SearchBrowseAboutContactDonate
Page Preview
Page 49
Loading...
Download File
Download File
Page Text
________________ ೪೪ | ಪಂಪಭಾರತಂ 'ಪ್ರಳಯದುರಿಯನುರುಳಿಮಾಡಿದಂತೆ', 'ಕಿಡಿಗಳ ಬಳಗಮನೋಳಗುಮಾಡಿದಂತೆ, 'ಕಾರಮುಗಿಲ್ ಬಿಮಿಂಚಿಂದುಳ್ಳುವವೋಲ್' 'ಚದುರಂಗದ ಮಣೆಯನಲುಗಿದಂತೆ' 'ಚತುದರ್ಶಭುವನಂಗಳೆಲ್ಲಮಂ ತೆರಳಿ ತೇರೈಸಿ ನುಂಗುವಂತೆ', 'ಜವಂಗೆ ಬಿರ್ದಿಕ್ಕುವಂತೆ, ಅರಾತಿಗೆ ಮಿಟ್ಟು ಬರ್ಪಂತೆ' 'ಶಿಖಾಕಳಾಪಂಗಳೊಳ್ ಪಡಪುಡನಲ್ಲೆ ಸಾಯ್ತ ಪತಂಗದಂತೆ' (ಪೆಂಕೊಳಿಯ ಸಿಂಹಮಂ ಮುತ್ತುವಂತೆ' 'ಪೆರ್ವಿದಿರ ಸಿಡಿಂಬಿನೊಳ್ ಪುದಿದ ಕುಳಾಚಳದಂತೆ', 'ಸಿಡುಂಬಿನ ಪೊದಲ್ ಮದೋಣಗಿದ ಮೃಗರಾಜನಂತೆ', 'ಮಹಾಮಕರಂ ಸಮುದ್ರದೊಳ್ ಪರಿವವೋಲ್' 'ಇಂದ್ರನೀಲಮಂ ಮುತ್ತಿನೋಳಿಯೊಳ್ ಕೋಟಿಲಿಕ್ಕಿದ ಮಾಲೆಯಂತೆ, ಅಚೆಯೆ ನೊಂದ ಸಿಂಗದ ಮೇಲೆ ಬೆರಗಳೆಯದ ಬೆಳ್ಳಾಳ್ ಪಾಯ್ತಂತೆ” “ತಿಕೊಂಡ ಜೋಳದಂತೆ' 'ಆಗಾಮಿಪ ಸಂಗ್ರಾಮರಂಗಕ್ಕೆ ಪಾತ್ರಗಳಂ ಸಮೆಯಿಸುವ ಸೂತ್ರಧಾರನಂತೆ' 'ತಾರಾಗಣಗಳ ನಡುವಣ ಸಕಲ ಕಳಾಧರನಂತೆ' 'ಮದನನ ಕೆಯ್ಯಂ ಬರ್ದುಂಕಿ ಬಂದ ಅರಲಂಬು ಬರ್ಪಂತೆ' 'ಪಲರು ಮಂಬಂತೊಡೆ ನಡುವಿರ್ದೊಂದು ಪುಲ್ಲೆಯಂತೆ' 'ತೆಂಕಣಗಾಳಿಯ ಸೋಂಕಿನೊಳ್ ನಡುಮಂಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ ತೊಡರ್ದವೋಲ್' “ಕಾಯ್ದ ಪುಡಿಯೊಳಗೆ ಬಿಸುಟೆಳೆವಾಣಿಯಂತೆ' 'ಏಶ್ಚವಾಡಿವದ ಸಸಿಯಂತೆ' “ ಕೃರಗನುಂ ಪಿಡಿದ ಬೆಳ್ಳಾಳಂತೆ,' 'ಮುತ್ತ ಮೆಣಸಂ ಕೋದಂತೆ' ಕಾಮದೇವನೇವಮಂ ಕೆಯ್ಯೋಂಡು ಸೀಂತಂತೆ' 'ಮೋಹರಸಮೆ ಕಣ್ಣಿಂ ತುಳುಕುವಂತೆ' 'ಅಶೇಷಧರಾಭಾರಮಂ ಶೇಷಂ ತಾಳುವಂತೆ.' 'ಗಾಳಿಗೊಡ್ಡಿದ ಪುಲ್ಲ ಪನಿಗಳಂತೆ' 'ಪುಲ್ಲ ಸೂಡನಿಡಾಡುವಂತೆ'. 'ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ,' ಎಂಬಿವೇ ಮೊದಲಾದ ಉಪಮಾನಗಳೂ 'ಪರಿದುದು ವಸಂತಗಜಂ' ಎಂಬಂತಹ ರೂಪಕಗಳೂ 'ಕಾಸಿದಿಟ್ಟಿಗೆಯ ರಜಂಬೊಲಿರೆ ಸಂಧ್ಯೆ' 'ಚಂದ್ರನು ಸಂಧ್ಯೆಯನ್ನು ಕೂಡಲು ರೋಹಿಣಿಯು ಕೋಪಗೊಂಡು ಒದ್ದುದರಿಂದ ಅವಳ ಕಾಲಿನ ಅಲತಿಗೆಯು ಮೆತ್ತಿಕೊಳ್ಳಲು ಚಂದ್ರಬಿಂಬವು ಕೆಂಪಾಗಿತ್ತು “ಕತ್ತಲೆಯೆಂಬ ಆನೆಯ ಕೋಡಿನ ಇರಿತದಿಂದ ಅವನ ಎದೆಯಲ್ಲಿದ್ದ ಹರಿಣವು ಗಾಯಗೊಂಡ ರಕ್ತದಿಂದ ಚಂದ್ರನು ಕೆಂಪಾಗಿ ಕಾಣಿಸಿಕೊಂಡನು' ಎಂಬಂತಹ ಅನೇಕ ಉತ್ತೇಕ್ಷೆಗಳೂ ಕಾವ್ಯದ ಮಧ್ಯೆ ಅನೇಕೆಡೆಗಳಲ್ಲಿ ಬಹಳ ಆಕರ್ಷಕವಾಗಿವೆ. - ಪಂಪನ ಸಾಮರ್ಥ್ಯ ನಿಜವಾಗಿ ಎದ್ದು ಕಾಣುವುದು ಆತನ ಪಾತ್ರ-ಚಿತ್ರಣದಲ್ಲಿ. ಆತನ ಪ್ರತಿಯೊಂದು ಪಾತ್ರದಲ್ಲಿಯೂ ಪ್ರತ್ಯೇಕವಾದ ವ್ಯಕ್ತಿತ್ವವಿದೆ, ಪ್ರತಿಯೊಂದೂ ತನ್ನದೇ ಆದ ಗುಣಗಳನ್ನು ವ್ಯಕ್ತಪಡಿಸಿಕೊಂಡು ಆ ಗುಣಗಳಿಂದಲೇ ಮನೋಹರವಾಗಿದೆ. ಒಂದು ಕಡೆ ಮಹಾಭಾರತದ ಸೂತ್ರಧಾರನಂತಿರುವ ಕೃಷ್ಣಪರಮಾತ್ಮ(ಪಂಪನು ಅವನನ್ನು ಭಾರತದ ಪೂಜ್ಯವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಲ್ಲದಿದ್ದರೂ ಅವನಿಲ್ಲದೆ ಕಥೆ ಮುಂದೆ ಸಾಗುವುದೇ ಇಲ್ಲ) ಮತ್ತೊಂದು ಕಡೆ ಧರ್ಮವೇ ಮೂರ್ತಿವೆತ್ತಂತಿರುವ ಧರ್ಮರಾಜ, ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯ, ಧನುರ್ಧರಾಗ್ರಗಣ್ಯನಾದ ದ್ರೋಣಾಚಾರ್ಯ, ಭಾರತಯುದ್ದಕ್ಕೆ ಆದಿಶಕ್ತಿಯೆನಿಸಿದ ಬ್ರೌಪದಿ-ಇವರೊಬ್ಬೊಬ್ಬರೂ ತಮ್ಮ ಒಂದೊಂದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy