SearchBrowseAboutContactDonate
Page Preview
Page 517
Loading...
Download File
Download File
Page Text
________________ ೫೧೨/ ಪಂಪಭಾರತಂ , ಇಸುವ ಧನುರ್ಧರರಿಂ ಪಾ ಯಿಸುವ ದಬಂಗಳಿನಗುರ್ವು ಪರ್ವುವಿನಂ ಚೋ | ದಿಸುವ ರಥಂಗಳಿನೆಂಟುಂ ದೆಸೆ ಮಸುಳ್ಳಿನಮಿದುವಾಗಳುಭಯಬಲಂಗಳ | ಅಲೆದಟ್ಟಿದ ಕರಿ ಘಟೆಗಳ ಬಳಗದಿನುಚ್ಚಳಿಸಿ ಮೊರೆವ ನೆತ್ತರ ತೆರೆಗಳ | ಸುಟಿಸುತಿದೊಡವರಿದುವು ಕ ಊಟೆಯೊಳ್ ಭೋರ್ಗರೆದು ಹರಿವ ತೋಜಗಳ ತೆಜದಿಂ || ೩೬ ವll ಅಂತು ಚಾತುರ್ದಂತಮೊಂದೊಂದರಂತೆ ನಡುವಗಲ್ವರು ಕಾಡುವುದುಂ ನಾವಿಂದಿನನುವರಮನನಿಬರುಮೊಂದಾಗಿ ಭೀಷ್ಮರೋಳ್ ಕಾದುವಮೆಂದು ಸಮಕಟ್ಟಿ ಧರ್ಮಪುತ್ರ ಕದನತ್ರಿಣೇತ್ರನಂ ಮುಂದಿಟ್ಟು ಸಮಸ್ತಬಲಂಬೆರಸು ಕಾದುವ ಸಮಕಟ್ಟಂ ದುರ್ಯೋಧನ ನಡೆದುಚ ಕುರುಬಲಮೆಂಬುದೀ ಸುರನದೀಜನ ತೋಳ್ವಲಮಂಬ ವಜ್ರ ಪಂ ಜರದೊಳಗಿರ್ದು ಬಪುದು ಪಾಂಡವ ಸೈನ್ಯಮುಮಿಂದು ಭೀಷರೊ || ರ್ವರೊಳಿರದಾಂತು ಕಾದಲವರಂ ಪೊಅಗಿಕ್ಕಿ ಕಡಂಗಿ ಕಾದಿ ನಿ ತರಿಸುವೆನೆಂದು ಪಾಂಡವ ಬಲದಿರಂ ತಳೆಸಂದು ತಾಗಿದಂ || ೩೭ ವ|| ಅಂತು ತಾಗುವುದುಂ ಸಾತ್ಯಕಿ ಕೃತವರ್ಮನೊಳ್ ಯುಧಿಷ್ಠಿರಂ ಶಲ್ಯನೊಳ್ ಸೌಭದ್ರನಶ್ವತ್ಥಾಮನೊಳ್ ಸಹದೇವಂ ಶಕುನಿಯೊಳ್ ನಕುಲಂ ಚಿತ್ರಸೇನನೊಳ್ ಚೇಕಿತಾನಂ ಅನುಕರಿಸಿತು. ೩೫. ಬಾಣಪ್ರಯೋಗಮಾಡುವ ಬಿಲ್ದಾರರಿಂದಲೂ ಮುನ್ನುಗ್ಗಿಸುವ ಸೈನ್ಯಗಳಿಂದಲೂ ಭಯಂಕರತೆಯು ಹೆಚ್ಚುತ್ತಿರಲು ನಡೆಸುತ್ತಿರುವ ತೇರುಗಳಿಂದ ಎಂಟು ದಿಕ್ಕುಗಳೂ ಮಂಕಾಗುತ್ತಿರಲು ಎರಡು ಸೈನ್ಯಗಳೂ ಯುದ್ಧ ಮಾಡಿದುವು. ೩೬. ಸತ್ತು ನಾಶವಾದ ಆನೆಗಳ ರಾಶಿಯಿಂದ ಮೇಲಕ್ಕೆ ಹಾರಿ ಶಬ್ದಮಾಡುತ್ತಿರುವ ರಕ್ತದ ಅಲೆಗಳು ಸುಳಿಸುಳಿದು ಕಲ್ಲುದಾರಿಯಲ್ಲಿ ಭೋರೆಂದು ಶಬ್ದ ಮಾಡುತ್ತ ಹರಿಯುವ ನದಿಗಳ ರೀತಿಯಿಂದ ಒಡನೆ ಹರಿದುವು. ವ|| ಚತುರಂಗಬಲವೂ ಒಂದೊಂದು ಒಂದೊಂದರಲ್ಲಿ ನಡುಹಗಲಿನವರೆಗೆ ಒಂದೇ ಸಮನಾಗಿ ಕಾದಿದುವು. ಧರ್ಮರಾಜನು ನಾವು ಭೀಷರೊಡನೆ ಇಂದಿನ ಯುದ್ಧವನ್ನು ಎಲ್ಲರೂ ಒಟ್ಟಿಗೆ ಸೇರಿ ಕಾಡೋಣ ಎಂದು ನಿಷ್ಕರ್ಷಿಸಿ ಅರ್ಜುನನನ್ನು ಮುಂದಿಟ್ಟುಕೊಂಡು ಸಮಸ್ತಸೈನ್ಯವನ್ನೂ ಕೂಡಿಸಿದನು. ಈ ಸುದ್ದಿ ದುರ್ಯೊಧನನನ್ನೂ ಮುಟ್ಟಿತು. ೩೭. 'ಈ ಕೌರವ ಸೈನ್ಯವೆಂಬುದು ಭೀಷ್ಮನ ಬಾಹುಬಲವೆಂಬ ವಜ್ರಪಂಜರದಲ್ಲಿದ್ದು ಬದುಕುತ್ತಿದೆ. ಪಾಂಡವಸೈನ್ಯವು ಈ ದಿನ ಭೀಷರೊಬ್ಬರನ್ನು ಬಿಡದೆ ಪ್ರತಿಭಟಿಸಿ ಕಾದಲು ಯೋಚಿಸಿದೆ. ಆದುದರಿಂದ ಅವರನ್ನು ಈ ದಿನ ನಾನು ಹಿಂದಿಕ್ಕಿ (ರಕ್ಷಿಸಿ) ಉತ್ಸಾಹದಿಂದ ಕಾದಿ ಕಾರ್ಯಸಾಧನೆ ಮಾಡುತ್ತೇನೆ' ಎಂದು ದುರ್ಯೊಧನನು ನಿಶ್ಚಯಿಸಿ ಪಾಂಡವಸೈನ್ಯಕ್ಕೆ ಇದಿರಾಗಿ ಬಂದು ತಾಗಿದನು (ಪ್ರತಿಭಟಿಸಿದನು). ವ|| ಸಾತ್ಯಕಿಯು ಕೃತವರ್ಮನೊಡನೆಯೂ ಧರ್ಮರಾಜನು ಶಲ್ಯನೊಡನೆಯೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy