SearchBrowseAboutContactDonate
Page Preview
Page 435
Loading...
Download File
Download File
Page Text
________________ ೪೩೦ | ಪಂಪಭಾರತ ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ಳುಂ ನಿನಗೆ ಸೆಣಸಲೆಂತು ಬಗೆ ಬಂದಪುದುಉlli ನೆಟ್ಟನೆ ಬೂತುಗೊಳ್ಳ ತಳದಿಂ ದಶಕಂಧರನಾಡಿ ಪಾಡಿ ನಾ ಇಟ್ಟರೆ ಕೊಂಡನಲ್ಲದೆ ಬರಂಗಳನೀಶ್ವರನಲ್ಲಿ ಪೇಟಿಮಾ | ಮೊಟ್ಟಜೆಯಿಂದ ಕೊಂಡನೆನುತುಂ ವಿಜಯಂ ನೆಲಕಿಕ್ಕಿ ಗಂಟಲಂ ಮಟ್ಟದ ಕೊಂಡನೇ ಹರನ ಪಾಶುಪತಾಸ್ತಮನಿಂದ್ರಕೀಲದೊಳ್ || ೫೩ ಪೊಂಗಿ ಕಡಂಗಿ ಬೀರದೊಳೆ ಬೀಗುವ ನಿನ್ನಣುಗಾಳೆ ನೋಡೆ ನಿ ಇಂಗನೆಯರ್ ತೂವಳ ಭಯಂಗೊಳೆ ಕೋಡಗಗಟ್ಟುಗಟ್ಟಿ ಚಿ | ತ್ರಾಂಗದನುಮ್ಮೆ ನಿನ್ನನೆಡೆಮಾಡದಸುಂಗೊಳೆ ಕಾದಿ ತಂದ ವೀ ರಂಗರಿಗಂಗೆ ನೀಂ ಮಲೆದು ನಿಲ್ಲುದು ಪಾಟವಲಂ ಸುಯೋಧನಾ || ೫೪ ಮ|| ಸ | ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ ಕುರುರಾಜಾ ನಿನ್ನ ತಮ್ಮಂದಿರೊಳಿನಿಬರೊಳಾರಿಲ್ಲ ಗಾಂಗೇಯನಿಲ್ಲಾ | ಮರುಳೇ ಗಾಂಡೀವಿಯಾರೆಂದೆಣಿಕೆಗಳೆವೆ ಗಂಧರ್ವರುಯ್ಯಂದು ನಿನ್ನಂ ಕರುವಿಟ್ಟಂತಿರ್ದುದಿಲ್ಲಾ ನೆರೆದ ಕುರುಬಲಂ ತಂದವಂ ಪಾರ್ಥನಲ್ಲಾ || ೫೫ (ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳು ಅರ್ಜುನನ ಪರಾಕ್ರಮವನ್ನೂ, ಶತ್ರುಸೈನ್ಯವನ್ನು ಹೆದರಿಸಿದ ಪರಸೈನ್ಯಭೈರವನ ಅತಿಶಯವಾದ ಪೌರುಷವನ್ನೂ ಕಂಡೂ ಕೇಳಿಯೂ ನಿನಗೆ ಹೋರಾಡಲು ಹೇಗೆ ಮನಸ್ಸು ಬರುತ್ತದೆ. ೫೩. ದುರ್ಯೊಧನ ! ರಾವಣನು ಸಾಮಾನ್ಯವಾದ ಬಡಪ್ರಾಣಿಯಂತೆ ಹಾಡಿ ಪಾಡಿ ಬೇಡಿ ನಾಚಿಕೆಯಾಗುವ ರೀತಿಯಲ್ಲಿ ಈಶ್ವರನಿಂದ ವರಗಳನ್ನು ಪಡೆದನಲ್ಲದೆ ತನ್ನ ಪರಾಕ್ರಮದಿಂದ ತೆಗೆದುಕೊಂಡನೆ ಹೇಳು. ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟಿದೆ ಈಶ್ವರನ ಪಾಶುಪತಾಸ್ತವನ್ನು ಇಂದ್ರಕೀಲಪರ್ವತದಲ್ಲಿ ತೆಗೆದುಕೊಂಡನೆ ? (ಅರ್ಜುನನು ತನ್ನ ಪರಾಕ್ರಮದಿಂದಲೇ ಈಶ್ವರನಿಂದ ಅಸ್ತವನ್ನು ಪಡೆದುದರಿಂದ ರಾವಣನಿಗಿಂತ ಇವನು ಪರಾಕ್ರಮಿ ಎಂದರ್ಥ.) ೫೪, ಕೊಬ್ಬಿ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು ನಿನ್ನ ಸ್ತ್ರೀಯರು ತಮ್ಮ ಅಪಾಯವನ್ನು ಸೂಚಿಸುವ ಚಿಗುರನ್ನು ಹಿಡಿದುಕೊಂಡು ಹೆದರಿರಲು ಚಿತ್ರಾಂಗದನೆಂಬ ಗಂಧರ್ವನು ನಿನ್ನನ್ನು ಕೋಡಗವನ್ನು ಕಟ್ಟುವಂತೆ ಕಟ್ಟಿ ತೆಗೆದುಕೊಂಡು ಹೋಗುತ್ತಿರಲು ತಡಮಾಡದೆ ಪ್ರಾಣವನ್ನೆ ಸೆಳೆಯುವಂತೆ ಕಾದಿ ತಂದ ವೀರನಾದ ಅರ್ಜುನನಿಗೆ ಮಲೆತು ನೀನು ಪ್ರತಿಭಟಿಸಿ ನಿಲ್ಲುವುದು ಕ್ರಮವಲ್ಲವೇ ದುರ್ಯೊಧನ? ೫೫. ನಿನ್ನನ್ನು ಗಂಧರ್ವರು ಸೆಳೆದುಕೊಂಡು ಹೋದಾಗ ದ್ರೋಣಾಚಾರ್ಯರಿಲ್ಲ, ಕರ್ಣನಿಲ್ಲ, ಅಶ್ವತ್ಥಾಮನಿಲ್ಲ, ಕೃಪಾಚಾರ್ಯನೂ ಇಲ್ಲ, ನಿನ್ನ ಇಷ್ಟು ಜನ ತಮ್ಮಂದಿರಲ್ಲಿ ಯಾರೂ ಇಲ್ಲ, ಭೀಷ್ಮನೂ ಇಲ್ಲ. ಯಾರೂ ಸಮಯಕ್ಕಾಗಲಿಲ್ಲ. ಬುದ್ದಿಯಿಲ್ಲದವನೇ ಅರ್ಜುನನು ಯಾರೆಂದು ಕೀಳಾಡಿ ನುಡಿಯುತ್ತಿರುವೆ ? ಕುರುಸೈನ್ಯವು ಎರಕಹೊಯ್ದಂತೆ ಸ್ತಬ್ಧವಾಗಿತ್ತಲ್ಲವೆ ? ನಿನ್ನನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy