SearchBrowseAboutContactDonate
Page Preview
Page 505
Loading...
Download File
Download File
Page Text
________________ ಕಂ ಏಕಾದಶಾಶ್ವಾಸಂ ಶ್ರೀ ಯುವತಿಯನಾ ವೀರ ಶ್ರೀ ಯುವತಿಗೆ ಸವತಿಮಾನೆಂದರಿ ನೃಪರು | ಛಾಯವೆರಸೆದುಕೊಂಡು ಧ ರಾ ಯುವತಿಗೆ ನೆಗಟ್ಟಿ ಹರಿಗನೊರ್ವನೆ ಗಂಡಂ !! ಎಂಬ ನಿಜ ಚರಿತಮಂ ಪಲ ರುಂ ಬಣ್ಣಿಸೆ ಕಿವಿಯನಾಂತು ಕೇಳುತ್ತುಮಳುಂ | ಬಂ ಬೀರಮೆನಿಸಿ ತನಗಿದಿ ರಂ ಬಂದು ಕಡಂಗಿ ಸತ್ತರಂ ಪೊಗಲುತ್ತುಂ || C ವ|| ಅಂತು ವಿಕ್ರಾಂತ ತುಂಗನಿರ್ಪನ್ನೆಗಮಿತ್ತಲೆರಡುಂ ಪಡೆಯ ನಾಯಕರಡೆಯ ನೊಂದ ತಮ್ಮಣುಗಾಳಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಣಳನುಡಿಯಲುಮೋವಲುಂ ಮರ್ದುಬೆಜ್ಜರಮನಟ್ಟುತ್ತುಮಿಕ್ಕಿದ ಸನ್ನಣಂಗಳಂ ಗೆಲ್ಲು ಕಣಕೆನೆ ಪೋಗುರ್ಚಿ ತಮ್ಮ ಮೆಯೊಳುಡಿದಂಬುಗಳುಮನೆಲ್ವಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಳ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯೊಳಂ ಬಾಳ ಕೋಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ ೧. ಐಶ್ವರ್ಯಲಕ್ಷ್ಮಿಗೆ ಜಯಲಕ್ಷ್ಮಿಯನ್ನು ಸವತಿಯನ್ನಾಗಿ ಮಾಡುತ್ತೇನೆಂದು ಶತ್ರುರಾಜರನ್ನು ಅವರ ಸಮರಸಾಮರ್ಥ್ಯದಿಂದ ಸೆಳೆದು ಅಧೀನಮಾಡಿಕೊಂಡು ಭೂದೇವಿಯ ಒಡೆಯನಾದ (ಭೂಪತಿ) ಅರ್ಜುನನೊಬ್ಬನೇ ಶೂರನಾದವನು ೨. ಎಂಬ ತನ್ನ ಚರಿತ್ರವನ್ನು ಅನೇಕರು ವರ್ಣಿಸುತ್ತಿರಲು ಅದನ್ನು ಕಿವಿಗೊಟ್ಟು ಕೇಳುತ್ತಲೂ ಅತಿಶಯ ಸಾಹಸಿಗಳೆನಿಸಿಕೊಂಡು ಉತ್ಸಾಹದಿಂದ ತನಗೆ ಇದಿರಾಗಿ ಬಂದು ಕಾದಿ ಸತ್ತವರನ್ನು ಹೊಗಳುತ್ತಲೂ ಇದ್ದನು. ವ|| ಹಾಗೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಇರುತ್ತಿರಲು ಎರಡು ಸೈನ್ಯದ ನಾಯಕರೂ ಸಾಯುವಷ್ಟು ನೋವನ್ನು ಪಡೆದಿದ್ದ ತಮ್ಮ ಪ್ರೀತಿಪಾತ್ರರಾದ ಸೇವಕರ, ತಮ್ಮ ಹೊಗಳಿಕೆಗೆ ಪಾತ್ರವಾದ ಆನೆಗಳ, ತಮ್ಮ ಮೆಚ್ಚಿನ ಕುದುರೆಗಳ ಹುಣ್ಣುಗಳನ್ನು (ಗಾಯವನ್ನು) ಗುಣಪಡಿಸುವುದಕ್ಕೂ ರಕ್ಷಿಸುವುದಕ್ಕೂ ಔಷಧವನ್ನೂ ಲೇಪನವನ್ನೂ ಕಳುಹಿಸುತ್ತಿದ್ದರು. ಅವರು ಧರಿಸಿದ್ದ ಕವಚಗಳನ್ನೂ ಭೇದಿಸಿಕೊಂಡು ನೇರವಾಗಿ ಒಳಕ್ಕೆ ಪ್ರವೇಶಿಸಿ ಚುಚ್ಚಿಕೊಂಡು ಶರೀರದೊಳಗೆ ಮುರಿದುಹೋಗಿದ್ದ ಬಾಣಗಳನ್ನೂ ಎಲುಬುಗಳನ್ನೂ ಕತ್ತಿ ಮತ್ತು ಮುಳ್ಳುಗೋಲುಗಳ ಚೂರುಗಳನ್ನೂ ಸೂಜಿಗಲ್ಲನ್ನು (ಅಯಸ್ಕಾಂತ) ತೋರಿಸಿ ತೆಗೆಯಿಸುತ್ತಿದ್ದರು. ವಜ್ರಮುಷ್ಟಿಯ ಪೆಟ್ಟಿನಿಂದಲೂ ಕತ್ತಿಯ ಇರಿತದಿಂದಲೂ ಸಿಡಿದುಹೋದ ತಲೆಯ ಚಿಪ್ಪುಗಳನ್ನು ಗಂಗಾನದಿಗೆ ಕಳುಹಿಸುತ್ತಿದ್ದರು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy