SearchBrowseAboutContactDonate
Page Preview
Page 454
Loading...
Download File
Download File
Page Text
________________ ನವಮಾಶ್ವಾಸಂ (೪೪೯ ವlು ಮತ್ತು ಸಸಂಭ್ರಮ ಪ್ರಚಲಿತ ಸಮದ ಗಜ ಘಟಾ ಘಂಟಾರವಂಗಳಿಂದಂ ತುರಂಗಮಹಷಿತಂಗಳಿಂದಂ ಮಹಾಸಾಮಂತರ ಪದಿರ ಪಳಿಗಳಿಂದಮಗುರ್ವಾಗ ನಡವ ಬೀಡಿಂಗೆ ಬೀಡುವಿಡಲ್ ನಲನುಮೊಲೆಗಲ್ಲಲ್ಲಿ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಂಗಳುಂ ದಂಡಿಗೆಗೆ ವೇಣುವನಂಗಳುಮಾನಗಂಬಕ್ಕೆ ಪರ್ಮರುಂಗಳುಮಾ ಪಡೆಗೆ ನೆಯವೆನಿಸಿ ಪಾಂಡವರೇಬಿಕ್ಕೋಹಿಣೀ ಬಲಂಬೆರಸೇಲಂ ಸಮುದ್ರಗಳುಂ ಮೇರೆದಪ್ಪಿ ಬರ್ಪಂತಿರ ಬಂದು ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತಣ್ಣಾವುದು ಪರಿ ಪ್ರಮಾಣವನಿಪ ಕುರುಕ್ಷೇತ್ರವನೆಯ್ದವಂದದ ಪಶ್ಚಿಮ ದಿಶಾಭಾಗದೊಳ್ ಮುನ್ನ ಪರಶುರಾಮನೀ ಲೋಕದೊಳುಳ್ಳರಸುಮಕ್ಕಳೆಲ್ಲರುಮನಿರ್ವತ್ತೂಂದುಸೂಲ್ವರಂ ಪೇ ಪಸರಿಲ್ಲದಂತೆ ಕೊಂದು ತಂದಯ ಪಗೆಗೆಂದಲ್ಲಿಯೆ ತಂದು ನಿಜನಿಶಿತ ಪರಶುಧಾರೆಗಳಿಂ ನೆತ್ತರ್ ಸೂಸಿ ಪಾಯ ಕಡಿದವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿಟೆಪಲುಂ ತಾನುಂ ಮಿಂದು ತನ್ನ ತಂದೆಗೆ ನೀರ್ಗುಡಲುಮೆಂದು ಮಾಡಿದ ಶಮಂತ ಪಂಚಕಂಗಳೆಂಬಯ್ದು ಪೆರ್ಮಡುಗಳ ಕೆಲದೊಳೆಡೆಯದು ಬೀಡಂ ಬಿಡಿಸಿ ಭುಜಭಾಗ, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಕೊಡುತ್ತಿರುವ ಕರ್ಪೂರ ತಾಂಬೂಲ ರಾಶಿ ಇವು ಸೈನ್ಯಕ್ಕೆಲ್ಲ ಸಂತೋಷವನ್ನುಂಟುಮಾಡುವಂತೆ ಕೆಲವು ನಾಯಕರು ಎಲ್ಲ ಕಡೆಯಲ್ಲಿಯೂ ನಡೆದರು. ವ ಮತ್ತು ಸಂಭ್ರಮದಿಂದ ಕೂಡಿದ ಮದ್ದಾನೆಗಳ ಗಂಟೆಗಳ ಶಬ್ದ, ಕುದುರೆಗಳ ಕೆನೆಯುವಿಕೆ, ಮಹಾಸಾಮಂತರ ಸಂಕೇತವಾದ್ಯ - ಇವು ಭಯಂಕರವಾಗಿರಲು ನಡೆಯುತ್ತಿರುವ ಸೈನ್ಯಕ್ಕೆ ತಂಗುವುದಕ್ಕೆ ನೆಲವೇ ಸಾಲದಾಯಿತು. ಒಲೆಯ ಕಲ್ಲುಗಳಿಗೆ ಪರ್ವತಗಳು ಸಾಲದಾಯಿತು, ಬಾವುಟಗಳ ಗೂಟಕ್ಕೆ (ಗೂಡಾರದ ಗೂಟಕ್ಕೆ ?) ಹಿರಿಯ ಕಾಡುಗಳು ಸಾಲದಾದುವು. ಪಲ್ಲಕ್ಕಿಗಳಿಗೆ ಬಿದರ ಕಾಡುಗಳು ಸಾಲದಾದುವು. ಆನೆಯನ್ನು ಕಟ್ಟುವ ಕಂಬಗಳಿಗೆ ದೊಡ್ಡ ಮರಗಳು ಸಾಲದಾದುವು ಎನ್ನಿಸಿ ಪಾಂಡವರು ಏಳಕ್ಟೋಹಿಣಿ ಸೈನ್ಯದಿಂದ ಕೂಡಿ ಏಳು ಸಮುದ್ರಗಳೂ ಎಲ್ಲೆ ಮೀರಿ ಬರುತ್ತಿರುವ ಹಾಗೆ ಒಂದು ಕಡಿತದಲ್ಲಿ (ಬಟ್ಟೆಯನ್ನು ಮಡಿಸಿ ಮಾಡಿರುವ ಪುಸ್ತಕ) ಬರೆದಂತಿದ್ದ ಚಚೌಕವಾಗಿರುವ ನಲವತ್ತೆಂಟು ಗಾವುದ ಸುತ್ತಳತೆಯನ್ನು ಕುರುಕ್ಷೇತ್ರಕ್ಕೆ ಬಂದು ಸೇರಿದರು. ಅದರ ಪಶ್ಚಿಮ ದಿಗ್ನಾಗದಲ್ಲಿ ಶಮಂತಪಂಚಕಗಳು. ಇವು ಪೂರ್ವಕಾಲದಲ್ಲಿ ಈ ಲೋಕದಲ್ಲಿರುವ ಅರಸುಮಕ್ಕಳನ್ನೆಲ್ಲ ಹೇಳಲು ಹೆಸರಿಲ್ಲದಂತೆ ಇಪ್ಪತ್ತೊಂದು ಸಲ ಕೊಂದು ತನ್ನ ತಂದೆಯ ಹಗೆತನಕ್ಕಾಗಿ ಅಲ್ಲಿಗೆ ತಂದು ತನ್ನ ಹರಿತವಾದ ಕೊಡಲಿಯ ಅಲಗಿನಿಂದ ರಕ್ತವು ಚೆಲ್ಲಿ ಹರಿಯುವಂತೆ ಕತ್ತರಿಸಿ ಅವರ ರಕ್ತಧಾರೆಯಿಂದ ತುಂಬಿ ತನ್ನ ತಾಯಿಗೆ ಸ್ನಾನ ಮಾಡಿಸುವುದಕ್ಕೂ ತಾನು ಸ್ನಾನ ಮಾಡಿ ತನ್ನ ತಂದೆಗೆ ತರ್ಪಣ ಕೊಡುವುದಕ್ಕೂ ಮಾಡಿದ ಅಯ್ತು ದೊಡ್ಡ ಮಡುಗಳಾದುವು. ಅವುಗಳ ಸಮೀಪದಲ್ಲಿ ಸ್ಥಳವನ್ನು ನಿಷ್ಕರ್ಷಿಸಿ ಬೀಡನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy