SearchBrowseAboutContactDonate
Page Preview
Page 494
Loading...
Download File
Download File
Page Text
________________ ದಶಮಾಶ್ವಾಸಂ | ೪೮೯ ಕಂil ಆಸೆ ಮಸಗಿ ಭೀಮನೀರ ಯು ಶಿತಾಸ್ತದಿನುರುಳೆ ಸೂತನುಡಿಯ ರಥಂ ಕೀ | ಲಿ ಕುದುರೆ ಮುಳಿಯ ಪಲವಿಗೆ ಮಸಕದಿನೆಚ್ಚೆಚ್ಚನೊಲುದ ಸರಳ ನೊಸಲಂ || ಪಟ್ಟಂಗಟ್ಟಿದ ನೊಸಲಂ ನಟ್ಟ ಸರಲ್ವಿಡಿದು ನೆತ್ತರಂಬಿರಿವಿಡೆ ಕ || ಶೆಟ್ಟರ್ದ ನೃಪನನಂಕದ ಕಟ್ಟಾಳಳ ಕಾದು ಕಳಪೆ ದುರ್ಯೋಧನನಂ | ವ|| ಆಗಳವನನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡನಿಬರುಮಂ ಎರಥರ್ಮಾಡಿ ಭಾರತಮನಿಂದ ಸಮಯಿಸುವನೆಂದು ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಚಂ|| ಕುರುಬಲಮಂ ಪಡಲ್ವಡಿಸ ತಕ್ಕಿನೊಳೆಯ್ದರೆ ಬರ್ಪ ಭೀಮನಂ ಬರೆ ಬರಲೀಯದಿರ್ದವರನಾ ಪದದೊಳ್ ಪಂಗಿಕ್ಕಿ ಗಂಧಸಿಂ 1 ಧುರ ಘಟಿ ನಾಲ್ಕು ಕೋಟಿವರಸಾಗಡೆ ಬಂದು ಕಳಿಂಗರಾಜನಾಂ ತಿರೆ ಪಗೆ ಕೆಯ್ದವಂದು ಬರ್ದುಕಾಡಿದ ಬಲ್ಕುಳಿಸಿಂ ವೃಕೋದರಂ || ೧೦೧ ವ|| ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳವೆನೆಂದು ಸಿಂಹನಾದದಿನಾರ್ದು ಹರಿಯಿಸಿದನು. ೯೯. ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆಯೂ ರಥವು ಒಡೆದುಹೋಗುವ ಹಾಗೆಯೂ ಕುದುರೆಯು ಮೊಳೆಯಿಂದ ನಾಟಿಕೊಂಡಹಾಗೆಯೂ ಧ್ವಜವು ಮುರಿದು ಹೋಗುವ ಹಾಗೆಯೂ ಹೊಡೆದು ಕೋಪದಿಂದ ಒಂದೇ ಬಾಣದಿಂದ ದುರ್ಯೊಧನನ ಹಣೆಗೆ ಹೊಡೆದನು. ೧೦೦. ಪಟ್ಟಕಟ್ಟಿದ ಹಣೆಯನ್ನನುಸರಿಸಿ ನಾಟಿದ ಬಾಣವನ್ನು ಅನುಸರಿಸಿ ರಕ್ತವು ಧಾರಾಕಾರವಾಗಿ ಹರಿಯಲು ಕಣ್ಣು ಕಾಣದೆ ಇದ್ದ ರಾಜನನ್ನು ಪ್ರಸಿದ್ಧರಾದ ಶೂರರು ರಕ್ಷಿಸಿ ಶಿಬಿರಕ್ಕೆ ಕಳುಹಿಸಿದರು. ವ|| ಆಗ ಅವನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ತಾಗಲು ಅಷ್ಟು ಜನವನ್ನೂ ರಥದಿಂದ ಉರುಳಿಸಿ ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡನು. ೧೦೧. ಕೌರವಸೈನ್ಯವನ್ನು ಉರುಳಿಸುವ ಸಾಮರ್ಥ್ಯದಿಂದ ಬರುತ್ತಿದ್ದ ಭೀಮಸೇನನನ್ನು ಬರುವುದಕ್ಕೆ ಅವಕಾಶಮಾಡದೆ ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ತಳ್ಳಿ ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಿದನು. ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡ ವಿಶೇಷ ಕೋಪವನ್ನು ಭೀಮನು-ವಕಳಿಂಗರಾಜನ ಮದ್ದಾನೆಗಳ ಸಮೂಹದ ಮೇಲೆ ತೀರಿಸಿಕೊಳ್ಳುತ್ತೇನೆ ಎಂದು ಸಿಂಹಗರ್ಜನೆಯಿಂದ ಆರ್ಭಟಿಸಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy