ ವ|| ಅಂತು ಶೋಕಂಗೆಯೊಡೆ ನೀಮಂತನಲ್ವೇಡ ಕ್ಷತ್ರಿಯಧರ್ಮಮಿಂತರ್ದಲ್ವೇಡ ಬೀಡಿಂಗೆ ಪೋಗಿಮೆಂದೊಡೆ ಮಹಾಪ್ರಸಾದಮಂತೆ ಗೆಲ್ವಮೆಂದನಿಬರುಮೆಆಗಿ ಪೊಡೆವಟ್ಟು ಪೋದರಾಗಳ್ ದುರ್ಯೋಧನಂ ಬಂದು ಪೊಡೆವಟ್ಟು ಚoll ಇತಿವುದನಾಂತ ಮಾರ್ವಲಮನಿನ್ನೆಗಮಚ್ಚರಿಯಾಗೆ ತಾಗಿ ತ ಆಟದಿರಿದೊಂದವಸ್ಥೆ ನಿಮಗೆನ್ನಯ ಕರ್ಮದಿನಾದುದೆಂದೊಡಿಂ | ಮರೆವುದು ಕಂದ ಪಾಂಡವರ ವೈರಮನೆನ್ನೊಡವೋಕೆ ಕೋಪಮುಂ ಕಲುಪುಮೊಡಂಬಡೇವುದದನಿನ್ನುಮೊಡಂಬಡು ಸಂಧಿಮಾಡುವಂ || ೪೯ ವ|| ಎಂಬುದುಂ ದುರ್ಯೋಧನನಿಂತೆಂದಂ ಶರೀರದಿಂದ ತೊಲಗಿಹೋಗುವ ಜೀವವನ್ನು ಹೋಗುವುದಕ್ಕೆ ಅವಕಾಶ ಕೊಡದೆ ಸ್ಟೇಚ್ಛಾಮರಣಿಯಾದುದರಿಂದ ಉತ್ತರಾಯಣವು ಬರುವವರೆಗೆ ಇರಿಸಿದನು. ಆಗ ಕೌರವಸೈನ್ಯವೆಲ್ಲವೂ ಕುರುಬಲವೆಂಬ ಕಾಡಿಗೆ ಸಿಂಹದೋಪಾದಿಯಲ್ಲಿದ್ದ ಭೀಷ್ಮನು ಶರಪಂಜರದಲ್ಲೊರಗಿದನು, ಇನ್ನು ನಮ್ಮನ್ನು ರಕ್ಷಿಸುವವರಾರು ಎಂದು ನಿಧಾನವಾಗಿ ನುಡಿದು ಓಡಿ ಬೀಡನ್ನು ಸೇರಿತು. ಧರ್ಮರಾಜನು ತನ್ನ ತಮ್ಮಂದಿರೊಡನೆ ಬಂದು ಪ್ರದಕ್ಷಿಣೆ ಮಾಡಿ ಭೀಷ್ಮರ ಕಾಲ ಮೇಲೆ ಕವಿದುಬಿದ್ದು ಅತ್ತನು. ೪೮. ತಬ್ಬಲಿಗಳಾದ ನಮ್ಮನ್ನು ದಯೆಯಿಂದ ತಾಯಿಯ ಹಾಗೆ ಸಾಕಿದ ಅಜ್ಜರಾದ ನೀವು ಈ ಸ್ಥಿತಿಯಲ್ಲಿರುವುದನ್ನು ನೋಡಿದೆವು. ನಮಗೆ ಎಂತಹ ಅರಸಿಕೆಯೋ ಹೇಳಿ ಎಂದು ದುಃಖಪಟ್ಟನು. ವ| 'ನೀವು ಹಾಗೆ ಹೇಳಬೇಡಿ; ಕ್ಷತ್ರಧರ್ಮವೇ ಹಾಗೆ; ಬೀಡಿಗೆ ಹೋಗಿ' ಎನ್ನಲು 'ಮಹಾಪ್ರಸಾದ ಹಾಗೆಯೇ ಮಾಡುತ್ತೇವೆ' ಎಂದು ಎಲ್ಲರೂ ಎರಗಿ ನಮಸ್ಕಾರ ಮಾಡಿ ಹೋದರು. ಆಗ ದುರ್ಯೋಧನನು ಬಂದು `ನಮಸ್ಕಾರಮಾಡಿ ಹೇಳಿದನು. ೪೯. 'ಪ್ರತಿಭಟಿಸಿದ ಪರಪಕ್ಷವನ್ನು ಇಲ್ಲಿಯವರೆಗೆ ಆಶ್ಚರ್ಯವಾಗುವ ಹಾಗೆ ತಗುಲಿ ಕೂಡಿಕೊಂಡು ಕತ್ತರಿಸಿದಿರಿ. ಈಗ ಈ `ಶರಶಯನದಲ್ಲಿ ಮಲಗುವ ದುರವಸ್ಥೆಯು ನನ್ನ ಪುರಾತನ ಕರ್ಮದಿಂದಾಯಿತು ಎನ್ನಲು ಭೀಷ್ಮನು 'ಮಗು, ಪಾಂಡವರ ಮೇಲಿನ ದ್ವೇಷವನ್ನು ಇನ್ನು ಮೇಲಾದರೂ ಬಿಡು. ಕೋಪವೂ ದ್ವೇಷವೂ ನನ್ನೊಡನೆ ಹೋಗಲಿ; ವೈರದಿಂದೇನು ಪ್ರಯೋಜನ? ನೀನು ಒಪ್ಪುವವನಾಗು ಸಂಧಿಯನ್ನು ಮಾಡುತ್ತೇನೆ. ವ|| ಎನ್ನಲು ದುರ್ಯೊಧನನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy