SearchBrowseAboutContactDonate
Page Preview
Page 512
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೦೭ 'ಚಂtು ನಡಪಿದನಜ್ಜನೆಂದು ವಿಜಯಂ ಕಡುಕೆಯಿಸನೆನ್ನ ಮಂಮನಾಂ ನಡಪಿದನೆಂದು ಸಿಂಧುತನಯಂ ಕಡುಕೆಯ್ದಿಸನಿಂತು ಪಾಡುಗಾ | ದೊಡನೊಡನಿರ್ವರುಂ ಮೆಳಯಲೆಂದೆ ಶರಾಸನ ವಿದ್ಯೆಯ ಪಡ ಊಡಿಸಿದರೆಮಿದಿರೊಳ್ ಮಲೆದೊಡ್ಡಿದ ಚಾತುರಂಗಮಂ || ೧೮ ವ|| ಅಂತು ತಿಳಿದು ಪೊತ್ತು ಕೆಯಾದು ಕಾದೆ ಸರಿತ್ತುತನ ಸುರಿವ ಸರಲ ಮಳಯೊಳಚಿದ ನಿಜ ವರೂಥಿನಿಯ ಸಾವು ನೋವುಮೇವಮಂ ಮಾಡೆಚಂ|| ಮುನಿದೆರಡಂಬಿನೊಳ್ ರಥಮುಮಂ ಪದವಿಲುಮನೆಯ ಪಾರ್ದು ನ ಕನೆ ಕಡಿದಿಂದ್ರನಂದನನಳುರ್ಕೆಯಿನಾರ್ದೊಡೆ ದಿವ್ಯ ಸಿಂಧುನಂ | ದನನಿರದೇಬೇತೆ ರಥಮಂ ಪೆಜತೋಂದು ಶರಾಸನಕ್ಕೆ ಮೆ. ಲನೆ ನಿಡುದೋಳನುಯ್ದು ಕರಮಚ್ಚರಿಯಾಗೆ ಕಡಂಗಿ ಕಾದಿದಂ 11 ೧೯ ವ| ಅಂತು ತೋಡುಂ ಬೀಡುಂ ಕಾಣಲಾಗದೆರ್ದೆಗಾಯಲೆಕ್ಕೆಯೆನೆಂಬತ್ತು ನಾಲ್ಕು ಲಕ್ಕ ಬಂಡಿಯೊಳಂಡ ತಂಡದೆ ತೀವಿದಕಾಂಡ ಪ್ರಳಯಾನಳ ವಿಸ್ತುಲಿಂಗೋಪಮಾನಂಗಳಪ್ಪ ನಿಶಿತ ಕಾಂಡಂಗಳಿಂದೊಡ್ಡಿದ ಚತುರ್ಬಲಂಗಳ ಮೆಯ್ಯೋಳ್ ರೋಮ ರೋಮಂದಪ್ಪದೆ ನಡುವನ್ನಮೆಚ್ಚು ಪಯಿಂಛಾಸಿರ್ವರ್ ಮಕುಟಬದ್ಧರುಮನೊಂದು ಲಕ್ಕ ಮದದಾನೆಯುಮಂ ೧೮. ಅಜ್ಜನು ನನ್ನನ್ನು ಸಾಕಿದನು ಎಂದು ಅರ್ಜುನನೂ ವಿಶೇಷ ಉತ್ಸಾಹದಿಂದ ಬಾಣಪ್ರಯೋಗಮಾಡುವುದಿಲ್ಲ. ನಾನು ಸಾಕಿದ ನನ್ನ ಮೊಮ್ಮಗ ಎಂದು ಭೀಷ್ಮನೂ ಕ್ರೂರವಾಗಿ ಬಾಣಪ್ರಯೋಗ ಮಾಡುವುದಿಲ್ಲ. ಹೀಗೆ ಇಬ್ಬರೂ ಸಾಂಪ್ರದಾಯಕವಾಗಿ ಶಸ್ತಕೌಶಲವನ್ನು ಮೆರೆಯುವುದಕ್ಕಾಗಿ ಮಾತ್ರ ಬಾಣಪ್ರಯೋಗಮಾಡಿ ಉತ್ಸಾಹದಿಂದ ಕೂಡಿದ ಚತುರಂಗಸೈನ್ಯವನ್ನು ಎಲ್ಲೆಡೆಯಲ್ಲಿಯೂ ಉರುಳಿಸಿದರು. ವ ಹಾಗೆ ಭೀಷ್ಮನು ಸ್ವಲ್ಪಕಾಲ (ಶತ್ರುಸೈನ್ಯಕ್ಕೆ ರಕ್ಷಣೆಕೊಟ್ಟು ಕಾದಿದರೂ ಭೀಷ್ಮನ ಧಾರಾಕಾರವಾಗಿ ಸುರಿಯುತ್ತಿರುವ ಬಾಣದ ಮಳೆಯಲ್ಲಿಯೇ ನಾಶವಾದ ತನ್ನ ಸೈನ್ಯದ ಸಾವೂ ನೋವೂ ಅರ್ಜುನನಿಗೆ ವಿಶೇಷ ಕೋಪವನ್ನುಂಟುಮಾಡಿತು. ೧೯. ಅವನು ಕೋಪಿಸಿಕೊಂಡು ಭೀಷ್ಕರ ರಥವನ್ನು ಹದವಾದ ಬಿಲ್ಲನ್ನು ಚೆನ್ನಾಗಿ ನೋಡಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ ಆರ್ಭಟಮಾಡಿದನು. ಭೀಷ್ಮನು ಸಾವಕಾಶಮಾಡದೆ ಬೇರೆ ರಥವನ್ನು ಹತ್ತಿಕೊಂಡು ತನ್ನ ದೀರ್ಘವಾದ ತೋಳನ್ನು ಬತ್ತಳಿಕೆಗೆ ನೀಡಿ ವಿಶೇಷ ಆಶ್ಚರ್ಯಕರವಾಗುವ ಹಾಗೆ ಉತ್ಸಾಹದಿಂದ ಕಾದಿದನು. ವ|| ಹಾಗೆ ಬಾಣವನ್ನು ತೊಡುವುದೂ ಬಿಡುವುದೂ ಕಾಣಲಾಗದ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಂದೇಸಲ ಎಂಬತ್ತು ನಾಲ್ಕು ಲಕ್ಷ ಬಂಡಿಯಲ್ಲಿ ರಾಶಿರಾಶಿಯಾಗಿ ತುಂಬಿದ್ದ ಅಕಾಲದ ಪ್ರಳಯಾಗ್ನಿಯ ಕಿಡಿಗಳಿಗೆ ಸಮಾನವಾದ ಹರಿತವಾದ ಬಾಣಗಳಿಂದ ಚತುರಂಗಸೈನ್ಯದ * ಶರೀರದಲ್ಲಿ ಒಂದು ಕೂದಲೂ ತಪ್ಪದೆ ನಾಟುವ ಹಾಗೆ ಹೊಡೆದು ಹತ್ತು ಸಾವಿರ `ರಾಜರನ್ನೂ ಒಂದು ಲಕ್ಷ ಮದ್ದಾನೆಯನ್ನೂ ಮೂರುಲಕ್ಷ ರಥವನ್ನೂ ಒಂದುಕೋಟಿ ತುರುಷ ಕುದುರೆಗಳನ್ನೂ ಹದಿನೆಂಟು ಕೋಟಿ ಕಾಲಾಳುಬಲವನ್ನೂ ಶ್ರಮವಿಲ್ಲದೆ 33
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy