SearchBrowseAboutContactDonate
Page Preview
Page 481
Loading...
Download File
Download File
Page Text
________________ ೪೭೬ | ಪಂಪಭಾರತಂ ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರು ಪಟ್ಟು ನೀಳನನಲುವತ್ತು ಸಾಸಿರ ಭದ್ರಹಸ್ತಿವರಸು ತನ್ನ ಚಕ್ರರಶ್ನೆಗೆ ಪೇಟ್ಟು ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇಟ್ಟು ಯುಧಿಷ್ಠಿರಂ ಶಲ್ಯನ ಮೊನೆಗೆ ನೆಳೆದು ನಿಂದು ಕಮ್ಮಿಸುವಾ .ಪ್ರಗಾವದೊಳ್ ಶೂರಂ ಭೇದೇನ ಯೋಜಯೇತ್' ಎಂಬ ನಯಮಂ ಕೆಯ್ಯೋಂಡು ವಿನಯಮನೆ ಮುಂದಿಟ್ಟುಕ೦ll ಬಳಮೆರಡುಂ ತನ್ನನೆ ಮಿಳ ಮಿಳ ನೋಡೆ ನರೇಂದ್ರನೊಂದ ರಥದಿಂದಸುಹ್ಮ | ದೃಳಮನಿರದೆಯ್ಲಿ ಭೀಷ್ಕರ ಚಳಣಯುಗಕ್ಕೆಗೆ ನಿನಗೆ ಜಯಮಂದಂ || ವ|| ಎಂದು ಭೀಷ್ಕರ್ ತಮ್ಮ ಮೊಮ್ಮನ ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯೊಂಡುಕಂ ಗುರು ಕೃಪ ಗುರುಸುತ ಶಲ್ಯರ ಚರಣಂಗಳಿಗಿ ಪೊಗಿ ಪೊಡೆವಡುವುದುಮಾ | ದರದಿಂದಂ ನಲೆಯೊಳಂ ಪರಸಿ ಮನಂಗೊಂಡು ನುಡಿದರವರಾ ನೃಪನಂ || ನಿನ್ನ ಬರವಿಂದವಮ್ಮ ಮ ನನ್ನಿನಗಳಿಗಿದುದು ಜಯಮುಮೆಮ್ಮಿ ದಸೆಯಿಂ | ದನ್ನಿನಗೆ ಸಾರ್ಗ ಪೋಗನೆ ಮನ್ನಿಸಿ ಗುರುಜನಮನಾಗಳಂತಕತನಯಂ || ಶಬರ ನೇಪಾಳ ರಾಜರುಗಳ ಬಲಕ್ಕೆ ಎರಡುಕೋಟಿ ರಥಗಳಿಂದ ಕೂಡಿದ ಹೈಹಯರನ್ನು ನಿಯಮಿಸಿದನು. ಅರವತ್ತು ಸಾವಿರ ಭದ್ರಗಜಗಳೊಡನೆ ನೀಲನನ್ನು ತನ್ನ ಸೇನಾರಕ್ಷಣೆಗೆ ಇರಹೇಳಿದನು. ಸಂಸಪಕರ ಹದಿನೆಂಟುಕೋಟಿ ರಥಕ್ಕೆ ಅರಿಕೇಸರಿಯ (ಅರ್ಜುನ) ರಥವೊಂದನ್ನೇ ಸಿದ್ದಪಡಿಸಿದನು. ಧರ್ಮರಾಯನು ತಾನೇ ಶಲ್ಯನ ಇದಿರಾಗಿ ನಿಂತನು. 'ಶೂರನನ್ನು ಭೇದೋಪಾಯದಿಂದಲೇ ಗೆಲ್ಲಬೇಕು' ಎಂಬ ನೀತಿಯನ್ನು ಅಂಗೀಕರಿಸಿ ವಿನಯವನ್ನೇ ಮುಂದುಮಾಡಿಕೊಂಡು ೬೦. ಎರಡು ಬಲವೂ ತನ್ನನ್ನೇ ಮಿಟಮಿಟನೆ ನೋಡುತ್ತಿರಲು ಧರ್ಮರಾಯನು ಸಾವಕಾಶಮಾಡದೆ ಒಂದೇ (ಏಕಾಕಿಯಾಗಿ) ತೇರಿನಿಂದ ಶತ್ರುಸೈನ್ಯವನ್ನು ಸೇರಿ ಭೀಷ್ಕರ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು. ವll ಆ ಹರಕೆಯನ್ನು ಸ್ವೀಕರಿಸಿದನು. ೬೧. ದ್ರೋಣ ಕೃಪ ಅಶ್ವತ್ಥಾಮ ಶಲ್ಯರ ಪಾದಗಳಿಗೂ ಹಾಗೆಯೇ ಹೋಗಿ ನಮಸ್ಕಾರಮಾಡಿದನು. ಅವರೂ ಆದರದಿಂದಲೂ ಸದ್ಯಾವದಿಂದಲೂ ಹರಸಿ ತೃಪ್ತರಾಗಿ ರಾಜನನ್ನು ಕುರಿತು ಹೇಳಿದರು. ೬೨. ನಿನ್ನ ಬರುವಿಕೆಯಿಂದ ನಮ್ಮ ಮನಸ್ಸು ನಿನ್ನ ಕಡೆಗೆ ಓಸರಿಸಿತು. ಹಾಗೆಯೇ ನಮ್ಮ ಕಡೆಯಿಂದ ನಿನಗೂ ಜಯವು ಉಂಟಾಗುತ್ತದೆ ಹೋಗು ಎಂದರು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy