________________
ಉಪೋದ್ಘಾತ | ೩೯ ಹೂವನ್ನು ಮಾಲೆ ಹಾಕುತ್ತಿದ್ದಾರೆ. ಅವರ ಜೋಡುಗೆಯ್ಯಗಳನ್ನು ನೋಡಿದರೆ ಅದು ಹೂವನ್ನು ಮಾರುವಂಗವಲ್ಲ. 'ಮನೆಯಾಜ್ರನಂ ಮಾಡುವಂದಂ' ಎನ್ನಿಸುತ್ತದೆ ಅರ್ಜುನನಿಗೆ. ಕಣ್ಮುಚ್ಚಿ ಮಲಗಿದ ಗಂಡನೆದುರಿಗೆ ಹೆಂಡತಿಯೊಬ್ಬಳು ಮಿಂಡನೊಡನೆ ಗೊಡ್ಡಾಟವಾಡುತ್ತಿದ್ದಾಳೆ. ಹಾದರದಲ್ಲಿ ಸಂಸಾರಸಾರಸತ್ವಸ್ವವನ್ನೂ ಗೆಲ್ಲುವ ರುಚಿಯಿದ್ದಿರಬೇಕು. ಇಲ್ಲದಿದ್ದರೆ ತಲೆ ಮೂಗುಗಳನ್ನಾದರೂ ಒತ್ತೆಯಿಟ್ಟು ಇಲ್ಲಿಗೆ ಬರುತ್ತಿದ್ದರೆ ? ಎನ್ನುತ್ತಾನೆ ಅರಿಗ, ಅವರ ಸಂಭಾಷಣೆಯ ವೈಭವವೆಷ್ಟು! ಕುಹಕಕೇಳಿಗಳೆಷ್ಟು! ಸರಸಸಲ್ಲಾಪಗಳೆಷ್ಟು! ನೋವುನುಲಿತಗಳೆಷ್ಟು! ಎಷ್ಟು ರೀತಿಯ ಬೊಜಂಗರು! ಅರಬೋಜಂಗ, ಕಿರುಕುಳ ಬೊಜಂಗ, ಪೊರ್ಕುಳಿ ಬೊಜಂಗ, ಪೊಲೀಲ ಬೊಜಂಗ, ಕತ್ತುರಿ ಬೊಜಂಗರು,' ಅವರ ಬಿಯದಳವಿಗೆ ಮನಮೆಚ್ಚಿ ಬರುತ್ತಿದ್ದರೆ ಮುಂದೆ 'ಕಳ್ಳಿನೊಳಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರು ಮೊಳ್ಕೊಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಲನ ಮಾಡಿದ ಮರ್ದಿನಂತೆ ಬೆಳೆದು ದಳಂಬಡೆದು ಮೂನೂಲುವತ್ತು ಜಾತಿಯ ಕಳಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಯ ಮಾಳ್ಳೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಗಳಂ ಮಂತ್ರಿಸಿ ನೆಲದೊಳೆದು, ತಲೆಯೊಳ್ ತಳಿದು, ಕಳ್ಳಿನೊಳ್ ಬೊಟ್ಟನಿಟ್ಟುಕೊಂಡು, ಕೆಲದರ್ಗೆಲ್ಲಂ ಬೊಟ್ಟಿಟ್ಟು, ಕಿಳೆಯರ್ಪಿರಿಯರಜೆದು ಪೊಡೆವಟ್ಟು ಧರ್ಮಗಳುಡಿವರ್ಗೆಲ್ಲಂ ಮೀಸಲ್ಗಳ್ಳನೆಯದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಟೆಕಿಚೆದೆಳೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲದಲ್ಲಣಿಗೆಯ ಚಕ್ಕಣಂಗಳಂ ಮರೀಚಿ, ಚಿಂತಾಮಣಿ, ಕಕ್ಕರ ಮೊದಲಾದ ಸವಿಸವಿದುವುಗಳ ರುಚಿಯನ್ನು ನಾನಾರೀತಿಯಾಗಿ ವಿಮರ್ಶೆಮಾಡಿ ಕಾಂತೆಯರು ಕಾಮಾಂಗವನ್ನು ಕುಣಿಯುತ್ತಾರೆ. ತೃಪ್ತಿಯಾಗಿ ಕುಡಿದು ಪ್ರಜ್ಞೆತಪ್ಪಿ, ನಿರ್ವಸ್ತಳಾಗಿ ಕುಣಿಯುತ್ತಾಳೆ, ಹಾಡುತ್ತಾಳೆ, ತೊದಲುತ್ತಾಳೆ, ಸೂಳೆಗೇರಿಗೆ ಹೋಗುವನೊಬ್ಬನನ್ನು ಸ್ನೇಹಿತನೊಬ್ಬನು ತಡೆಯುತ್ತಾನೆ. ಬೇರೊಬ್ಬ ಹೆಂಡತಿಯು ಅಲ್ಲಿಗೆ ಹೋಗುತ್ತಿದ್ದ ಗಂಡನನ್ನು ಕಣ್ಣೀರಿನ ಸಂಕೋಲೆಯಿಂದ ಬಿಗಿಯುತ್ತಿದ್ದಾಳೆ. ಕುಂಟಣಿಯ ಹಿಂಸೆಯಿಂದ ವಿಶೇಷ ಧನವನ್ನು ಸಂಪಾದಿಸುತ್ತಿದ್ದ ಸೂಳೆಯೊಬ್ಬಳು ಪಲ್ಲಿಲಿವಾಯನಾದ ಮುದುಕನೊಬ್ಬನ ಲೋಳೆಪೊನಲ್ಗಳಿಗೆ ಅಸಹ್ಯ ಪಡುತ್ತಿದ್ದಾಳೆ. ಈ ವರ್ಣನೆಗಳು ಮೂಲ ಕಥಾಪ್ರವಾಹಕ್ಕೆ ಅಡ್ಡಿಯಾದರೂ ಆಕರ್ಷಕವಾಗಿ ಆ ಕಾಲದ ಸಮಾಜದ ಚಿತ್ರವನ್ನು ಕೊಡುವುದಕ್ಕೆ ಬಹಳ ಸಹಾಯಕವಾಗಿವೆ.
ಪಂಪನ ಶೈಲಿಯು ದಿಣ್ಣೆಯಿಂದ ತಡೆಯಿಲ್ಲದೆ ಹರಿಯುವ ನದಿಯಂತೆ ಬಹುಶೀಘ್ರಗಾಮಿಯಾಗಿರುತ್ತದೆ. ಮಿತವಾದ ಭಾಷೆಯಿಂದ ವಿಶೇಷವಾದ ಕಥಾಭಾಗವು ಒಂದರ ಹಿಂದೆ ಒಂದು ಓಡುವುದು. ಮುಂದಿನ ವಚನವನ್ನು ಗಮನಿಸಿ :
'ನಿಮ್ಮಮನಕ್ಕೆ ಕೊಕ್ಕರಿಕೆಯಾಗೆಯುಂ ಪಾಜೆಗೆ ಗೆಂಟಾಗೆಯುಂ ನೆಗಟ್ಟಿಮಲ್ಲೆಂದು