SearchBrowseAboutContactDonate
Page Preview
Page 47
Loading...
Download File
Download File
Page Text
________________ ೪೨ | ಪಂಪಭಾರತಂ ಅದಟಂ ಸಿಂಧುತನೂಭವಂ ವಿಜಯನೊಲ್ ಮಾರ್ಕೊಂಡಣಂ ಕಾದಲಾ ಅದೆ ಬೆಂಬಿಡೆ ಕಾದಲೆಂದು ಬೆಸನಂ ಪೂಣಂ ಗಡಂ ದ್ರೋಣನಂ ತರುವಂ ನೋಡುವೆನೆಂದು ಕಣ್ ತಣಿವಿನಂ ನೋಡಿ ಬರ್ಪಂತೆಂಬಂ ದುದಯಾದೀಂದ್ರಮನೇ ಭಾನು ಪೊಮಟೊಟ್ಟಿತ್ತನೀಕಾರ್ಣವಂ || ಮುಂದಿನ ಕರ್ಣವಧಾನಂತರದ ಸೂರ್ಯಾಸ್ತಮಯದ ವರ್ಣನೆಯೂ ಇಂತಹುದೆ ಪಬಯಿಗೆಯನುಡುಗಿ ರಥಮಂ ಪಲವನನೆಸಗಿಟ್ಟು ಸುತಶೋಕದ ಪೊಂ ಪುಟಿಯೊಳ್ ಮೆಯ್ಯತೆಯದೆ ನೀ ರಿವಂತಿಲ್, ಇಟೆದನಪರಗಳಧಿಗೆ ದಿನಪಂ | ಸಹಜವಾಗಿ ನೀರುಕುಡಿದಂತೆ ಮಾತನಾಡುವುದು ಪಂಪನ ಪದ್ದತಿಯಾದುದರಿಂದ ಅವನು ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ನುಡಿಕಟ್ಟನ್ನೂ ದೇಶೀಯಶಬ್ದಗಳನ್ನೂ ತನ್ನ ಕಾವ್ಯದಲ್ಲಿ ವಿಶೇಷವಾಗಿ ಉಪಯೋಗಿಸಿದ್ದಾನೆ. 'ಪುಣ್ಯಭಾಜನಂತೆಗೆ ನೂಕೆ ಪಾಸು' 'ರಾಜಹಂಸ ಮಾನಸಸರೋವರವನಲ್ಲದೆ ಪೆಜತನೇಕೆ ಬಯಸುಗುಂ' 'ಕಕೇನಾರ್ಥಿ ಕೋದರಿದ್ರಃ' ಪನಿಪುಲ್ಲಂ ನಕ್ಕೆ ತೃಷ್ಣಮೋದಪುದೇ!' 'ನಿಯತಿಃ ಕೇನಲಂಫ್ಯತೆ' 'ಏನಾಗದೋ ಪಾಪದ ಫಳಂ ಎಯ್ದಿವಂದ ದಿವಸದೊಳಾರ್ಗ೦, ಆನೆಯ ಕೋಡುಬಾಗದು' 'ಪಗೆಯಿಳೆಯ ಬಂದರ ಮೂಗನರಿದರೆಂಬಂತೆ' 'ಬೇರೊಲ್ ಬೇರನೆಳೆಯದಿರ್', 'ಸೆಟ್ಟಿಯ ಬಳ್ಳಂ ಕಿಟೆದು', 'ಕಮ್ರಯೋಜಂ ಬಿಲ್ಗೊಜನೆಂಬುದು ಮಾಡುವೆನೆ' ಬೆಳ್ಳಾಳೆ ಪೊಳಪುದೋಚುವುದು ಒಳ್ಳಾಳೊಪೊಡರ್ಪುದೋಚುವುದು' 'ಪೆಣನನಿಳೆದು ಪಗೆಗೊಂಡರ್‌' 'ಎಂತಪ್ಪರೊಳಂ ಮುಳಿಸಚೆವನಾಗಲೇನಿತ್ತಪುದೇ ? “ಅಪಾಂಡವಂ ಮಾಡದಂದು ಬಿಲ್ಲೆಯನ ಪುತ್ರನಲ್ಲೆಂ 'ಗುರುವಿಯೋಗಭರಂ ಗುರುವಾಗದಿರ್ಕುಮೆ' 'ಪಗೆಯನೇಂ ಗಳ ಪಟ್ಟಮೆ ಪಾರಿ ತಿಂಗುಮೆ', 'ನಿನ್ನ ಕೆಯ್ಯುವೆನಿತುಂ ಬಿಸುಟಿರ್ದ ಲೆಕ್ಕಮೆ' 'ವಿಷಮೊಳೆಗುಳೊಡಂ ಒಳ್ಳೆಯೆ, ಕಾಳಿಯನಾಗನಾಗದು' 'ನೃಪಚಿತ್ತ ವೃತ್ತಿ ಸಂಚಲಂ ಅದಳೆಂದಂ ಓಲಗಿಸಿ ಬಾಜ್ವುದೆ ಕಷ್ಟಂ ಇಳಾಧಿನಾಥರಂ' 'ತೋಳ್ತರ ಮೊಲೆವಾಲನುಂಡ ಗುಣಮನ್ ಆರ್ ಕೆಡಿಪರಾ ನರೇಂದ್ರರೊಳ್‌', 'ಮೇಲಪ್ಪ ಪಗೆಗಂಜಿ ಕೊಂದಂತೆ, ಖಳನೊಳವಿಂಗೆ ಕುಪ್ಪೆವರಂ' 'ಪಗೆಗೆ ಸಂತಸವಾಗಿರೆ ಮಾರಿ ಸುಯ್ಯುಮೆ “ಅತ್ಯಾಧರಸ್ಸಂಭ್ರಮಮುತ್ಪಾದಯತಿ' 'ಪಡೆ ನೋಡಲ್ ಬಂದವರಂ ಗುಡಿವೊರಿಸಿದರ್ 'ದೈವಮನಾರಯ್ಯ ಮೋಳೆ ಬಾಲ್ ನೆವರ್, 'ಮೋಹಮಯನಿಗಳಂ ಕಳತ್ರಂ' “ಪಾವುಗಳುಳ್ಳ ಪಗೆಯಂ ಮಳೆಯವು' 'ಸಿಂಹಮಾಡುವವರ ಬಾಲಮನಾಡಿದರ್', “ಏಂ ಮಹಾಪುರುಷರಾಜ್ಞಾಲಂಘನಂ ಗೆಯ್ದರೇ ?' ಕೆಯ್ಯಳಿದ ಮನೆವಾರ್ತೆಗೆ ಬುದ್ದಿಪೇಟಿಲೆಡೆಯಿಲ್ಲ' 'ಉಪ್ಪಿಕ್ಕಿದೊಡೆ ತುಪ್ಪಕ್ಕೆ ಮೇಳಡಿತು' `ಬಡಿಗಂಡನಿಲ್ಲ ಪಾಲಂ ಕಂಡಂ' 'ನೋಂತರ ಪಗೆವರನೆಟಿಟಿದಂತಾಯ್ತು' 'ಕೇಶದ ಫಲಮೆರ್ದೆಗೊಳ್ಳದೆ' 'ಕನಕನ ಬೇಳೆ ಕನಕನನ್ ತಿಂದುದು' 'ಪರವೆಣೈ ಒಲ್ಲಂಗಮೇನಾಗದು' 'ಪಾದರದೊಳ್
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy