SearchBrowseAboutContactDonate
Page Preview
Page 433
Loading...
Download File
Download File
Page Text
________________ ೪೨೮ ಪಂಪಭಾರತಂ ಆರ್ಕಡುಕೆಯು ಪಾಂಡವರೊಳಾಂತಿಯಲ್‌ ನೆರೆವನ್ನರಿಂತಿದೇ ತರ್ಕ ಬಿಗುರ್ತಪೈ ನೆಲನೊಪ್ಪಿಸಿ ತಪ್ಪದೆ ಬಾಬನನ್ನದೀ | ಯುರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು ನಿನ್ನ ಮಯ್ಯ ನೆ ತರ್ಕುದಿದುರ್ಕಿ ಸಾವ ಬಗೆಯಿಂ ಸೆಣಸಲ್ ಬಗೆ ಬಂದುದಾಗದೇ || ೫೦ ಕoli ಮುಳಿಯಿಸಿ ಬರ್ದು೦ಕಲಾದನು ಮೊಳನೆ ಯುಧಿಷ್ಠಿರನನಮಳರಳವೆಂಬುದು ಭೂ | ವಳಯ ಪ್ರಸಿದ್ಧಮರಿತೃಪ ಬಳಂಗಳವರಿಚೆಯೆ ಪಳವೆಂಬರುಮೊಳರೇ || ೫೧ ಚಂii ಗಜೆಗೊಳೆ ಭೀಮಸೇನನಿದಿರಾಂತು ಬರ್ದುಂಕುವ ವರಿ ಭೂಭುಜ ಧ್ವಜಿನಿಗಳಿಲ್ಲದಲ್ಲದೆಯುಮೀ ಯುವರಾಜನ ನೆತ್ತರಂ ಕುರು | ಧ್ವಜಿನಿಯೆ ನೋಡೆ ಪೀರ್ದು ಭವದೂರುಯುಗಂಗಳನಾಜಿರಂಗದೊಳ್ ಗಿಜಿಗಿಜಿ ಮಾಡಲೆಂದವನ ಪೂಣ್ಣುದು ನಿಕ್ಕುವಮಾಗದಿರ್ಕುಮೇ || ೫೨ ವll ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು ಲಂಕೆಯ ವಿಭೀಷಣನನೊಂದ ದಿವ್ಯಾಸ್ತದೊಳೆಚ್ಚು ಕಪ್ಪಂಗೊಂಡ ವಿಕ್ರಮಾರ್ಜುನನ ವಿಕ್ರಮಮುಮಂ ಕಾಪಿನ ದೇವರೋಂದು ಪೊಬುಮಗಲದ ನೂಜು ಯೋಜನದಳಮಿ ಖಾಂಡವವನಮನನಲಂ ಮಾತುಗಳಿಂದಲೇನು ಪ್ರಯೋಜನ ೫೦. ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ಯಾರು ಸಮರ್ಥರು ? ಹೀಗೇಕೆ ಉಬ್ಬಿಹೋಗಿದ್ದೀಯೆ ? ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ತಪ್ಪದೆ (ಶಾಶ್ವತವಾಗಿ) ಬದುಕುತ್ತೇನೆ ಎನ್ನದೆ ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು ? ನಿನ್ನ ಶರೀರದ ರಕ್ತ ಕುದಿದು ಉಕ್ಕಿ ಸಾಯುವ ಇಚ್ಛೆಯಿಂದಲೇ ಯುದ್ದಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ ? ೫೧. ಧರ್ಮರಾಜನಿಗೆ ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ ? ಯಮಳರಾದ ನಕುಲಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು. ಅವರು ಯುದ್ದಮಾಡಲು, ಹೆದರವು ಎನ್ನುವ ಶತ್ರುಗಳೂ ಉಂಟೆ ? ೫೨. ಭೀಮಸೇನನು ಗದೆಯನ್ನು ಹಿಡಿಯಲು ಪ್ರತಿಭಟಿಸಿ ಬದುಕುವ ಶತ್ರುಸೈನ್ಯವಿಲ್ಲ ? ಅದೂ ಅಲ್ಲದೆ ಈ ಯುವರಾಜನಾದ ದುಶ್ಯಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಅಜ್ಜಿಗುಜ್ಜಿ ಮಾಡುತ್ತೇನೆಂದು ಅವನು ಪ್ರತಿಜ್ಞೆ ಮಾಡಿದುದು ನಿಜವಾಗದೇ ಹೋಗುತ್ತದೆಯೇ ? ವll ಅದಲ್ಲದೆ ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ ಲಂಕಾಪಟ್ಟಣದ ವಿಭೀಷಣನನ್ನು ಒಂದೇ ದಿವ್ಯಾಸ್ತದಿಂದ ಹೊಡೆದು ಕಪ್ಪವನ್ನು ತೆಗೆದುಕೊಂಡ ವಿಕ್ರಮಾರ್ಜುನನ ಪರಾಕ್ರಮವನ್ನು, ರಕ್ಷಣೆಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ ವಿಸ್ತಾರದ ಖಾಂಡವವನವನ್ನು ಅಗ್ನಿಗೆ ಸಮರ್ಪಿಸಿದ ಅರಾತಿಕಾಳಾನಳನ ಶಕ್ತಿಯನ್ನೂ, ಯಮನನ್ನೂ ಶ್ರಮವಿಲ್ಲದೆ ಗೆದ್ದು ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy