________________
ಉಪೋದ್ಘಾತ / ೪೭ ಅವನ ಪ್ರಶಂಸೆಗಾಗಿಯೇ ಮೀಸಲಾಗಿಸಿದ್ದಾನೆ. ಸುಭದ್ರಾಹರಣ, ಖಾಂಡವದಹನ, ಇಂದ್ರಕೀಲಗೋಗ್ರಹಣ, ಸೈಂಧವವಧೆ, ಕರ್ಣಾರ್ಜುನರ ಯುದ್ಧಪ್ರಕರಣಗಳಲ್ಲಿ ಅವನ ಸಾಹಸಪರಾಕ್ರಮಗಳು ಅದ್ಭುತವಾಗಿ ವರ್ಣಿತವಾಗಿವೆ. ಇತಿಹಾಸವ್ಯಕ್ತಿಯಾದ ಅರಿಕೇಸರಿಯ ಪ್ರಶಂಸೆಯೇ ಪ್ರಧಾನವಾದ ಗುರಿಯಾದುದರಿಂದ ಅವನ ಪ್ರತಿನಿಧಿಯಾದಪೂರ್ವಾವತಾರವಾದ ಇವನನ್ನು ಅವನ ಬಿರುದು ಬಾವಲಿಗಳಿಂದಲೇ ಸಂದರ್ಭ ಸಿಕ್ಕಿದಾಗಲೆಲ್ಲ ಕವಿ ಹೊಗಳುತ್ತಾನೆ. ಗ್ರಂಥಾದಿಯ ನಾಂದಿ ಪದ್ಯಗಳಲ್ಲಿ ಆಶ್ವಾಸದ ಆದಿ ಅಂತ್ಯ ಪದ್ಯಗಳಲ್ಲಿ ಅವನ ಶ್ಲಾಘನರೂಪವಾದ ವಿಷಯಗಳೇ ಉಕ್ತವಾಗಿವೆ. ಆಚಾರ್ಯರಾದ ದ್ರೋಣರೂ ಪಿತಾಮಹರಾದ ಭೀಷ್ಮರೂ ಅವನನ್ನು ಜಯಿಸುವುದು ಅಸಾಧ್ಯವೆನ್ನುತ್ತಾರೆ. ಅವನಿಗೆ ಗುರುಹಿರಿಯರಲ್ಲಿದ್ದ ವಿಧೇಯತೆ ಬಹು ಶ್ಲಾಘನೀಯವಾದುದು. ಅಣ್ಣನ ಮಾತಿನ ಪ್ರಕಾರ ದುರ್ಯೊಧನನನ್ನು ಗಂಧರ್ವನಿಂದ ಬಿಡಿಸಿ ತರುತ್ತಾನೆ. ಕರ್ಣ ದುರ್ಯೊಧನಾದಿಗಳಿಗೂ ಅವನ ಪರಾಕ್ರಮ ತಿಳಿಯದ ವಿಷಯವಲ್ಲ. ತಮ್ಮ ಕಡೆಯವರಿಗೆ ಆಪತ್ತೊದಗಿದಾಗಲೆಲ್ಲ ಅದನ್ನು ಪರಿಹಾರ ಮಾಡುವವನು ಅವನೇ. ಅವನ ಶಕ್ತಿಸಾಮರ್ಥ್ಯಗಳನ್ನು ಅರಿಯದವರಿಲ್ಲ, ಅವನಿಗೆ ದೈವಾನುಗ್ರಹ ಪೂರ್ಣವಾಗಿದೆ. ಇಂದ್ರನು ಅವನಿಗಾಗಿ ಕರ್ಣನಿಂದ ಕವಚಕುಂಡಲಗಳನ್ನು ಕಸಿದುಕೊಂಡ. ತನ್ನ ಗಂಟಲನ್ನಿಕ್ಕಿದರೂ ಶಿವನು ಇವನಿಗೆ ಪಾಶುಪತಾಸ್ತವನ್ನು ಇತ್ತನು. ಗೌರಿಯು ತಲ್ಲಟಿಯಾಗಿ ಅಂಜಲಿಕಾಸ್ತ್ರವನ್ನೂ ಕೊಟ್ಟಳು. ಇಂದ್ರನು ಅರ್ಧಾಸನವನ್ನಿತ್ತು ರಾಕ್ಷಸರ ಸಂಹಾರಕ್ಕೆ ಅವನ ನೆರವನ್ನು ಪಡೆದನು. ಅಗ್ನಿ ಅವನಿಂದ ಖಾಂಡವ ವನವನ್ನಪೇಕ್ಷಿಸಿ ತೃಪ್ತಿ ಪಡೆದನು. ಅವನ ಸೌಂದರ್ಯವು ಅತ್ಯಂತ ಮೋಹಕವಾದುದು. ರಂಭಾದಿ ದೇವವೇಶ್ಯಯರೂ ಅವನಿಗೆ ಸೋಲುತ್ತಾರೆ. ಆದರೆ ತನ್ನ ಶೌಚಗುಣದಿಂದ ಅವರ ಬಲೆಗೆ ಬೀಳದೆ ರಂಭೆಯಿಂದ ಶಾಪವನ್ನು ಪಡೆದರೂ ತನಗೆ ಅನುಕೂಲವಾದ ಸಂದರ್ಭದಲ್ಲಿ ಅದನ್ನು ಉಪಯೋಗಿಸಿಕೊಳ್ಳುತ್ತಾನೆ. ಮೊದಲಿನಿಂದ ಕೊನೆಯವರೆಗೆ ಪೂರ್ವಜನ್ಮದಲ್ಲಿ ನರ ನಾರಾಯಣರ ಸಂಬಂಧವನ್ನು ಪಡೆದಿದ್ದ ಮುಕುಂದನು ಅವನಿಗೆ ಪ್ರೇರಕನೂ ಪೋಷಕನೂ ಆಗಿ ಅವನ ಪೆಂಪನ್ನು ಪೂರ್ಣವಾಗಿ ಪ್ರದರ್ಶಿಸಿ ಯುದ್ದಾಂತ್ಯದಲ್ಲಿ ಧರ್ಮರಾಯನು ಅರ್ಜುನನನ್ನು ಕುರಿತು
ಪ್ರಾಯದ ಪಂಪ ಪಂಪು, ಎಮಗೆ ಮೀಟಿದರಂ ತವ ಕೊಂದ ಪೆಂಪು, ಕ. ಟ್ಯಾಯದ ಪಂಪು, ಶಕ್ರನೊಡನೆಳೆದ ಪೆಂಪಿವು ಹೆಂಪುವೆತ್ತು ನಿ ಟ್ನಾಯುಗಳಾಗಿ ನಿನ್ನೊಳಮರ್ದಿದರ್ುವು, ನೀಂ ತಲೆವೀಸದೆ, ಉರ್ವರಾ ಶ್ರೀಯನಿದಾಗದು ಎನ್ನದೆ ಒಳಕೊಳ್ ಪರಮೋತ್ಸವದಿಂ ಗುಣಾರ್ಣವಾ ||
ಎಂದಾಗ ದೇವಕೀಪುತ್ರನು “ಅಶೇಷಧರಾಭಾರಮಂ ಶೇಷಂ ತಾಳುವಂತೆ ವಿಕ್ರಮಾರ್ಜುನಂಗಲ್ಲದೆ ಪೆಲಿಂಗೆ ತಾಳಲರಿದು; ಇದರ್ಕಾನುಮೊಡಂಬಡುವೆನ್' ಎಂದು ಹೇಳಿ ಅವನ ಪಟ್ಟಾಭಿಷೇಕಕಾರ್ಯವನ್ನು ತನ್ನ ಮೇಲ್ವಿಚಾರಣೆಯಲ್ಲಿಯೇ ನಡೆಸುವನು. ಪಂಪನು ವಿಕ್ರಮಾರ್ಜುನನ ಪಾತ್ರವನ್ನು ಅದ್ಭುತವಾದ ರೀತಿಯಲ್ಲಿ ಚಿತ್ರಿಸಿ ಕಾವ್ಯದ ನಾಮವಾದ 'ವಿಕ್ರಮಾರ್ಜುನ ವಿಜಯ'ವೆಂಬುದನ್ನು ಸಾರ್ಥಕವನ್ನಾಗಿಸಿದ್ದಾನೆ.