SearchBrowseAboutContactDonate
Page Preview
Page 437
Loading...
Download File
Download File
Page Text
________________ ೪೩೨) ಪಂಪಭಾರತಂ ಕಂll ಕಡು ಮುಳಿದು ನಿನ್ನ ತೊಡೆಗಳ ನುಡಿವಡೆಯೋಳ್ ಭೀಮಸೇನನಾನಾ ಪದದೊಳ್ | ಪಿಡಿಯಿಂದಿರ್ದೆನಿದಂ ಪಿಡಿಯಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ || - ೫೯ ವ|| ಅಂತು ವಿದುರಂ ವಿಚ್ಚಿದುರಮನನಾಗಿ ಬಿಲ್ಲನುಡಿವುದುಂ ಸುಯೋಧನಂ ತನ್ನ ಬಲದ ತೋಳುಡಿದಂತಾಗಿ ಸಿಗ್ಗಾಗಿ ಬಾಳಂ ಕಿಂದರೆ ಮನದೊಳಾದೇವದಿಂ ದೇವಕೀನಂದನನ ಮೇಲೆವಾಯ್ತುದುಂ ನಂಜಿನ ಮೇಲೆವಾಯ್ ನೊಳವಿನಂತುರುಳರೆ ಪಾಯುಉll ಮೂಡಿ ಮಾಡಿದಂದು ನೆಲನೆಲ್ಲಮನಾ ಬಲಿಗಾದ ರೂಪಮಂ ತೋಳದನೀ ಜಗತ್ತಯಮನೂರ್ಮಯ ನುಂಗುವ ಕಾಲ ರೂಪಮಂ | ತೊಳೆದನಂತೆ ರೌದ್ರತರ ರೂಪಮನೊರ್ಮಯ ವಿಶ್ವರೂಪಮಂ ತೋಚಿದನಿರ್ದರಂ ನಟಿಯ ಮೋಹಿಸಿ ವೈಷ್ಣವದಿಂ ಮುರಾಂತಕಂ || ೬೦ ವ|| ಆಗಳ್ ಧೃತರಾಷ್ಟ್ರ ಬಂದು ಮುಕುಂದನನೇಕಸ್ತುತಿಶತಸಹಸಂಗಳಿಂ ಸ್ತುತಿಯಿಸಿದೊಡಾತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು ಮುನ್ನಿನಂತೆ ಮನುಷ್ಯದೇಹಮಂ ಕೆಯೊಂಡು ತೈಲೋಕ್ಯ ಗುರು ಗುರುತನೂಜನ ಕೆಯ್ಯಂ ಪಿಡಿದರಮನೆಯಂ ಪೂಣಮಟ್ಟು ಕಪಟ ಪ್ರಪಂಚದಿಂದಾತನುಮಂ ತನಗೆ ಮಾಡಿ ಬೀಡಿಂಗೆ ಎಂದು ಕುಂತಿಗೇಕಾಂತದೊಳಿಂತೆಂದಂ - ೫೯. ಎಲವೊ ದುರ್ಯೊಧನ, ಮುಂದೆ ಭೀಮಸೇನನು ವಿಶೇಷವಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಬೇಕೆಂದಿದ್ದೆ. ಈಗ ಹಿಡಿಯುವುದಿಲ್ಲ ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು. ವll ಹಾಗೆ ವಿದುರನು ಭಗ್ನಮನಸ್ಕನಾಗಿ ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ ಒರೆಯಿಂದ ಕತ್ತಿಯನ್ನು ಸೆಳೆದು ಒದರಿ ಮನಸ್ಸಿನಲ್ಲುಂಟಾದ ಕೋಪದಿಂದ ಕೃಷ್ಣನ ಮೇಲೆ ಹಾಯಲು ವಿಷದ ಮೇಲೆ ಹಾಯುವ ನೊಣದಂತೆ ಉರುಳಿಬೀಳುವ ಹಾಗೆ. ಹಾಯಲು-೬೦, ಶ್ರೀಕೃಷ್ಣನು ತನ್ನ ವಿಷ್ಣುಮಾಯೆಯಿಂದ ಸಭೆಯಲ್ಲಿದ್ದವರನ್ನೆಲ್ಲಾ ಪೂರ್ಣವಾಗಿ ಮೂರ್ಛಗೊಳಿಸಿ ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡಆಕಾರವನ್ನು ತೋರಿಸಿದನು. ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು. ಹಾಗೆಯೇ ಒಂದೇಸಲಕ್ಕೆ ವಿಶ್ವರೂಪವನ್ನು ತೋರಿಸಿದನು. ವ|| ಆಗ ಧೃತರಾಷ್ಟ್ರನು ಬಂದು ನೂರಾರು ಸಾವಿರಾರು ಸ್ತೋತ್ರಗಳಿಂದ ಸ್ತುತಿಸಲು ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ ಮೊದಲಿನ ಮನುಷ್ಯರೂಪವನ್ನು ತಾಳಿ ಮೂರುಲೋಕದ ಗುರುವಾದ ಕೃಷ್ಣನು ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು ಬೀದಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy