SearchBrowseAboutContactDonate
Page Preview
Page 496
Loading...
Download File
Download File
Page Text
________________ ದಶಮಾಶ್ವಾಸಂ / ೪೯೧ ಕಂ ಧ್ವಜಮುಂ ಬಿಸುಗಯುಮೇಟಿ ರ್ದ ಜೋದರುಂ ಬೆರಸು ಗಜೆಯನರಿಗಜಘಟೆಯಂ | ಗಿಜಿಗಿಜಿಯಾಗಿರೆ ಪೊಯೊಡೆ. ಗುಜುಗುಜುಗೊಂಡಾರ್ದರಮರರಂಬರತಳದೊಳ್| ೧೦೬ ವಗ ಅಂತು ಗಾಳಿಗೊಡ್ಡಿದ ಘನಘಟೆಯಂತೆ ತನಗೆ ಂಗರಾಜ ಮತ್ತಮಾತಂಗ ಘಟೆಗಳಂ ಕಲಕುಲಂ ಮಾಡಿದನನ್ನೆಗಮಿತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ ನಾಲ್ಕು ಕೆಲ್ಲಂಬುಗಳಿಂದಾತನ ವರೂಥ ಸೂತಕೇತನಂಗಳಂ ಕಡಿದುಕಂ11 ಉರಮಂ ಬಿರಿವಿನಮಿಸೆ ಮ ದ್ರರಾಜನಳಿಯನ ಪರಾಕ್ರಮಕೊಸೆದು ಮೊಗಂ | ಮುರಿಯದ ಪೆಜತುಂ ರಥಮಂ ತರಿಸಿ ಕನಡರ್ದು ಕದನಕಾಗಳೆ ನೆಳೆದಂ | ೧೦೭ ಮುಳಿದು ರಥಮಂ ರಥಾಶ್ವಮ ನುಳಿದೆರಡುಂ ಶರದೆ ನಾಲ್ಕತಿಂ ಸೂತನಂ | ದಟಿಕೆಯ ಸರಳ್ ಮಾಣದೆ ತಲೆದಂ ಪರಿವಿಗೆಯನೇಂ ಕೃತಾಸ್ತನೊ ಶಲ್ಯಂ | ೧೦೮ ವll ಅಂತು ಎರಥನಂ ಮಾಡಿ ಧರ್ಮಪುತ್ರನಂ ಪಿಡಿಯಲೆಯರ್ಪ ಮದ್ರರಾಜನಂ ಪರ್ಛಾಸಿರಮಾನವೆರಸು ನೃಪನ ಚಕ್ರರಕ್ಷಕಂ ನೀಳನೆಡೆಗೊಂಡು ತಾಗಿದಾಗಳ್ ಮಾಂಸಗಳು ಒಂದರಲ್ಲಿ ಒಂದು ಸೇರಿರದೆ ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು 'ಛೀ ತಪ್ಪುಮಾಡಿದೆ' ಎಂದು ಹಲ್ಲುಕಡಿದು ಭಯಂಕರವಾದ ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು ಭಯಂಕರವಾದ ರೀತಿಯಲ್ಲಿ ಮೀಸೆಯನ್ನು ಕಡಿದನು. ೧೦೬. ಧ್ವಜದಿಂದಲೂ ಅಂಬಾರಿಯನ್ನು ಹತ್ತಿದ್ದ ಯೋಧರಿಂದಲೂ ಕೂಡಿದ ಸಮೂಹವನ್ನು ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು ಆಕಾಶಪ್ರದೇಶದಲ್ಲಿ ದೇವತೆಗಳು (ಗುಂಪುಗೂಡಿ) ಪಿಸುಗುಟ್ಟುತ್ತ ಆರ್ಭಟ ಮಾಡಿದರು. ವll ಹಾಗೆ ಗಾಳಿಗೆ ಎದುರಾದ ಮೋಡಗಳ ಸಮೂಹದ ಹಾಗೆ ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು ಚೆಲ್ಲಾಪಿಲ್ಲಿಮಾಡಿದನು. ಅಷ್ಟರಲ್ಲಿ ಈಕಡೆ ಶಲ್ಯನ ಯುದ್ದದಲ್ಲಿ ಧರ್ಮರಾಜನು ಕಾದಿ ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿದನು. ೧೦೭. ಎದೆಯು ಬಿರಿದು ಹೋಗುವ ಹಾಗೆ ಹೊಡೆಯಲು ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು ಮುಖ ತಿರುಗಿಸದೆ ಬೇರೊಂದು ರಥವನ್ನು ತರಿಸಿ ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ದವಾದನು. ೧೦೮. ಶಲ್ಯನು ಅವನ ತೇರನ್ನು ಮುರಿದು ವೇಗವಾಗಿ ಎರಡು ಬಾಣಗಳಿಂದ ರಥದ ಕುದುರೆಯನ್ನೂ ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ದವಾದ ಬಾಣದಿಂದ ಧ್ವಜವನ್ನೂ ಬಿಡದೆ ತರಿದು ಹಾಕಿದನು. ಶಲ್ಯನು ಶಸ್ತ್ರವಿದ್ಯೆಯಲ್ಲಿ ಮಹಾಪಂಡಿತನಷ್ಟೆ! ವl ಹಾಗೆ ತೇರಿರದವನನ್ನಾಗಿ ಮಾಡಿ ಧರ್ಮರಾಜನನ್ನು ಹಿಡಿಯಲು ಬರುತ್ತಿದ್ದ 32
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy