SearchBrowseAboutContactDonate
Page Preview
Page 422
Loading...
Download File
Download File
Page Text
________________ ನವಮಾಶ್ವಾಸಂ | ೪೧೭ ಎಳೆ ರಸೆಯೊಳಟ್ಟುದಂ ಭುಜ ಬಳದಿಂ ಮುನ್ನೆತ್ತಿದಂತೆ ವಿಷಯಾಂಬುಧಿಯೊಳ್ | ಮುಲುಗಿರ್ದಮ್ಮಯ್ಯರುಮಂ ಬಳಿಹರ ಪಿಡಿದೆತ್ತಲೆಂದು ಬಂದ್ ಬರವಂ || ಬಸಿಳ್ ಜಗತೀತ್ರಯಮುಮ ಹೊಸೆದಿಟ್ಟರಂತೆ ಕಾದ ಪೆಂಪಿನ ನಿಮ್ಮಿ | ಬಸಿಯಂ ಪೊಕ್ಕೆಮ್ಮಯ್ಯರ ನಸುರಕುಳಾಂತಕ ಕಡಂಗಿ ಕಾವುದು ಪಿರಿದೇ || ಮಲ್ಲಿಕಾಮಾಲೆ || ಎನ್ನ ನನ್ನಿಯ ಪೆಂಪು ನಿನ್ನ ಮಹತ್ವದಿಂದ ಸಂದುದಂ ತನ್ನ ಪನ್ನಗಕೇತನಂಗೆ ಧರಾವಿಭಾಗಮನಿತ್ತು ಸಂ | ಪನ್ನ ಯೋಗ ನಿಯೋಗದಿಂದಮರಣದೊಳ್ ನೆಲಸಿರ್ದುಣಲ್ ಬನ್ನವಿಲ್ಲದೆ ಬಾಳ್ವುದೇಂ ಪುಲುವಾನಸಂಗನಗಕ್ಕುಮೇ || ೧೫ - ೧೬ 02 ವ! ಅದಲ್ಲದೆಯುಮೀ ಸೂಂದುಮೊಡಂಬಡಿಲ್ಲದೆ ಗೋಗ್ರಹಣಮನ ನವಂ ಮಾಡಿ ಸುಯೋಧನನೆಂಬ ಪಾಪಕರ್ಮನ ಮಾಡಿದನುವರು ನಿಮ್ಮನುಬಲದೊಳಮರಿಕೇಸರಿಯ ಭುಜಬಲದೊಳಮಮಗಿಂಬುವಂದುದು Goll ಕಾದದೆ ಪನ್ನಗಧ್ವಜನಿಳಾತಳಮಂ ಕುಡನಾನುಮಿರ್ಪುದುಂ ಸೋದರರೆಂದು ನಾಣಿ ಸೆಡೆದಿರ್ದಪೆನಿರ್ದೊಡವಸ್ತುಭೂತನಂ | ದಾದಮ ಭೂತಳಂ ಪತಿಯ ತೇಜಮ ಕಟ್ಟಪುದಿಂತಿರ್ದ ಪ. ದೋದರ ನೀನೆ ಪೇ ಬಗೆದು ಕಜ್ಜಮನೀಗಳ ದಿವ್ಯಚಿತ್ತದಿಂ || ಆಕರ್ಷಕವಾಗಿರಲು ಅರಳಿದ ತಾವರೆಯನ್ನು ನಾಭಿಯಲ್ಲುಳ್ಳ (ಕಮಲನಾಭನಾದ) ಶ್ರೀಕೃಷ್ಣನಿಗೆ ಅನಾಯಾಸವಾಗಿ ಈ ರೀತಿ ಹೇಳಿದನು. ೧೫. ಕೃಷ್ಣಾ ನೀನು ಮೊದಲು ಪಾತಾಳದಲ್ಲಿ ಮುಳುಗಿದ್ದ ಭೂಮಿಯನ್ನು ನಿನ್ನ ಬಾಹುಬಲದಿಂದ ಎತ್ತಿದ ಹಾಗೆ ಇಂದ್ರಿಯಭೋಗವೆಂಬ ಸಮುದ್ರದಲ್ಲಿ ಮುಳುಗಿದ್ದ ನಮ್ಮದು ಜನವನ್ನೂ ಉದ್ಧಾರಮಾಡಬೇಕೆಂದೇ ಬಂದಿದ್ದೀಯೆ. ೧೬. ಕೃಷ್ಣಾ, ಮೂರು ಲೋಕಗಳನ್ನೂ ಸಂತೋಷದಿಂದ ಹೊಟ್ಟೆಯಲ್ಲಿಟ್ಟು ಕ್ರಮದಿಂದ ರಕ್ಷಿಸಿದ ಮಹಿಮೆಯುಳ್ಳ ನಿಮ್ಮ ಅಂತರಂಗವನ್ನು ಪ್ರವೇಶಿಸಿರುವ ನಮ್ಮೆದುಜನರನ್ನು ಉತ್ಸಾಹದಿಂದ ರಕ್ಷಿಸುವುದು ಹಿರಿದೇ ? ೧೭. ನನ್ನ ಸತ್ಯದ ಹಿರಿಮೆಯಿಂದಲೇ ಸಾಧ್ಯವಾಯಿತು. ಅದು ಹೇಗೆನ್ನುವೆಯೊ ದುರ್ಯೋಧನನಿಗೆ ಭೂಮಿಯ ಭಾಗವನ್ನು ಕೊಟ್ಟು ಪರಿಪೂರ್ಣವಾದ ಯೋಗಮಾರ್ಗದಲ್ಲಿ ಕಾಡಿನಲ್ಲಿ ನೆಲಸಿ ನಿರ್ವಿಘ್ನವಾಗಿ ಊಟಮಾಡುತ್ತ ಬದುಕುವುದು ಹುಳುವಂತೆ ಇರುವ ಸಾಮಾನ್ಯ ಮನುಷ್ಯನಾದ ನನಗೆ ಸಾಧ್ಯವಾಗುತ್ತದೆಯೇ, ವ|| ಅಷ್ಟೆ ಅಲ್ಲದೆ ಈ ಸಲವೂ ಒಂದು ಕಾರಣವೂ ಇಲ್ಲದೆ ಗೋಗ್ರಹಣವನ್ನು ನೆಪಮಾಡಿಕೊಂಡು ದುರ್ಯೋಧನನೆಂಬ ಪಾಪಿಯು ಏರ್ಪಡಿಸಿದ ಯುದ್ಧವು ನಿಮ್ಮ ಸಹಾಯದಿಂದಲೂ ಅರಿಕೇಸರಿಯಾದ ಅರ್ಜುನನ ಬಾಹುಬಲದಿಂದಲೂ ಪ್ರಿಯವಾಗಿ ಮುಗಿಯಿತು. ೧೮. ದುರ್ಯೋಧನನು ಯುದ್ಧಮಾಡದೆ ರಾಜ್ಯವನ್ನು ಕೊಡುವುದಿಲ್ಲ; ನಾನೂ ಒಡಹುಟ್ಟಿದವರೆಂದು ೧೮
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy