________________
೫೧೦ | ಪಂಪಭಾರತಂ
ಕಣ್ಣು ಪೊಡೆವಟ್ಟು ನಯಮರ್ದ
ಗೊಣ್ಣಿರೆ ಪತಿ ನುಡಿದನೆನಗೆ ದೇವ ಕಲುಷಂ 1 ಗೊಣ್ಣಾಗಳ್ ಕಾವರ್ ಕಣೆ ಗೊಣ್ಣವೊಲೆಂದೆಂಬ ಮಾತಿನಂತಾಗಿರದೇ ||
ತೊಂಬಯ್ಯಾಸಿರ್ವರ್ ನಿ
ಮಂಬಿನ ಬಂಬಲೊಳೆ ಮಕುಟಬದ್ಧ ಮಡಿದರ್ |
ನಂಬಿಂ ನಂಬಲಿಮಿಂದಿಂ
ಗೊಂಬತ್ತು ದಿನಂ ದಲೆಮ್ಮ ಬೆನ್ನಲೆ ನಿಂದಿರ್ ||
ಚಕ್ರಿಯ ಚಕ್ರದೊಳಂ ತೊಡ
ರ್ದಾಕ್ರಮಿಸಿದುದೆಚ್ಚ ನಿಜ ಪತತಿ ದಲೆನೆ ನಿ | ಯೀ ಕ್ರಮಕಮಲಕ್ಕೆಳಗದೆ
ವಕ್ರಿಸಿ ಭೂಚಕ್ರದೊಳಗೆ ಬಾಲ್ವರುಮೊಳರೇ ||
ಸಾವೆ ನಿಮತಿಚ್ಚೆಯೆನೆ ಪೊಣ
ರ್ದಾವಂ ತಳಿಯೆದು ಗೆಲ್ವನೆಮಗದಂದಂ | ಸಾವು ದಿಟಂ ನಿಮಡಿ ಕೊಲೆ ಸಾವುದು ಲೇಸ ಸುಗತಿವಡೆಯಕ್ಕುಂ
೨೮
೨೯
20
೩೧
ವ|| ಎಂದೊಡದೆಲ್ಲಮನೆಯೇ ಕೇಳು ಕರುಣಾರಸ ಹೃದಯನಾಗಿ ಮಮ್ಮನ ಮೊಗಮಂ ಕೂರ್ಮೆಯಿಂ ನೋಡಿ ಕಣ್ಣ ನೀರಂ ನೆಗಪಿ
೨೮. ನಮಸ್ಕಾರಮಾಡಿ ಪೂರ್ವಕವಾಗಿ ಧರ್ಮರಾಜನು ಹೇಳಿದನು. ನನಗೆ ಸ್ವಾಮಿಯಾದ ತಾವು ಕೋಪಮಾಡಿದರೆ 'ರಕ್ಷಿಸಬೇಕಾದವರೇ ಬಾಣವನ್ನು ಹೂಡಿದ ಹಾಗೆ' ಎಂಬ ಗಾದೆಯ ಮಾತಿನಂತಾಗುವುದಿಲ್ಲವೆ? ೨೯. ತೊಂಬತ್ತುಸಾವಿರ ಕಿರೀಟಧಾರಿಗಳಾದ ರಾಜರು ನಿಮ್ಮ ಬಾಣದ ಸಮೂಹದಿಂದ ಸತ್ತರು. ನಂಬಿ, ನಂಬದಿರಿ ಈ ಒಂಬತ್ತು ದಿನವೂ ನೀವು ನಮಗೆ ವಿರೋಧವಾಗಿ ನಿಂತಿರಿ. ೩೦. ನೀವು ಪ್ರಯೋಗಿಸಿದ ಬಾಣವು ಶ್ರೀಕೃಷ್ಣನ ಚಕ್ರವನ್ನೂ ಅಡ್ಡಗಟ್ಟಿ ಆಕ್ರಮಿಸಿತು ಎನ್ನುವಾಗ ನಿಮ್ಮಈ ಪಾದಕಮಲಕ್ಕೆ ನಮಸ್ಕಾರಮಾಡದೆ ವಕ್ರವಾಗಿ ನಿಂತು ಈ ಭೂಮಂಡಲದಲ್ಲಿ ಬಾಳುವವರೂ ಇದ್ದಾರೆಯೇ ? ೩೧. ನಾವು ಸಾಯುವುದೇ ನಿಮ್ಮಿಚ್ಛೆಯಾದರೆ (ನೀವು ಕೊಲ್ಲುವೆನೆಂದು ಮನಸ್ಸು ಮಾಡಿಬಿಟ್ಟರೆ ನಿಮ್ಮನ್ನು ಪ್ರತಿಭಟಿಸಿ ಯುದ್ಧಮಾಡಿ ಯಾವನು ಗೆಲ್ಲುತ್ತಾನೆ. ಆದುದರಿಂದ ನಮಗೆ ಸಾವೆಂಬುದು ನಿಶ್ಚಯ. ಸದ್ಗತಿಯನ್ನು ಹೊಂದುವುದಕ್ಕೆ ನಿಮ್ಮಿಂದ ಕೋಪಿಸಿಕೊಂಡು ಸಾಯುವುದು ಉತ್ತಮವಲ್ಲವೇ ? ವll ಅದನ್ನು ಪೂರ್ಣವಾಗಿ ಕೇಳಿ ಕರುಣಾರಸಹೃದಯನಾಗಿ ಭೀಷ್ಮನು ಮೊಮ್ಮಗನ ಮುಖವನ್ನು ಪ್ರೀತಿಯಿಂದ ನೋಡಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು ಹೇಳಿದನು.