SearchBrowseAboutContactDonate
Page Preview
Page 476
Loading...
Download File
Download File
Page Text
________________ ದಶಮಾಶ್ವಾಸಂ / ೪೭೧ ವ|| ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದೂಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರ ಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿಕಂ| ಕೆಂಬಣದ ಕುದುರೆಗಳೊಳೊ ಡಂಬಡೆ ನಿಜರಜತರಥಮಗುರ್ವುರ್ವರೆಯಂ | ತಿಂಬೆ ಕಳಶಧ್ವಜಂ ಮಿಳಿ ರ್ದಂಬರಮಂ ಬಳಸಿ ನಿಂದನಾತಂ ದ್ರೋಣಂ || ಆತನ ಸಾರೆ ಕಮಂಡಲು ಕೇತನಮಂಬರಮನಡರ ಚತುರಂಗ ಬಲೋ | ಪೇತನತಿ ಧವಳ ರಥನಲ್ಲಿ ಜಾತಂ ಕ್ಷತ್ರಿಯರನುಜದ ಕಲಿ ಕೃಪನಾತಂ | ವಗಿ ಮತ್ತಿತ್ತ ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ರನೆ ಕರ್ಗಿದ ಸಮದ ಗಜಘಟಾಟೋಪದ ನಡುವಕ೦ll ಸರದದ ಮುಗಿಲನೆ ಬಿಡದನು ಕರಿಸುವ ಧವಳಾಶ್ವದಿಂದಮಸೆದೊಪ್ಪುವ ಲೋ | ಹ ರಥಮದು ಪುಲಿಯ ಪಬಯಿಗೆ ವರಸು ತುಟಿಗೆ ನಿಂದನಾತಂ ಶಲ್ಯಂ || ೫೬ * ವll ಮತ್ತಿತ್ತ ಗಂಗಾಸುತನ ವಾಮಭಾಗದೊಳಂಬರಭಾಗಮಂ ಕಟ್ಟಿ ಮಡಚಿದಂತಾಗಿ ತನ್ನ ರಥದೊಳೊಟ್ಟದ ಕೆಯ್ತುಗಳ ಬೆಳಗೆ ಬೆಳಗಾಗ ಕೆಸರಿನ ಮೇಲೆ ಹರಡಿದ ಕಡಿತದಂತೆ ನೆಲವು ನಡುಗುತ್ತಿತ್ತು. ವ|| ಆಗ ಧರ್ಮರಾಜನು ಕೃಷ್ಣನ ಮುಖವನ್ನು ನೋಡಿ ಕೌರವ ಸೇನಾವ್ಯೂಹದ ಒಡೆಯರಾದವರಿವರಾರು ಎಂದು ಪ್ರಶ್ನಿಸಿದನು. ಮಕರವ್ಯೂಹದ ತಲೆಯ ಪ್ರದೇಶದಲ್ಲಿ (ಮುಂಭಾಗದಲ್ಲಿ) ಯುದ್ಧ ಸನ್ನದ್ದನಾಗಿ ೫೪. ತನ್ನ ಬೆಳ್ಳಿಯ ತೇರು ಕೆಂಪು ಬಣ್ಣದ ಕುದುರೆಗಳಿಂದ ಒಪ್ಪಿರಲು ಭಯಂಕರನಾದ ಕಳಶ ಚಿಹ್ನೆಯುಳ್ಳ ಬಾವುಟವು ಚಲಿಸುತ್ತ ಆಕಾಶವನ್ನು ಬಳಸಿರುವಂತೆ ನಿಂತಿರುವವನು ದ್ರೋಣಾಚಾರ್ಯ ೫೫. ಅವನ ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ. ವ| ಮತ್ತು ಈ ಕಡೆ ಭೀಷ್ಮನ ಬಲಗಡೆಯ ಪಕ್ಕದಲ್ಲಿ ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ ೫೬. ಶರತ್ಕಾಲದ ಮೋಡವನ್ನೇ ಅನುಕರಿಸುತ್ತಿರುವ ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ ಆ ಲೋಹ ರಥದಲ್ಲಿ ಹುಲಿಯ ಬಾವುಟ ದಿಂದ ಕೂಡಿ ಥಳಥಳಿಸುತ್ತ ನಿಂತಿರುವವನು ಶಲ್ಯ, ವ11 ಮತ್ತು ಈ ಕಡೆ ಭೀಷ್ಮನ ಎಡಪಾರ್ಶ್ವದಲ್ಲಿ ಆಕಾಶ ಭಾಗವನ್ನು ತಡಿಕೆಯಿಂದ ಹೆಣೆದ ಹಾಗೆ ಮಾಡಿ ತನ್ನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy