SearchBrowseAboutContactDonate
Page Preview
Page 449
Loading...
Download File
Download File
Page Text
________________ ೪೪೪) ಪಂಪಭಾರತಂ ವ|| ಅಂತು ಮಾಡಿದ ಪರಿಸಂಖ್ಯೆಯೊಂದಕ್ಕೋಹಿಣಿ ಬಲಂಬೆರಸು ತಲೆಬಟವಚಿಯೆಂದಭಿಮನ್ಯುಗೆ ಕೂಸಂ ಕೊಟ್ಟ ಜಟ್ಟಿಗಂ ವಿರಾಟಂ ಶ್ವೇತನುತ್ತರಂ ಶಂಖನೆಂಬ ಮೂವರ್ ಮಕ್ಕಳುಂ ಶತಾನೀಕ ಶತದ್ಯುಮ್ಮ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂಬೆರಸು ನೆಲನದಿರೆ ಮುಂಗೋಳೊಳ್ ನಡೆಯ ದೌಪದಿಯ ಕೊಟ್ಟ ಕಣ್ಣುಮಂ ದ್ರೋಣನೊಳಾದ ಪರಿಭವಮುಮಂ ನೆನೆದೊಂದಕ್ಕೋಹಿಣಿ ಬಲಂಬೆರಸು ದ್ರುಪದಂ ಧೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಃ ಪುರುಕುತ್ಸು ವಿಚಿತ್ರಾದಿಗಳಪ್ಪ ತನ್ನ ಮಕ್ಕಳೊರಸು ನಲಂ ಮೂರಿವಿಟ್ಟಂತೆ ಬಲವಕ್ಕದೊಳ್ ನಡೆಯ ಸುಭದ್ರೆಯ ಕೊಟ್ಟ ನಣ್ಣಿಂಗನುಬಲವಾಗಿ ಪುಂಡರೀಕಾಕ್ಷನ ತಮ್ಮಂ ಸಾತ್ಯಕಿ ವೃಷ್ಠಿ ಕಾಂಭೋಜಕುಳತಿಳಕರಪ್ಪ ಯಾದವರ ಕುಲದೊಡನೆಯಕ್ಕೋಹಿಣೀಪತಿ ನಾಯಕಂ ಭೂಪತಿಯೆಡವಕ್ಕದೊಳ್ ನಡೆಯ ಕೇಕಯ ವಿಷಯಾಧೀಶರರಪ ಕೃಕಯರಯರುಮೊಂದಕೊಹಿಣಿ ಬಲದೊಡನೆ ಸಿಡಿಲನುರುಳಿ ಮಾಡಿದಂತು ಒಂಗೋಲ್ ನಡಯ ಪಾಂಡಂ ಶ್ರೀಜಯಹೋಮಕರೊಡನೊಂದಕೋಹಿಣೀ ಬಲಂಬೆರಸು ಸುತ್ತಿಳದು ಬಳಸಿ ಬರೆ ಧರಣೀಂದ್ರನ ತಂಗೆಯಪ್ಪ ಕನಕಲತೆಗಂ ವಿಕ್ರಮಾರ್ಜುನಂಗಂ ಪುಟ್ಟಿದ ಮಗನಿಳಾವಂತನನಂತ ನಾಗರಾಜ ಬಲಂಬೆರಸು ನಾಗಲೋಕಮ ಕಿಟ್ಟುಬರ್ಪಂತೆ ಒಂದು ಆನೆಗೆ ನೂರು ತೇರುಗಳು ; ಆ ತೇರು ಒಂದೊಂದಕ್ಕೆ ನೂರು ಕುದುರೆಗಳು, ಅಷ್ಟು ಕುದುರೆಯ ಸೈನ್ಯದ ಒಂದೊಂದಕ್ಕೆ ನೂರಾಳು ಸೇರಿಕೊಂಡಿರಲು, ಅದು ತಿಳಿದವರ ಗಣನೆಯ ಪ್ರಕಾರ ಒಂದು ಅಕ್ಟೋಹಿಣೀ ಎಂದೆನಿಸಿತು ವlು ಹೀಗೆ ಮಾಡಿದ ಲೆಕ್ಕದ (ಈ ಗಣನೆಗೆ ಅನುಗುಣವಾದ) ಒಂದು ಅಕ್ಟೋಹಿಣಿ ಸೈನ್ಯದಿಂದ ಕೂಡಿ ತನ್ನ ತಲೆಯನ್ನೇ ಬಳುವಳಿಯನ್ನಾಗಿ ಮಾಡಿ ಉತ್ತರನಿಗೆ ಮಗಳನ್ನು ಕೊಟ್ಟ ಶೂರನಾದ ವಿರಾಟನು, ಶ್ವೇತ, ಉತ್ತರ, ಶಂಖರೆಂಬ ಮೂರು ಮಕ್ಕಳನ್ನೂ ಶತಾನೀಕ, ಶತದ್ಯುಮ್ಮ, ಶತಚಂದ್ರ ಮೊದಲಾದ ಹನ್ನೊಂದು ತಮ್ಮಂದಿರೊಡಗೂಡಿ ಭೂಮಿಯು ನಡುಗುವಂತೆ ಮುಂಭಾಗದಲ್ಲಿ ನಡೆದನು. ಬ್ರೌಪದಿಯನ್ನು ಕೊಟ್ಟಿರುವ ಬಾಂಧವ್ಯವನ್ನೂ ದ್ರೋಣಾಚಾರ್ಯನಿಂದುಂಟಾದ ಅವಮಾನವನ್ನೂ ನೆನೆಸಿಕೊಂಡು ಒಂದು ಅಕ್ಟೋಹಿಣೀ ಸಮೇತನಾಗಿ ದ್ರುಪದನು ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜ, ಪುರುಕುತ್ಸು, ವಿಚಿತ್ರರೇ ಮೊದಲಾದ ತನ್ನ ಮಕ್ಕಳೊಡಗೂಡಿ ಭೂಮಿಯ ಜನವೆಲ್ಲ ಗುಂಪುಗೂಡಿದ ಹಾಗೆ ಬಲಪಾರ್ಶ್ವದಲ್ಲಿ ನಡೆದನು. ಸುಭದ್ರೆಯನ್ನು ಕೊಟ್ಟಿರುವ ನಂಟುತನಕ್ಕನುಗುಣವಾಗಿ ಶ್ರೀಕೃಷ್ಣನ ತಮ್ಮನಾದ ಸಾತ್ಯಕಿಯು ವೃಷ್ಠಿ ಕಾಂಭೋಜಕುಲತಿಲಕರಾದ ಯಾದವಕುಲದವರೊಡನೆ ಅಕ್ಟೋಹಿಣಿ ಸೈನ್ಯದ ನಾಯಕನಾಗಿ ರಾಜನ ಎಡಭಾಗದಲ್ಲಿ ನಡೆದನು. ಕೇಕಯ ದೇಶಾಧೀಶರಾದ ಕೈಕಯಿದು ಮಂದಿಯೂ ಒಂದಕ್ಟೋಹಿಣೀ ಬಲದೊಡನೆ ಸಿಡಿಲನ್ನು ಉಂಡೆ ಮಾಡಿದ ಹಾಗೆ ಹಿಂಭಾಗದಲ್ಲಿ ನಡೆದರು. ಪಾಂಡ್ಯನು ಶ್ರೀಜಯ ಸೋಮಕರೊಡನೆ ಒಂದಕ್ಟೋಹಿಣಿ ಸೈನ್ಯಸಮೇತನಾಗಿ ಸುತ್ತಲೂ ವ್ಯಾಪಿಸಿ ಬಂದನು. ರಾಜನ ತಂಗಿಯಾದ ಕನಕಲತೆಗೂ ವಿಕ್ರಮಾರ್ಜುನನಿಗೂ ಹುಟ್ಟಿದ ಮಗನಾದ ಇಳಾವಂತನು ಸಮಸ್ತ ನಾಗರಾಜಸೈನ್ಯದೊಡನೆ ಪಾತಾಳಲೋಕವೇ ಕಿತ್ತು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy