SearchBrowseAboutContactDonate
Page Preview
Page 519
Loading...
Download File
Download File
Page Text
________________ ೫೧೪ | ಪಂಪಭಾರತಂ ಮll ಶರಸಂಧಾನದ ಬೇಗಮಂಬುಗಳನಂಬೀಂಬಂತೆ ಮಣಂಬಿನಾ ಗರವೆಂಬಂತೆನೆ ಪಾಯ್ಯರಾತಿ ಶರ ಸಂಘಾತಂಗಳಂ ನುರ್ಗಿ ನೇ || ರ್ದರಿದಟ್ಟು೦ಬರಿಗೊಂಡು ಕೂಡ ಕಡಿದಂತಾ ಸೈನಮಂ ಪರ್ವಿ ಗೂ ಉರಿಗೊಂಡುರ್ವಿದುವಾ ರಸಾತಳಮುಮಂ ಗಾಂಗೇಯನಸ್ತಾಳಿಗಳ 1 ೪೦ ವ|| ಅಂತು ಭೀಷ್ಮಂ ಗ್ರೀಷ್ಮಕಾಲದಾದಿತ್ಯನಂತೆ ಕಾಯ್ದಂತಕಾಲದಂತಕನಂತ ಕೆಳರ್ದು ವಿಳಯಕಾಲಮೇಘದಂತೆ ಮೋಟಗಿ ಮಹಾಪ್ರಳಯಭೈರವನಂತೆ ಮಸಗಿ ಪಯಿಂಛಾಸಿರ್ವರ್ ಮಕುಟಬದ್ಧರಂ ಕೊಂದಾಗಳ್ಚಂ|| ಮಣಿಮಕುಟಾಳಿಗಳ್ವರಸುರುಳ ನರೇಂದ್ರರಿರಂಗಳೊಳಣಾ ಮಣಿಗಳ ದೀಪ್ತಿಗಳ್ ಬೆಳಗೆ ಧಾತ್ರಿಯನೊಯ್ಯನೆ ಕಂಡಿ ಮಾಡಿ ಕಣ್ | ತಣಿವಿನಮಂದು ನಿಂದಿಳಿದ ಕೊಳ್ಳುಳನಂ ನಡೆ ನೋಟ್ಟಿಹೀಂದ್ರರೊಳ್ | ಸೆಣಸಿದುವೆಂದೊಡೇವೊಗಟ್ಟುದೇರ್ವಸನಂ ಸುರಸಿಂಧುಪುತ್ರನಾ || ೪೧ ವ|| ಅಂತು ಸೋಮಕಬಲಮೆಲ್ಲಮಂ ಪೇಳ ಹೆಸರಿಲ್ಲದಂತು ಕೊಂದು ಶ್ರೀ ಜಯಬಲಕ್ಕಪಜಯಮಾಗೆ ಕೊಂದುವೊಡಿಸಿಯುಮಿಕ್ಕಿ ಗಲ್ಲ ಮಲ್ಲನಂತಿರ್ದಾಗಳ ಜಗದೇಕಮಲ್ಲಂ ಮೊದಲಾಗೆ ವಿರಾಟ ವಿರಾಟಜ ದ್ರುಪದ ದ್ರುಪದಜ ಚೇಕಿತಾನ ಯುಧಾಮನೂತಮೋಜಸ್ವಭದ್ರ ಘಟೋತ್ಕಚ ಭೀಮಸೇನ ನಕುಲ ಸಹದೇವ ಸಾತ್ಯಕಿ ಸೈನ್ಯದಿಂದೊಡಗೂಡಿ ಬಂದು ಆರ್ಭಟಿಸಿ ಮುತ್ತಿದರು. ೪೦. ಭೀಷ್ಮನ ಬಾಣಪ್ರಯೋಗಮಾಡುವ ವೇಗವು ಬಾಣಗಳು ಬಾಣಗಳನ್ನು ಹೆರುತ್ತಿರುವ ಹಾಗೆ, ಅಥವಾ ಬಾಣಗಳ ಆಕರದಂತಿರಲು ಆ ಭೀಷ್ಮನ ಬಾಣಗಳು ಹಾರಿ ಬರುತ್ತಿರುವ ಶತ್ರುಗಳ ಬಾಣಸಮೂಹವನ್ನು ಪುಡಿಮಾಡಿ ನೇರವಾಗಿ ಕತ್ತರಿಸಿ, ತುಂಡುಮಾಡಿ, ಹಿಂಬಾಲಿಸಿ ಆಗಲೇ ಕತ್ತರಿಸಿದಂತೆ, ಆ ಸೈನ್ಯವನ್ನು ಆವರಿಸಿ ಕತ್ತನ್ನು ಕತ್ತರಿಸಿ ಪಾತಾಳವನ್ನು ತುಂಬಿದುವು ವll .ಭೀಷ್ಮನು ಬೇಸಿಗೆಯ ಸೂರ್ಯನಂತೆ ಕೋಪಗೊಂಡು ಪ್ರಳಯಕಾಲದ ಯಮನಂತೆ ರೇಗಿ ವಿಳಯಕಾಲದ ಮೋಡದಂತೆ ಶಬ್ದಮಾಡಿ ಮಹಾಪ್ರಳಯಭೈರವನಂತೆ ಕೆರಳಿ ಹತ್ತು ಸಾವಿರ ರಾಜರನ್ನು ಕೊಂದನು. ೪೧. ರತ್ನಖಚಿತವಾದ ಕಿರೀಟಗಳ ಸಮೂಹದೊಡನೆ ಉರುಳಿದ ಚಕ್ರವರ್ತಿಗಳ ತಲೆಗಳು ಆ ದಿನದ ಭಗ್ನವಾದ ಯುದ್ದವನ್ನು ನೋಡಬೇಕೆಂಬ ಕುತೂಹಲದಿಂದ ಭೂಮಿಯನ್ನು ನಿಧಾನವಾಗಿ ರಂಧ್ರಮಾಡಿಕೊಂಡು ಪಾತಾಳಲೋಕದಿಂದ ಬಂದು ಕಣ್ಣು ತೃಪ್ತಿಯಾಗುವಷ್ಟು ಇಣಿಕಿ ನೋಡುತ್ತಿರುವ ಸರ್ಪಗಳ ಹೆಡೆಯ ರತ್ನಗಳ ಕಾಂತಿಯನ್ನೂ ಸ್ಪರ್ಧಿಸುವಂತಿತ್ತು ಎನ್ನುವಾಗ ವl (ಭೀಷ್ಮನು) ಹಾಗೆ ಸೋಮಕ ಸೈನ್ಯವೆಲ್ಲವನ್ನೂ ಹೇಳಲು ಹೆಸರಿಲ್ಲದ ಹಾಗೆ ಕೊಂದು ಶ್ರೀಜಯಬಲಕ್ಕೆ ಸೋಲುಂಟಾಗುವ ಹಾಗೆ ಸಂಹರಿಸಿಯೂ ಓಡಿಸಿಯೂ ಹೊಡೆದೂ ಗೆದ್ದ ಜಟ್ಟಿಯ ಹಾಗೆ ಇದ್ದನು. ಜಗದೇಕಮಲ್ಲನಾದ ಅರ್ಜುನನೇ ಮೊದಲಾದ ವಿರಾಟ, ಉತ್ತರ, ದ್ರುಪದ, ದೌಪದೇಯ, ಚೇಕಿತಾನ, ಯುಧಾಮನ್ಯು, ಉತ್ತಮೋಜ, ಅಭಿಮನ್ಯು, ಘಟೋತ್ಕಚ, ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ಪಂಚಪಾಂಡವರೇ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy