SearchBrowseAboutContactDonate
Page Preview
Page 426
Loading...
Download File
Download File
Page Text
________________ ನವಮಾಶ್ವಾಸಂ | ೪೨೧ ವ|| ಅಂತು ನಾಗಪುರಮನಿತಿಸುವ ನಾಗಪುರಮನಾ ನಾಗಶಯನಂ ಪೊಕ್ಕು ವಿದುರಂ ಪಾಂಡವ ಪಕ್ಷಪಾತಿಯಪುದಳೆಂದಾತನ ಮನೆಗೆ ವರೆ ತನಗಿದಿರ್ವಂದ ಕೊಂತಿಗಸುರಾಂತಕನೆಗಿ ತನಗಳಿಗಿದ ವಿದುರನಂ ಪರಸಿ ರಥದಿಂದಮಿದು ಮಣಿಮಯ ಪೀಠದೊಳ್ ಕುಳ್ಳಿರ್ದು ಪಾಂಡುತನೂಜರ ಕುಶಲವಾರ್ತೆಯನಪ ತದನಂತರಂ ವಿದುರನಜನನೇಗೆಯ್ಯ ತನುಮನಳಯದ ಕoll ತೀವಿದ ಮಜ್ಜನದಿಂ ಸ ದ್ಯಾವದಿನೊಸೆದೆತ್ತಿದೊಂದು ಚೀನದೊಳು ನಾ | ನಾ ವಿಧದ ಪದಪಿನೊಳ್ ಹರಿ ಗಾವಗಮಾಡಿದುದು ಪಥಪರಿಶ್ರಮಮಲ್ಲಂ || ೨೮ ವ|| ಅಂತು ವಿದುರನಜನನುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ಬಂದ ಬರವನಾಗಳ ಸುಯೋಧನಂಗಳಪುವುದುಂ ರಾಜರಾಜನುಂದೆ ಕಿರುನಗೆ ನಕ್ಕು ನಾಳಿನೋಲಗದೊಳ್ ತಂದು ಕಾಣಿಸೆಂಬುದುಂ ಮಲದಿವಸಂ ನೇಸ ಮೂಡಿದಾಗಳಾದಿತ್ಯನಂತನೇಕಮಣಿಮಯೂಖ ವಿಜೃಂಭಮಾಣಾಖಂಡಳ ವಿಳಂಬಿತಾಭೀಳ ಕೋದಂಡವಿಳಾಸ ವಿಭ್ರಮ ಸಿಂಹಾಸನಾಸೀನನುಂ ಪ್ರಮದಾಹಸ್ತವಿನ್ಯಸ್ತ ವಾಮಕ್ರಮಕಮಳನುಮನವರತ ಸುರಿತ ತಾರಕಾಕಾರ ಮುಕ್ತಾಭರಣ ಕಿರಣ ನಿಕರ ವಿಳಸಿತ ವಿಶಾಲೋರಸ್ಥಳನುಮನಂತ ಸಾಮಂತ ಮಕುಟ ಮಾಣಿಕ್ಯ ಮಯೂಖ ಯುವತಿಯರೂ, ಮದಿಸಿರುವವರೂ ಆದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ ಮಂದರ ಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಶಂಕೆಯನ್ನು ಕೃಷ್ಣನಿಗೆ ಉಂಟುಮಾಡಿತು. ವll ಭೋಗವತೀಪಟ್ಟಣವನ್ನು ಕೀಳುಮಾಡುವ ಹಸ್ತಿನಾಪಟ್ಟಣ ವನ್ನು ಶ್ರೀಕೃಷ್ಣನು ಪ್ರವೇಶಿಸಿದನು. ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬಂದನು. ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ನಮಸ್ಕಾರ ಮಾಡಿ ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು. ತೇರಿನಿಂದಿಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು ಪಾಂಡವರ ಕ್ಷೇಮಸಮಾಚಾರವನ್ನು ತಿಳಿಸಿದನು. ಕೃಷ್ಣನಿಗೆ ಸತ್ಕಾರಮಾಡುವ ರೀತಿಯು ವಿದುರನಿಗೆ ತೋರದಾಯಿತು. ೨೮. ಅವನು ಸಿದ್ಧಪಡಿಸಿದ ಸ್ನಾನದಿಂದಲೂ ಒಳ್ಳೆಯ ಮನಸ್ಸಿನಿಂದ ಬಡಿಸಿದ ಆಹಾರದಿಂದಲೂ ನಾನಾರೀತಿಯಾದ ಸಾಮಾನ್ಯ ಸತ್ಕಾರಗಳಿಂದಲೂ ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಶಮನವಾಯಿತು. ವ! ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರಲಾರದೆ ಹುಸಿನಗೆ ನಕ್ಕು ನಾಳೆಯ ಸಭೆಯಲ್ಲಿ ತಂದು ಕಾಣಿಸು ಎಂದನು. ಮಾರನೆಯ ದಿನ ಸೂರ್ಯೋದಯವಾದಾಗ ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ ಉದ್ದವೂ ಭಯಂಕರವೂ ಆದ ಬಿಲ್ಲಿನ ವೈಭವಯುಕ್ತವಾದ ವಿಳಾಸದಿಂದ ಕೂಡಿದ ಸಿಂಹಾಸನದಲ್ಲಿ ಕುಳಿತನು. ಸ್ತ್ರೀಯರು ತಮ್ಮಕಮ್ಮಿಂದ ಅವನ ಎಡಗಾಲನ್ನು ಒತ್ತುತ್ತಿದ್ದರು. ಅವನ ವಿಸ್ತಾರವಾದ ಎದೆಯನ್ನು ಅಲಂಕರಿಸಿದ ಆಭರಣಗಳು ನಕ್ಷತ್ರಗಳಂತೆ ಪ್ರಕಾಶಮಾನವಾಗಿದ್ದುವು. ಅನಂತ ಸಾಮಂತ ರಾಜರ ಕಿರೀಟದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy