SearchBrowseAboutContactDonate
Page Preview
Page 452
Loading...
Download File
Download File
Page Text
________________ ನವಮಾಶ್ವಾಸಂ / ೪೪೭ ವ|| ಎಂಬ ಮಂಗಳಪಾಠಕರ ಮಂಗಳ ವೃತ್ರೋಚ್ಚಾರಣೆಗಳೆಸೆಯೆ ಧರ್ಮಪುತ್ರ ಕುರುಕ್ಷೇತ್ರಾಭಿಮುಖನಾದಾಗಚಂ|| ಧ್ವಜಮಯಮಂಬರಂ ಗಜಮಯಂ ಭುವನಂ ಪ್ರಳಯ ಪ್ರಚಂಡ ಭೂ ಭುಜಮಯಮಷ್ಟದಿಗ್ಗಳಯಮಶ್ವಮಯಂ ಜಗತೀತಳಂ ರಥ | ವಜಮಯಮುಂ ಪದಾತಿಮಯಮುಂ ನೆಲೆಯಾದುದು ಕಾಡು ಕೋಡುಮಾರ್ ತ್ರಿಜಗದೊಳಾಂಪರೀ ಬಲಮನಿನ್ನೆನಿಸಿತ್ತು ಚತುರ್ಬಲಾರ್ಣವಂll ೯೮ ಎಣಿಕೆಗಳುಂಬಮುಂ ಪಿರಿದುಮಾದ ಪದಾತಿ ವರೂಥ ವಾಜಿ ವಾ ರಣ ಬಲದಿಂದಮಿರ್ಮಡಿಸ ಧಾತ್ರಿಯ ಬಿನಗೆಂದಿನಂದವ | ಅಣಕಮಿದಂದು ಕಣ್ ತುಮುಳ ಪರ್ಬೆಡೆಯಿಂ ಮಣಿ ಸೂಸೆ ಬೇಸಟಿಂ ತಿಣುಕಿದನಾನಲುಮ್ಮಳಿಸಿ ಶೇಷನಶೇಷಮbವಿಭಾಗಮಂ || ೯೯ ಉit ಏಳದ ಪೊನ್ನ ಪುಗೆಯ ಪರ್ವಿಡಿ ಕಟ್ಟದಿರಾಗೆ ಮುಂದೆ ಬಂ ದೇಳಿದ ಚಿನ್ನಗನ್ನಡಿಯ ಚೀಟಕೆ ಬೀಸುವ ಕುಂಚಮಯ ಮ | ಯೋಜುವ ಗಾಡಿ ಕಾಂಚನದ ದಂಡದ ಸೀಗುರಿ ನೋಡಾರುಮಂ ಮಾಜಿ ಮನೋಜನೊಡ್ಡನಿಸಿದರ್ ನಡತಂದ ನರೇಂದ್ರಕಾಂತಯರ್ || ೧೦೦ ನಿರೀಕ್ಷಿಸುತ್ತಿದ್ದಾನೆ. ವ|| ಎಂಬ ಅರ್ಥದಿಂದ ಕೂಡಿದ ಹೊಗಳುಭಟ್ಟರ ಮಂಗಳಶ್ಲೋಕಪಠನವು ಶೋಭಾಯಮಾನವಾಗಿರಲು ಧರ್ಮರಾಜನು ಕುರುಕ್ಷೇತ್ರಕ್ಕೆ ಅಭಿಮುಖನಾದನು. ೯೮, ಆಕಾಶವು ಬಾವುಟಗಳಿಂದ ತುಂಬಿದೆ ; ಲೋಕವೆಲ್ಲ ಆನೆಗಳಿಂದ ತುಂಬಿದೆ. ಎಂಟು ದಿಕ್ಕುಗಳ ಸಮೂಹವು ಪ್ರಳಯಕಾಲದಷ್ಟು ಭಯಂಕರರಾದ ರಾಜರಿಂದ ತುಂಬಿದೆ. ಭೂಮಂಡಲವು ಕುದುರೆಯಿಂದ ತುಂಬಿದೆ. ಕಾಡು ಕೋಡುಗಳು ರಥಗಳ ಸಮೂಹದಿಂದಲೂ ಕಾಲಾಳುಗಳ ಸಮೂಹದಿಂದಲೂ ಸಂಪೂರ್ಣವಾಗಿ ತುಂಬಿವೆ. ಮೂರುಲೋಕಗಳಲ್ಲಿ ಯಾರು ಈ ಸೈನ್ಯವನ್ನು ಪ್ರತಿಭಟಿಸುತ್ತಾರೆ ಎನ್ನುವ ಹಾಗೆ ಚತುರಂಗಸೇನಾಸಮುದ್ರವು ಎನ್ನಿಸಿತು. ೯೯. ಲೆಕ್ಕಕ್ಕೆ ಮೀರಿದುದೂ ಮಹತ್ತಾದುದೂ ಆದ ಚತುರಂಗಸೈನ್ಯದ ಭಾರದಿಂದ ಭೂಮಿಯ ಭಾರವು ಎರಡರಷ್ಟಾಗಲು ಈ ಹಿಂಸೆ ನನಗೆ ಎಂದಿನ ರೀತಿಯದಲ್ಲ ಎಂದು ಆದಿಶೇಷನು ಕಣ್ಣನ್ನು ಅರ್ಧಮುಚ್ಚಿ ದೊಡ್ಡ ಹೆಡೆಯಿಂದ ರತ್ನಗಳು ಚೆಲ್ಲುತ್ತಿರಲು ಸಮಸ್ತ ಭೂಮಂಡಲದ ಭಾರವನ್ನು ಧರಿಸಲು ತಿಣುಕಿದನು. ೧೦೦. ತಾವು ಹತ್ತಿದ ಸುವರ್ಣಾಲಂಕಾರದಿಂದ ಕೂಡಿದ ದೊಡ್ಡ ಹೆಣ್ಣಾನೆಯು ಆ ಸೈನ್ಯದೊಂದಿಗೆ ರಾಜಪತ್ನಿಯರು ವೈಭವಯುಕ್ತವಾದ ಆನೆಯನ್ನೇರಿ ಬಂದರು. ಸೌಂದರ್ಯವತಿಯರಾದ ದಾಸಿಯರು ಸುವರ್ಣಾಲಂಕೃತವಾದ ಆನೆಗಳನ್ನೇರಿ ತಾವು ಧರಿಸಿರುವ ರತ್ನಗನ್ನಡಿಗಳೂ, ಚಿನ್ನದ ಕಾವನ್ನುಳ್ಳ ಸೀಗುರಿಗಳೂ ತಮ್ಮ ಶರೀರಕಾಂತಿಯಿಂದ ಕೂಡಿ ನೋಡಿದವರು ಮಾರುಹೋಗುವಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy