SearchBrowseAboutContactDonate
Page Preview
Page 499
Loading...
Download File
Download File
Page Text
________________ ೪೯೪ | ಪಂಪಭಾರತಂ ವll ಇತ್ತ ಧರ್ಮಪುತ್ರನುಂ ವಿರಾಟ ದೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ ಪ್ರಮುಖ ನಾಯಕರ್ವೆರಸು ರಣಪಟಹಂಗಳಂ ನೆಗಟ್ಸ್ ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾತ್ಮೀಕ ಭೂರಿಶ್ರವಃ ಪ್ರಕೃತಿಗಳ ಗಣಿಸನ್ನೆಗೈದು ಕಾದುವಾಗಳ್ಚoll ನಡುವ ಸರಲ್ ಸರಳ್ಕೊಳೆ ಸುರುಳ್ ಹಯಂ ಹಯದುರುಳಳೊಳ್ ತೊಡರ್ವ ಭಟರ್ ಭಟರ್ಕಳೊಳೆ ತೋಚ್ಚಟೆಮಾ ರಥಂ ರಥಕ್ಕೆ ವಾ | ಯಡಿಗಿಡ ಮೆಯ್ಯೋಣರ್ಚುವ ಮಹಾರಥರಾಜಿಯೊಳಂತಗುರ್ವಿನ ಚುಡಿದಿರೆ ಕಾದಿ ಬಿಚ್ಚಣಿಸಿದರ್ ಬಸುನೆತ್ತರ ಸುಟ್ಟುರೆ ಸೂಸುವನ್ನೆಗಂ || ೧೧೪ ವ|| ಅಂತೆರಡುಂ ಪಡೆಯ ನಾಯಕರೊರ್ವರೊರ್ವರೊಳ್ ತಲೆಮಟ್ಟು ಕಾದುವಾಗಳ್ ಶ್ವೇತಂ ತನ್ನ ತಮ್ಮನಳೆವಿನೊಳಾದ ಮುಳಿಸಿಕೊಳ್ ಕಣ್ಣಾಣದೆ ಶಲ್ಯನಂ ಮುಟ್ಟೆವಂದು ಚಂ ಮುಳಿಸಿಕೊಳೆಯ್ದ ಕೆಂಪಡರ್ದ ಕಣ್ಣಳಿನೊರ್ಮಯೆ ನುಂಗುವಂತಸುಂ ಗೋಳೆ ನಡೆ ನೋಡಿ ಮಾಣದುರಮಂ ಬಿರಿಯತೊಡೆ ಸೂಸಿ ಪಾಯಸ | ಗಳಮವನುಗ್ರ ಕೋಪಶಿಖಿ ತಳಳುರ್ವಂತವೊಲಾಗೆ ಶಲ್ಯನಾ ಗಳೆ ರಣದೊಳ್ ನೆಲ್ಗೊಡವನಂ ಪಂಗಿಕ್ಕಿ ಸುರಾಪಗಾತ್ಮಜಂ || ೧೧೫ ವ ಈಕಡೆ ಧರ್ಮರಾಜನೂ ವಿರಾಟ, ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಕೇಕಯ, ಸಾತ್ಯಕಿ, ನಕುಲ, ಸಹದೇವ, ಅಭಿಮನ್ಯುವೇ ಮೊದಲಾದ ನಾಯಕರೊಡಗೂಡಿ ಯುದ್ಧರಂಗಕ್ಕೆ ಬಂದು ರಣಭೇರಿಯನ್ನು ಹೊಡೆಯಿಸಿದನು. ಕೃಪ, ಕೃತವರ್ಮ, ವಿವಿಂಶತಿ, ವಿಕರ್ಣ, ಚಿತ್ರಸೇನ, ಸೋಮದತ್ತ, ಭಗದತ್ತ, ಬಾಹಿಕ, ಭೂರಿಶ್ರವರೇ ಮೊದಲಾದ ಪ್ರತಿಪಕ್ಷದವರು ಬಾಣದ ಗರಿಗಳಿಂದಲೇ ಸನ್ನೆಮಾಡಿ ಯುದ್ದಮಾಡಲು ಪ್ರಾರಂಭಿಸಿದರು. ೧೧೪. ಬಾಣಗಳು ನಾಟಿಕೊಂಡವು. ಕುದುರೆಗಳು ಸುರುಳಿಕೊಂಡು ಬಿದ್ದುವು. ಅವುಗಳ ಒಳಗರುಳಿನಲ್ಲಿ ಶೂರರು ಸಿಕ್ಕಿಕೊಂಡರು. ತೇರು ಹರಿದು ಅವರನ್ನು ಅಜ್ಜುಗುಜ್ಜಿಮಾಡಿದವು. ಮಹಾರಥರು ನುಗ್ಗಿ ತೇರನ್ನೆಡವಿ ಮುರಿದು ಬಿದ್ದು ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ಯುದ್ಧಮಾಡಿದರು. ವ ಹಾಗೆ ಎರಡುಸೈನ್ಯದ ನಾಯಕರೂ ಪರಸ್ಪರ ಪ್ರತ್ಯಕ್ಷವಾಗಿ ಯುದ್ಧಮಾಡುತ್ತಿದ್ದಾಗ ಶ್ವೇತನು ತನ್ನ ತಮ್ಮನ ಸಾವಿನಿಂದ ಆದ ಕೋಪದಿಂದ ಮುಂದಾಲೋಚನೆಯಿಲ್ಲದೆ ಶಲ್ಯನ ಸಮೀಪಕ್ಕೆ ಬಂದನು. ೧೧೫. ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆಯೂ ದೀರ್ಘವಾಗಿ (ಗುರಿಗುಟ್ಟಿ) ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದನು. (ಅದರಿಂದ) ರಕ್ತಪ್ರವಾಹವು ಹರಿಯಿತು. ಅವನ ತೀಕ್ಷವಾದ ಕೋಪಾಗ್ನಿಯು ಸೇರಿ ವ್ಯಾಪಿಸಿದ ಹಾಗಾಯಿತು. ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಲೇಷ್ಟನಾದನು. ಭೀಷ್ಮನು ಅವನನ್ನು ಹಿಂದಿಕ್ಕಿ ತಾನು ಮುನ್ನುಗ್ಗಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy