SearchBrowseAboutContactDonate
Page Preview
Page 424
Loading...
Download File
Download File
Page Text
________________ ಶಾ ಕಂ|| ಕಂ|| 611 ನಿಜ ಮತಮನನಗೆ ಮಾಜಿ ಅಜಾತ ದೊರೆಯಲ್ಲವಲ್ಲದಿರ್ದೊಡಮಂ | ದ ಜನಿಸಿ ನುಡಿಯಿಸಿದುವಹಿ ಧ್ವಜನೋವದ ಮುನ್ನೆ ನೆಗಟ್ಟಿ ದುಶ್ಚರಿತಂಗಳ್ | ನವಮಾಶ್ವಾಸಂ | ೪೧೯ ೨೧ ಜಟಮಟಿಸಿಕೊಂಡು ನಿಮ್ಮ ಘಟಿಯಿಸುವೀ ಸಂಧಿ ಕೌರವರ್ಕಳೊಳೆನ್ನಿ | ಘಟತ ಜರಾಸಂಧೋರ ಸಟ ಸಂಧಿವೊಲೊಂದ ಪೊಳ್ ವಿಘಟಿಸದೇ || ತೋಡುವನೊರ್ವನೊಳರುಳನುರ್ವಿಗೆ ನೆತ್ತರನೆಯ ಪೀರ್ದುವಿ ರ್ದಾಡುವನೊರ್ವನೂರುಗಳನನ್ನ ಗದಾಶನಿಘಾತದಿಂದ ನು | ರ್ಗಾಡುವೆನೆಂದು ಲೋಕಮಳೆಯುತ್ತಿರ ಪೂನಗಂತ ಸಂತಸಂ ಮಾಡದ ಸಂಧಿ ಮಾಡಿ ಕುರುಪುತ್ರರೊಳೆನ್ನನೆ ಜೋಡುಮಾರೇ || ೨೪ ವll ಎಂದು ಮಸಗಿದ ಮದಾಂಧಗಂಧಸಿಂಧುರದಂತೆ ದೆಸೆಗೆ ಮಸಗಿದ ವಾಯುಪುತ್ರನಂ ಧರ್ಮಪುತ್ರ ಸಂತೈಸಿ ಆ ಲಾಕ್ಷಾಗೃಹ ದಾಹವೊಂದ ವಿಷಸಂಯುಕ್ತಾನ್ನಮಂತೊಂದ ಪಾಂ ಚಾಲೀ ನಿಗ್ರಹವೊಂದ ಟಕ್ಕುವಗೆಯಿಂ ಗೆಲ್ಲಿರ್ದ ಜೂದೊಂದೆ ಶಾ | ರ್ದೂಲಾಭೀಲ ವನಂಗಳೊಳ್ ತಿರಿಪಿದೀಯುರ್ಕೊಂದ ಲೆಕ್ಕಂಗೊಳಲ್ ಕಾಲಂ ಸಾಲವೆ ಕಂಡುಮುಂಡುಮಮಗಿನ್ನಾತಂಗಳೊಳ್ ಪಾಟಿಯೇ | ೨೨ ೨೩ ೨೧. ಕೃಷ್ಣ, ನಿನ್ನ ಮಾತನ್ನು ಮೀರುವುದು ನನಗೆ ಯೋಗ್ಯವಲ್ಲ, ಅಲ್ಲದಿದ್ದರೂ ದುರ್ಯೋಧನನು ಲಕ್ಷಿಸದೆ ಮಾಡಿದೆ ಕೆಟ್ಟ ಕೆಲಸಗಳು ನನ್ನಿಂದ ಒರಟಾಗಿ ಮಾತನಾಡಿಸುತ್ತಿವೆ. ೨೨. ಅರಗಿನ ಮನೆಯಲ್ಲಿ ಸುಟ್ಟುದೊಂದೇ, ವಿಷಮಿಶ್ರವಾದ ಆಹಾರವನ್ನು ತಿನ್ನಿಸಿದುದೊಂದೇ, ದೌಪದಿಗೆ ಅವಮಾನಪಡಿಸಿದುದೊಂದೇ, ಮೋಸದ ರೀತಿಯಿಂದ ಗೆದ್ದ ಜೂಜೊಂದೇ, ಹುಲಿಗಳಿಂದ ಭಯಂಕರವಾದ ಕಾಡಿನಲ್ಲಿ ಅಲೆಯುವ ಹಾಗೆ ಮಾಡಿದ ಆ ಅಹಂಕಾರವೊಂದೇ-ಗಣನೆ ಮಾಡುವುದಕ್ಕೆ ಕಾಲಾವ ಕಾಶವೇ ಸಾಕಾಗುವುದಿಲ್ಲ! ನೋಡಿ ಅನುಭವಿಸಿಯೂ ಇನ್ನೂ ಅವರಲ್ಲಿ ನಮಗೆ ಧರ್ಮಪಾಲನೆಯೆ? ೨೩. ಉತ್ಸಾಹದಿಂದ ಈಗ ನೀವು ಕೌರವರಲ್ಲಿ ಮಾಡ ಬೇಕೆಂದಿರುವ ಸಂಧಿಕಾರ್ಯವು ಕೂಡಿಕೊಂಡಿರುವ ಜರಾಸಂಧನ ಎದೆಯ ಜೋಡಣೆಯ ಹಾಗೆ ನನ್ನಿಂದ ಅಲ್ಪಕಾಲದಲ್ಲಿ ಮುರಿದುಹೋಗದೆ ಇರುತ್ತದೆಯೇ? ೨೪. ಒಬ್ಬನ (ದುಶ್ಯಾಸನನ) ಹೊಟ್ಟೆಯೊಳಗಿನ ಕರುಳನ್ನು ನೆಲಕ್ಕೆ ತೋಡಿಹಾಕುತ್ತೇನೆ. ರಕ್ತವನ್ನು ಪೂರ್ಣವಾಗಿ ಹೀರಿ ಔತಣಮಾಡುತ್ತೇನೆ. ಒಬ್ಬನ (ದುರ್ಯೋಧನನ) ತೊಡೆಗಳನ್ನು ನನ್ನ ಗದೆಯೆಂಬ ವಜ್ರಾಯುಧದ ಪೆಟ್ಟಿನಿಂದ ನುಚ್ಚುನೂರಾಗಿ ಮಾಡುತ್ತೇನೆ ಎಂದು ಪ್ರಪಂಚವೆಲ್ಲ ತಿಳಿದ ಹಾಗೆ ಪ್ರತಿಜ್ಞೆಮಾಡಿದ ನನಗೆ ಸಂತೋಷ ವನ್ನುಂಟು ಮಾಡದೆ ಕೌರವರೊಡನೆ ಸಂಧಿಮಾಡಿ ನನ್ನನ್ನು ಅವರಿಗೆ ಜೊತೆಮಾಡು ತೀರಾ? ವ|| ಎಂದು ಮದದಿಂದ ಕುರುಡಾದ ಮದ್ದಾನೆಯಂತೆ ದಿಕ್ಕುದಿಕ್ಕಿಗೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy