SearchBrowseAboutContactDonate
Page Preview
Page 489
Loading...
Download File
Download File
Page Text
________________ ೪೮೪) ಪಂಪಭಾರತಂ ಚಾರಿಸಿ ಬಾಳಾಗಮಮವ ತಾರಂ ಗೆಯ್ದಂತ ಕಾಲದಂತಕನನೆ ಪೋ | ಝಾರುತ್ತುಂ ಕವಿವದಟರ . ` ನೂರೊಂದೋರೊಂದವೊಯ್ದು ಕೊಂದರ್ ಪಲರಂ || ೮೩ ಬಾಳ್ತಾಳಳ ಘಟ್ಟಣೆಯೊಳ್ ಬಳ್ಳಳ ಬಳೆದೂಗದು ನೆಗೆದ ಕಿಡಿಗಳ ಬಂಬ | ಅಳ್ವರು ಪೊಳೆದು ನೆಗೆದುದು ಬಾಳ್ಕೊಗೆ ಕಾಜಮುಗಿಲ್ ಬಳ್ಳಿಮಿಂಚಿನಿಂದುಳ್ಳುವವೋಲ್ |೮೪ ತಲೆ ನೆಲದೊಳುರುಳೊಡಂ ಮ ಯಲಿಯೊರ್ವಂ ಪಿಡಿದು ತಲೆಯನಿಟ್ಟಟ್ಟೆಯೋಳ | ಗಳಿಸಿದ ಮುಳಿಸಿಂ ಮಾಟದ ತಲೆಯಿಟ್ಟಾಡುವನನಿನಿಸು ಪೋಲ್ಕನುಗೆಯ್ಯಂ ೮೫ ವll ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಳೆದುಪೊತ್ತು ಕಾದಿ ನಿಂದಾಗಳ್ಉll ಮಾರುತ ಘಾತ ಸಂಚಳಿತ ಕೇತು ಸಮೂಹಮುದಗ್ರ ಚಕ್ರ ಚೀ ತಾರಮುದಾರ ವೀರಭಟ ಸಿಂಹನಿನಾದ ವಿಮಶಿತೋಟ | ಜ್ಞಾರಾವಮಂಬರತರಮನಳ್ಳಿಚಿದವ್ವಳಿಪನ್ನೆಗಂ ಶಾರಾ ಸಾರದಗುರ್ವು ಪರ್ವಿನಿಲೆ ತಾಗಿದುವುಗ್ರರಥಂ ರಥಾಳಿಯೊಳ್ || ೮೬' . ಹೆಣದ ರಾಶಿಗಳು ಬೀಳುವವರೆಗೆ ಹೊಡೆದಾಡಿದರು. ೮೩. ಶಸ್ತಶಾಸ್ತ್ರವೇ . ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ ಪ್ರಳಯಕಾಲದ ಯಮನ ಹಾಗೆ ಆರ್ಭಟ ಮಾಡುತ್ತ ಮೇಲೆ ಬೀಳುವ ಪರಾಕ್ರಮಶಾಲಿಗಳನೇಕರನ್ನು ಒಂದೊಂದೇ ಸಲ ಹೊಡೆದು ಕೊಂದರು. ೮೪, ಕತ್ತಿಕಗಳ ತಗಲುವಿಕೆಯಿಂದ ಹುಟ್ಟಿ ಹೆಚ್ಚಿ ಮೇಲಕ್ಕೆ ಹಾರಿದ ಕಿಡಿಗಳ ಸಮೂಹದಿಂದ ಕೂಡಿದ ಕತ್ತಿಯ ಹೊಗೆಯು ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಬ್ಬಿತು. ೮೫. ತಲೆಯು ನೆಲದಲ್ಲಿ ಉರುಳಿದರೂ ಶೂರನೊಬ್ಬನು ಆ ತಲೆಯನ್ನು ಹಿಡಿದು ಮುಂಡದಲ್ಲಿಟ್ಟುಕೊಂಡು ಅಧಿಕವಾದ ಕೋಪದಿಂದ ಕೃತಕವಾದ ತಲೆಯನ್ನು ಧರಿಸಿ ಆಟವಾಡುವವನನ್ನು ಸ್ವಲ್ಪಮಟ್ಟಿಗೆ ಅನುಕರಿಸಿ ಕಾದಿದನು. ವ|| ಹಾಗೆ ಸೇನಾಸಮೂಹವು ಭಯಪಡದೆ ಮತ್ಪರಿಸಿ ಜಗಳವಾಡಿ ಸ್ವಲ್ಪ ಕಾಲ ಕಾದಿ ನಿಂತರು. ೮೬. ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ ಕೂಡಿದ ಅತ್ಯಧಿಕವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ ಆಕಾಶಪ್ರದೇಶದ ಒಳಭಾಗವನ್ನು ನಡುಗುವಂತೆ ಮಾಡಿ ಪ್ರವೇಶಿಸಿದುವು. ಬಾಣದ ಮಳೆಯು ವಿಶೇಷವಾಗಿ ಹಬ್ಬಿ ಹರಿಯಿತು. ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy